ETV Bharat / bharat

ಆಂಧ್ರದಲ್ಲಿ ರಂಗೇರಿದ ಎಲೆಕ್ಷನ್​: ಶ್ರೀರಾಮುಲು ಸಹೋದರಿ ಶಾಂತಾಗೆ ಜಗನ್ ಮಣೆ, ಲೋಕಸಭಾ ಟಿಕೆಟ್​ ಘೋಷಣೆ - Lok Sabha Elections

ಆಂಧ್ರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಒಟ್ಟಿಗೆ ಚುನಾವಣೆಗಳು ಜರುಗಲಿದ್ದು, ಹಿಂದೂಪುರ ಕ್ಷೇತ್ರದಲ್ಲಿ ಶ್ರೀರಾಮುಲು ಅವರ ಸಹೋದರಿ ಮಾಜಿ ಸಂಸದೆ ಜೆ. ಶಾಂತಾ ಅವರಿಗೆ ಸಿಎಂ ಜಗನ್​ ಟಿಕೆಟ್​ ಘೋಷಿಸಿದ್ದಾರೆ.

YSRCP announces candidates for 175 Assembly, 24 Lok Sabha seats
ಶ್ರೀರಾಮುಲು ಸಹೋದರಿ ಶಾಂತಾಗೆ ಜಗನ್ ಮಣೆ, ಲೋಕಸಭಾ ಟಿಕೆಟ್​ ಘೋಷಣೆ
author img

By ETV Bharat Karnataka Team

Published : Mar 16, 2024, 9:25 PM IST

ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಎಲ್ಲ 175 ವಿಧಾನಸಭಾ ಕ್ಷೇತ್ರಗಳು ಮತ್ತು 24 ಲೋಕಸಭಾ ಕ್ಷೇತ್ರಗಳಿಗೆ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಶನಿವಾರ ಅಭ್ಯರ್ಥಿಗಳನ್ನು ಘೋಷಿಸಿದೆ. ಬಹುತೇಕ ಹಾಲಿ ಸಂಸದರನ್ನು ಕೈಬಿಡಲಾಗಿದ್ದು, ಕರ್ನಾಟಕದ ಬಿಜೆಪಿ ನಾಯಕ ಮಾಜಿ ಸಚಿವ ಶ್ರೀರಾಮುಲು ಅವರ ಸಹೋದರಿ ಮಾಜಿ ಸಂಸದೆ ಜೆ. ಶಾಂತಾ ಅವರಿಗೆ ಟಿಕೆಟ್​ ಘೋಷಿಸಲಾಗಿದೆ.

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಗಳು

ಆಂಧ್ರಪ್ರದೇಶದಲ್ಲಿ ಮೇ 13ರಂದು ವಿಧಾನಸಭೆ ಮತ್ತು ಲೋಕಸಭೆಯ ಎರಡೂ ಚುನಾವಣೆಗಳು ನಡೆಯಲಿವೆ. ಕಡಪ ಜಿಲ್ಲೆಯ ಇಡುಪುಲಪಾಯದಲ್ಲಿ ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಡಿ.ವೈ.ಎಸ್.ರಾಜಶೇಖರ ರೆಡ್ಡಿ ಅವರಿಗೆ ಗೌರವ ನಮನ ಸಲ್ಲಿಸಿದ ನಂತರ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷರಾದ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದರು. ಅನಕಾಪಲ್ಲಿ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಇನ್ನೂ ಟಿಕೆಟ್​ ಪ್ರಕಟಿಸಿಲ್ಲ.

ಇದನ್ನೂ ಓದಿ: ಆಂಧ್ರ, ಒಡಿಶಾ ಸೇರಿ 4 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್: ಹಿಮಾಚಲದ ಅನರ್ಹ 'ಕೈ' ಶಾಸಕರ ಕ್ಷೇತ್ರಗಳಿಗೆ ಬೈಎಲೆಕ್ಷನ್

2019ರಲ್ಲಿ ವೈಎಸ್‌ಆರ್ ಕಾಂಗ್ರೆಸ್ 151 ವಿಧಾನಸಭೆ ಮತ್ತು 22 ಲೋಕಸಭೆ ಸ್ಥಾನಗಳಲ್ಲಿ ಗೆದ್ದಿತ್ತು. ಈ ಬಾರಿ ಟಿಡಿಪಿ - ಬಿಜೆಪಿ - ಜೆಎಸ್‌ಪಿ ಮೈತ್ರಿಕೂಟದೊಂದಿಗೆ ನೇರ ಪೈಪೋಟಿ ಎದುರಿಸುತ್ತಿದೆ. ಈ ಬಾರಿ ಕಾಂಗ್ರೆಸ್​ ಸಹ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಆಂಧ್ರ ಚುನಾವಣೆ ಮತ್ತೆ ರಂಗೇರಿದೆ. ಇಂದು ತಮ್ಮ ಪಕ್ಷದ ಹುರಿಯಾಳುಗಳನ್ನು ಜಗನ್​ ಪ್ರಕಟಿಸಿದ್ದು, ಏಳು ಹಾಲಿ ಸಂಸದರನ್ನು ಹೊರತುಪಡಿಸಿ, ಉಳಿದ ಎಲ್ಲ ಸಂಸದರಿಗೆ ಟಿಕೆಟ್​ ನಿರಾಕರಿಸಿದ್ದಾರೆ. ಆದರೆ, ಕೆಲ ಸಂಸದರಿಗೆ ವಿಧಾನಸಭೆ ಟಿಕೆಟ್​ ಕೊಟ್ಟಿದ್ದಾರೆ. ಮತ್ತೊಂದೆಡೆ, 60ಕ್ಕೂ ಹೆಚ್ಚು ಹಾಲಿ ಶಾಸಕರನ್ನೂ ಈ ಬಾರಿ ಕೈಬಿಟ್ಟಿದ್ದಾರೆ. ಇದರಲ್ಲಿ ಕೆಲವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದ್ದರೆ, ಇನ್ನು ಕೆಲವರ ವಿಧಾನಸಭಾ ಕ್ಷೇತ್ರಗಳನ್ನು ಬದಲಾವಣೆ ಮಾಡಿದ್ದಾರೆ.

ಪುಲಿವೆಂದುಲ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆ ಬಯಸುತ್ತಿರುವ ಸಿಎಂ ಜಗನ್ ಮಾಧ್ಯಮದವರೊಂದಿಗೆ ಮಾತನಾಡಿ, ವೈಎಸ್‌ಆರ್‌ ಕಾಂಗ್ರೆಸ್​ ಪಕ್ಷವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳಿಗೆ ಶೇ.50ರಷ್ಟು ಟಿಕೆಟ್‌ಗಳನ್ನು ಹಂಚಿಕೆ ಮಾಡಿದೆ. ಈ ಮೂಲಕ ಟಿಕೆಟ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿದೆ. ಆಂಧ್ರಪ್ರದೇಶ ರಾಜಕೀಯ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಬೆಳವಣಿಗೆ ಎಂದು ಹೇಳಿದರು.

ಜೆ. ಶಾಂತಾಗೆ ಲೋಕಸಭೆ ಟಿಕೆಟ್​: ವಿಧಾನಸಭೆ ಚುನಾವಣೆಗೆ ವೈಎಸ್‌ಆರ್‌ ಕಾಂಗ್ರೆಸ್​ ಎಸ್‌ಸಿ - 29, ಎಸ್‌ಟಿ -9, ಹಿಂದುಳಿದ ವರ್ಗ-48, ಸಾಮಾನ್ಯ ವರ್ಗ-91 ಮತ್ತು ಅಲ್ಪಸಂಖ್ಯಾತರಿಗೆ ಏಳು ಟಿಕೆಟ್‌ಗಳನ್ನು ಘೋಷಿಸಿದೆ. ಲೋಕಸಭೆ ಚುನಾವಣೆಗೆ 5 ಮಹಿಳೆಯರು ಸೇರಿದಂತೆ ನಾಲ್ವರು ಎಸ್‌ಸಿ, ಒಬ್ಬರು ಎಸ್‌ಟಿ, 10 ಹಿಂದುಳಿದ ವರ್ಗ, ಒಂಬತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಟಿಕೆಟ್​ ಕೊಡಲಾಗಿದೆ.

ಇದರಲ್ಲಿ ಕರ್ನಾಟಕದ ಬಳ್ಳಾರಿ ಮಾಜಿ ಸಂಸದೆ ಜೋಳದರಾಶಿ ಶಾಂತಾ ಅವರಿಗೆ ಅನಂತಪುರ ಜಿಲ್ಲೆಯ ಹಿಂದೂಪುರ ಲೋಕಸಭಾ ಕ್ಷೇತ್ರದಿಂದ ಮಣೆ ಹಾಕಲಾಗಿದೆ. ಅನಂತಪುರ ಜಿಲ್ಲೆಯ ಗುಂತಕಲ್ ಪಟ್ಟಣ ನಿವಾಸಿಯಾಗಿರುವ ಶಾಂತಾ, ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದಾರೆ. ಹಿಂದೂಪುರ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ನಾಲ್ಕೂವರೆ ಲಕ್ಷ ಮತದಾರರಿದ್ದಾರೆ. ಆಂಧ್ರದಲ್ಲಿ ವಾಲ್ಮೀಕಿ ಸಮುದಾಯವು ಹಿಂದುಳಿದ ವರ್ಗಕ್ಕೆ ಸೇರಿದೆ. 2009ರಲ್ಲಿ ಜೆ. ಶಾಂತಾ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಕಳೆದ ಜನವರಿಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ: ಶ್ರೀರಾಮುಲು ಸಹೋದರಿ ಶಾಂತಾ ವೈಎಸ್​ಆರ್​ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.