ETV Bharat / business

127 ವರ್ಷಗಳ ಇತಿಹಾಸ! ಮನೆ ಬೀಗದಿಂದ ಹಿಡಿದು ಅಂತರಿಕ್ಷದವರೆಗೂ ಹಬ್ಬಿರುವ ಗೋದ್ರೇಜ್ ಗ್ರೂಪ್‌ ಇಬ್ಭಾಗ! - Godrej Group - GODREJ GROUP

ದೇಶದ ಜನಪ್ರಿಯ ಗೋದ್ರೇಜ್ ಗ್ರೂಪ್‌ ಎರಡು ಕುಟುಂಬಗಳ ಮಧ್ಯೆ ವಿಭಜನೆಯಾಗಿದೆ.

Godrej Group
ಗೋದ್ರೇಜ್ ಗ್ರೂಪ್‌
author img

By ANI

Published : May 1, 2024, 10:06 PM IST

ಮುಂಬೈ(ಮಹಾರಾಷ್ಟ್ರ): ದೇಶದ 127 ವರ್ಷಗಳಷ್ಟು ಹಳೆಯದಾದ ಜನಪ್ರಿಯ ಗೋದ್ರೇಜ್ ಗ್ರೂಪ್‌ ಇಬ್ಭಾಗವಾಗಿದೆ. ಬೀಗಗಳಿಂದ ಹಿಡಿದು ಸಾಬೂನು, ರಿಯಲ್ ಎಸ್ಟೇಟ್‌, ಅಂತರಿಕ್ಷಯಾನದವರೆಗೂ ತನ್ನ ಉದ್ಯಮ ಪ್ರಪಂಚ ವಿಸ್ತರಿಸಿಕೊಂಡಿರುವ ಗೋದ್ರೇಜ್​ ಸಂಸ್ಥಾಪಕರ ಕುಟುಂಬವು ಇದೀಗ ಸಂಸ್ಥೆಯನ್ನು ವಿಭಜಿಸಲು ಮುಂದಾಗಿದೆ.

ವಿವಿಧ ಉದ್ಯಮ, ಉತ್ಪನ್ನಗಳ ಮೂಲಕ ಗೋದ್ರೇಜ್ ಮನೆ ಮಾತಾಗಿದ್ದು, ಮಂಗಳವಾರ ಇದರ ಸಮೂಹದ ಎರಡು ಕುಟುಂಬಗಳು ಕಂಪನಿಗಳಲ್ಲಿನ ತಮ್ಮ ಷೇರುಗಳ ಮಾಲೀಕತ್ವ ಮರುಹೊಂದಿಕೆ ಬಗ್ಗೆ ಘೋಷಿಸಿವೆ. 1987ರ ಹಿಂದೆ ಸಂಘಟಿತವಾದ ಸಂಸ್ಥೆಯಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಮತ್ತು ಗೋದ್ರೇಜ್ ಕುಟುಂಬದ ಸದಸ್ಯರ ವಿಭಿನ್ನ ದೃಷ್ಟಿಕೋನಗಳ ಮೂಲಕ ಮಾಲೀಕತ್ವವನ್ನು ಉತ್ತಮವಾಗಿ ಜೋಡಿಸಲು ಗೌರವಯುತ ಮತ್ತು ಜಾಗರೂಕ ರೀತಿಯಲ್ಲಿ ಒಪ್ಪಂದಕ್ಕೆ ಬರಲಾಗಿದೆ ಎಂದು ಕುಟುಂಬದ ಎರಡೂ ಕಡೆಯವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದು ಕಾರ್ಯತಂತ್ರದ ದಿಸೆ, ಗಮನ, ಚುರುಕುತನವನ್ನು ಗರಿಷ್ಠಗೊಳಿಸಲು ಸಹಾಯ ಮಾಡುತ್ತದೆ. ಷೇರುದಾರರಿಗೆ ಮತ್ತು ಇತರ ಎಲ್ಲ ಪಾಲುದಾರರಿಗೆ ದೀರ್ಘಾವಧಿ ಮೌಲ್ಯವನ್ನು ರಚಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಸಂಬಂಧಿತ ನಿಯಂತ್ರಣ ಅನುಮೋದನೆಗಳನ್ನು ಪಡೆದ ನಂತರ ಮರುಜೋಡಣೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಗೋದ್ರೇಜ್ ಎಂಟರ್‌ಪ್ರೈಸಸ್ ಗ್ರೂಪ್ (Godrej Enterprises Group) ಗೋದ್ರೇಜ್ ಮತ್ತು ಬಾಯ್ಸ್ (G&B) ಮತ್ತು ಅದರ ಅಂಗಸಂಸ್ಥೆಗಳನ್ನು ಒಳಗೊಂಡಿದೆ.

ಏರೋಸ್ಪೇಸ್, ವಾಯುಯಾನ, ರಕ್ಷಣೆ, ಇಂಜಿನ್‌ಗಳು ಮತ್ತು ಮೋಟಾರ್‌ಗಳು, ಶಕ್ತಿ, ಭದ್ರತೆ, ಕಟ್ಟಡ ಸಾಮಗ್ರಿಗಳು, ನಿರ್ಮಾಣ, ಹಸಿರು ಕಟ್ಟಡ ಸಲಹೆ, ಇಪಿಸಿ ಸೇವೆಗಳು, ಇಂಟ್ರಾಲಾಜಿಸ್ಟಿಕ್ಸ್, ಆರೋಗ್ಯ ರಕ್ಷಣಾ ಸಾಧನಗಳು, ಬಾಳಿಕೆ ವಸ್ತುಗಳು, ಪೀಠೋಪಕರಣಗಳು, ಒಳಾಂಗಣ ವಿನ್ಯಾಸ, ವಾಸ್ತುಶಿಲ್ಪದ ಫಿಟ್ಟಿಂಗ್‌ಗಳು, ಐಟಿ, ಸಾಫ್ಟ್‌ವೇರ್ ಮತ್ತು ಮೂಲಸೌಕರ್ಯ ಪರಿಹಾರಗಳು. ಹೀಗೆ ಬಹು ಕೈಗಾರಿಕೆಗಳಲ್ಲಿ ಗೋದ್ರೇಜ್ ಗ್ರೂಪ್ ಅಸ್ತಿತ್ವ ಹೊಂದಿದೆ. ಈ ಗುಂಪನ್ನು ಈಗ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಜಮ್ಶಿದ್ ಗೋದ್ರೇಜ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ನೈರಿಕಾ ಹೋಲ್ಕರ್ ಮತ್ತು ಅವರ ಹತ್ತಿರದ ಕುಟುಂಬಗಳು ನಿಯಂತ್ರಿಸುತ್ತವೆ.

ಮತ್ತೊಂದೆಡೆ, ಗೋದ್ರೇಜ್ ಇಂಡಸ್ಟ್ರೀಸ್, ಗೋದ್ರೇಜ್ ಗ್ರಾಹಕ ಉತ್ಪನ್ನಗಳು, ಗೋದ್ರೇಜ್ ಪ್ರಾಪರ್ಟೀಸ್, ಗೋದ್ರೇಜ್ ಅಗ್ರೋವೆಟ್ ಮತ್ತು ಅಸ್ಟೆಕ್ ಲೈಫ್ ಸೈನ್ಸಸ್ಅನ್ನು ಒಳಗೊಂಡಿರುವ ಗೋದ್ರೇಜ್ ಇಂಡಸ್ಟ್ರೀಸ್ ಗ್ರೂಪನ್ನು (Godrej Industries Group) ಅಧ್ಯಕ್ಷರಾಗಿ ನಾದಿರ್ ಗೋದ್ರೇಜ್ ಮತ್ತು ಆದಿ ಗೋದ್ರೇಜ್, ನಾದಿರ್ ಗೋದ್ರೇಜ್ ಮತ್ತು ಅವರ ನಿಕಟ ಕುಟುಂಬಗಳಿಂದ ನಿಯಂತ್ರಿಸಲಾಗುತ್ತದೆ. ಇದೇ ಗ್ರೂಪ್​ಗೆ ಪಿರೋಜ್ಶಾ ಗೋದ್ರೇಜ್ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುತ್ತಾರೆ. 2026ರ ಆಗಸ್ಟ್​ನಲ್ಲಿ ನಾದಿರ್ ಗೋದ್ರೇಜ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕುಟುಂಬಗಳು ಜಂಟಿ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

''ಭವಿಷ್ಯವನ್ನು ಮುನ್ನಡೆಸುವ ಕುಟುಂಬವು ಈಗ ಒಪ್ಪಂದಕ್ಕೆ ಬಂದಿದೆ. ನಾವು ನಮ್ಮ ಬೆಳವಣಿಗೆಯ ಆಕಾಂಕ್ಷೆಗಳನ್ನು ಕಡಿಮೆ ಸಂಕೀರ್ಣತೆಗಳೊಂದಿಗೆ ಮತ್ತಷ್ಟು ಹೆಚ್ಚಿಸಬಹುದು ಮತ್ತು ಕಾರ್ಯತಂತ್ರ, ಗ್ರಾಹಕ ಮತ್ತು ಉದಯೋನ್ಮುಖ ವ್ಯವಹಾರಗಳ ಮೇಲೆ ನಮ್ಮ ಬಲವಾದ ಬಂಡವಾಳದಾದ್ಯಂತ ಹೈಟೆಕ್ ಎಂಜಿನಿಯರಿಂಗ್ ಮತ್ತು ವಿನ್ಯಾಸ-ನೇತೃತ್ವದ ನಾವೀನ್ಯತೆಯಲ್ಲಿ ನಮ್ಮ ಪ್ರಮುಖ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸಬಹುದು'' ಎಂದು ಜಮ್ಶಿದ್ ಗೋದ್ರೇಜ್ ತಿಳಿಸಿದ್ದಾರೆ.

''ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯವನ್ನು ತುಂಬುವುದಕ್ಕೆ ಸಹಾಯ ಮಾಡಲು 1897ರಲ್ಲಿ ಗೋದ್ರೇಜ್ ಗ್ರೂಪ್​ ಸ್ಥಾಪಿಸಲಾಗಿತ್ತು. ಒಂದು ಕಾರಣಕ್ಕಾಗಿ ಹೊಸತನದ ಈ ಆಳವಾದ ಉದ್ದೇಶ-ನಂಬಿಕೆ ಮತ್ತು ಗೌರವದ ಮೌಲ್ಯಗಳು ಮತ್ತು ಟ್ರಸ್ಟಿಶಿಪ್​ನಲ್ಲಿ ವಿಶ್ವಾಸ ಮತ್ತು ಕಂಪನಿಗಳು ಬಲವಾದ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವ ಸಮುದಾಯಗಳನ್ನಾಗಿ ಮಾಡುವುದು ಹಾಗೂ 125 ವರ್ಷಗಳ ನಂತರ ನಾವು ಯಾರೆಂಬುದರ ತಳಹದಿಯನ್ನು ರೂಪಿಸುವುದನ್ನು ಮುಂದುವರಿಸಲಾಗುವುದು. ಎರಡೂ ಗ್ರೂಪ್​ಗಳ ಕೂಡ ಗೋದ್ರೇಜ್ ಬ್ರಾಂಡ್ ಅನ್ನು ಬಳಸುವುದನ್ನು ಮುಂದುವರಿಸುತ್ತವೆ'' ಎಂದು ನಾದಿರ್ ಗೋದ್ರೇಜ್ ಹೇಳಿದ್ದಾರೆ.

ಇದನ್ನೂ ಓದಿ: ಜಿಎಸ್‌ಟಿಯಲ್ಲಿ ಹೊಸ ದಾಖಲೆ! ಏಪ್ರಿಲ್​ನಲ್ಲಿ ₹2.10 ಲಕ್ಷ ಕೋಟಿ ಆದಾಯ, ಕರ್ನಾಟಕದ ಪಾಲೆಷ್ಟು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.