ರಾಜಸ್ಥಾನ: ಆನ್ಲೈನ್ ಗೇಮಿಂಗ್ ಗೀಳಿಗೆ ಒಳಗಾಗಿದ್ದ 22 ವರ್ಷದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ರಾಜಸ್ಮಂದ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಿಕಾವಸ್ ಗ್ರಾಮದ ರೇಗಾರ್ ಬಸ್ತಿ ನಿವಾಸಿ ಶಿವರಾಜ್ ಸಾವನ್ನಪ್ಪಿದ್ದಾನೆ. ಆನ್ಲೈನ್ ಆಟದ ಚಟಕ್ಕೆ ಒಳಗಾಗಿದ್ದ ಯುವಕ, ತನ್ನ ಉಳಿತಾಯದ ಹಣವನ್ನೆಲ್ಲ ಇದಕ್ಕೆ ಸುರಿದಿದ್ದಾನೆ. ಅಲ್ಲದೇ, ಪೋಷಕರ ಅಕೌಂಟ್ನಿಂದಲೂ 70 ಸಾವಿರ ಹಣ ಡ್ರಾ ಮಾಡಿ, ಅದನ್ನೂ ಗೇಮಿಂಗ್ಗೆ ಬಳಕೆ ಮಾಡಿದ್ದ. ಆದರೆ, ಆಟದಲ್ಲಿ ಸೋತ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಮೆಟ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಭುರ್ಸಿಂಗ್, ಶಾಪ್‌ವೊಂದರಲ್ಲಿ ಶಿವರಾಜ್ ಕೆಲಸ ಮಾಡುತ್ತಿದ್ದ. ಆನ್ಲೈನ್ ಗೇಮಿಂಗ್ ಚಟಕ್ಕೆ ಒಳಗಾಗಿದ್ದ. ತನ್ನೆಲ್ಲಾ ಉಳಿತಾಯದ ಹಣವನ್ನು ಗೇಮ್ಸ್ಗೆ ವ್ಯಯಿಸಿದ್ದ. ಪೋಷಕರ ಉಳಿತಾಯ ಖಾತೆಯಿಂದ 70 ಸಾವಿರ ಹಣ ಡ್ರಾ ಮಾಡಿ ಅದನ್ನೂ ಆನ್ಲೈನ್ ಗೇಮಿಂಗ್ಗೆ ಬಳಕೆ ಮಾಡಿದ್ದ. ಇದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ತೀವ್ರವಾಗಿ ಮುಜುಗರಗೊಂಡಿದ್ದ" ಎಂದು ಮಾಹಿತಿ ನೀಡಿದರು.
ಆತ್ಮಹತ್ಯೆ ಪರಿಹಾರವಲ್ಲ: ಆತ್ಮಹತ್ಯೆಯಂತಹ ಯೋಚನೆ ಹೊಂದಿದಲ್ಲಿ ಅಥವಾ ಈ ವಿಚಾರದಲ್ಲಿ ಸ್ನೇಹಿತರ ಬಗ್ಗೆ ಚಿಂತೆಗೆ ಒಳಗಾಗಿದ್ದರೆ ಅಥವಾ ಯಾವುದೇ ಭಾವನಾತ್ಮಕ ಬೆಂಬಲ ಬೇಕೆಂದು ಅನಿಸಿದ್ದಲ್ಲಿ, ನಿಮಗೆ ಸಾಂತ್ವನ ನೀಡಲು ಸದಾ ಒಬ್ಬರಿದ್ದಾರೆ ಎಂಬುದನ್ನು ಮರೆಯಬೇಡಿ. ಇದಕ್ಕಾಗಿ ಆರೋಗ್ಯ ಇಲಾಖೆಯ ಟೆಲಿ ಮಾನಸ್ ಟೋಲ್ ಫ್ರಿ ಸಂಖ್ಯೆ 14416 ಅಥವಾ 1-800-891-4416 ಕರೆ ಮಾಡಬಹುದು. ನಿಮ್ಮದೇ ಭಾಷೆಯಲ್ಲಿ ಅವರು ವ್ಯವಹರಿಸುತ್ತಾರೆ.
ಇದನ್ನೂ ಓದಿ: ಅಧಿಕಾರ ದುರ್ಬಳಕೆ ಆರೋಪ: ಪ್ರೊಬೇಷನರಿ ಅವಧಿಯಲ್ಲೇ ಐಎಎಸ್ ಅಧಿಕಾರಿ ಎತ್ತಂಗಡಿ