ETV Bharat / bharat

ದೆಹಲಿ ಟು ಲಡಾಖ್​​ಗೆ ಬಸ್​ ಸಂಚಾರ: 981 ಕಿಮೀ ದೂರ, 33 ಗಂಟೆಗಳ ಪ್ರಯಾಣಕ್ಕೆ ಇಷ್ಟೇ ದರ! - Delhi To Ladakh Bus Service - DELHI TO LADAKH BUS SERVICE

ದೆಹಲಿಯಿಂದ ಹಿಮಾಚಲ ಪ್ರದೇಶದ ಮೂಲಕ ಲಡಾಖ್​ಗೆ ಬಸ್​ ಪ್ರಯಾಣ ಆರಂಭವಾಗಿದೆ. 981 ಕಿಮೀ ದೂರದ ಈ ಪ್ರಯಾಣ 33 ಗಂಟೆಗಳಷ್ಟು ಸಾಗಲಿದೆ.

ದೆಹಲಿ ಟು ಲಡಾಖ್​​ಗೆ ಬಸ್​ ಸಂಚಾರ ಆರಂಭ
ದೆಹಲಿಯಿಂದ ಲಡಾಖ್​​ಗೆ ಬಸ್​ ಸಂಚಾರ ಆರಂಭ (ETV Bharat)
author img

By ETV Bharat Karnataka Team

Published : Jun 11, 2024, 5:48 PM IST

ಧರ್ಮಶಾಲಾ(ಹಿಮಾಚಲ ಪ್ರದೇಶ): 'ಚಂದ್ರ ಮುರಿದು ಬಿದ್ದ ತಾಣ' ಎಂದು ಬಣ್ಣಿಸಲಾಗುವ ಲಡಾಖ್​ ಪ್ರವಾಸಿಗರ ಸ್ವರ್ಗ. ದೇಶದ ಉದ್ದಗಲದಿಂದ ಜನರು ಬೈಕ್​ ರೈಡ್​ ಮೂಲಕ ಇಲ್ಲಿಗೆ ಬರುತ್ತಾರೆ. ಹಿಮಾಲಯದ ಗಿರಿ ಶಿಖರಗಳಿಂದ ಕೂಡಿದ ವಿಶ್ವದ ಅತೀ ಎತ್ತರದ ಪ್ರಸ್ಥಭೂಮಿಗೆ ಇದೀಗ ಬಸ್​ ಸಂಚಾರವೂ ಆರಂಭವಾಗಿದೆ.

ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯು (ಹೆಚ್​ಆರ್​ಟಿಸಿ) ಈ ಸೇವೆಯನ್ನು ಆರಂಭಿಸಿದೆ. ವಿಶ್ವದ ಎತ್ತರದ ಪ್ರದೇಶ ಲೇಹ್​​ಗೆ ದೆಹಲಿಯಿಂದ ಮನಾಲಿ ಮೂಲಕ ಬಸ್​ ಸಂಚರಿಸಲಿದೆ. ಜೂನ್​ 11ರಿಂದ ಇದು ಆರಂಭವಾಗಿದೆ. ಎರಡೂ ಪ್ರದೇಶಗಳ ನಡುವಿನ ದೂರ 981 ಕಿ.ಮೀ. ಆಗಿದೆ. ಸುಮಾರು 33 ತಾಸು ಪ್ರಯಾಣಕ್ಕೆ ತಗಲುವ ಸಮಯ. ಇಂದು ಪ್ರವಾಸಿಗರನ್ನು ಹೊತ್ತ ಮೊದಲ ಬಸ್​ ಸಂಚಾರ ಶುರು ಮಾಡಿತು.

ಪ್ರಯಾಣ ದರದ ಮಾಹಿತಿ: ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಹೆಚ್​ಆರ್​ಟಿಸಿ ಅಧಿಕಾರಿಗಳು, ದೆಹಲಿಯಿಂದ ಮನಾಲಿ ಮೂಲಕ ಲೇಹ್​ಗೆ ಬಸ್​ ಸಂಚಾರ ಇರಲಿದೆ. ಇದು ದೇಶದ ನಾಲ್ಕು ದೊಡ್ಡ ಪಾಸ್​ಗಳ (ಟನಲ್​) ಮೂಲಕ ಸಾಗುತ್ತದೆ. ಬರಾಲಾಚಾ ಪಾಸ್ (16,020 ಅಡಿ), ನಕಿಲ್ಲಾ ಪಾಸ್, ಲಾಚುಂಗ್ಲಾ ಪಾಸ್ (16,620 ಅಡಿ) ಮತ್ತು ತಂಗ್ಲಾಂಗ್ಲಾ ಪಾಸ್ (17,480 ಅಡಿ) ದಾಟಿ ಹಿಮಾಚಲದ ಮೂಲಕ ಲಡಾಖ್ ತಲುಪಲಿದೆ. ಈ ಅದ್ಭುತ ಪ್ರಯಾಣಕ್ಕಾಗಿ ಪ್ರವಾಸಿಗರು ಕೇವಲ 1,627 ರೂಪಾಯಿ ಪಾವತಿಸಬೇಕಾಗುತ್ತದೆ. ದೆಹಲಿಯಿಂದ ಲೇಹ್​ವರೆಗಿನ ಮಾರ್ಗದಲ್ಲಿ ಪ್ರಯಾಣವನ್ನು ಆನಂದಿಸಬಹುದು ಎಂದರು.

ದೆಹಲಿ ಟು ಲೇಹ್ ಪ್ರಯಾಣ: ಲಡಾಖ್​​ಗೆ ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ಕಾರಣ ಜೂನ್ 11ರಿಂದ ದೆಹಲಿ ಟು ಲೇಹ್ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಹಿಮಾಚಲದ ಕೀಲಾಂಗ್‌ನಿಂದ ಲೇಹ್‌ಗೆ ಬಸ್​ ಪ್ರಯಾಣ ಆರಂಭಿಸಿದೆ. ಕಳೆದ ಬಾರಿ ಈ ಸೇವೆಯನ್ನು ಜೂನ್ 8ರಂದು ಪ್ರಾರಂಭಿಸಲಾಗಿತ್ತು. ದೇಶದ ನಾಲ್ಕು ದೊಡ್ಡ ಪಾಸ್‌ಗಳ ಮೂಲಕ 981 ಕಿಲೋಮೀಟರ್ ದೂರ ಪ್ರಯಾಣ ಇದಾಗಿದೆ. ಈ ಬಸ್​ನಿಂದ ಪ್ರವಾಸಿಗರು ಸೇರಿದಂತೆ ಲೇಹ್​ಗೆ ತೆರಳುವವರಿಗೂ ಅನುಕೂಲವಾಗಲಿದೆ ಎಂದಿದ್ದಾರೆ.

ಪ್ರಯಾಣ ಮಾರ್ಗದಲ್ಲಿ ಬದಲು: ದೆಹಲಿ-ಮನಾಲಿ-ಲೇಹ್-ಲಡಾಖ್ ಬಸ್ ಸೇವೆಯ ಮಾರ್ಗ ಮತ್ತು ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ದೆಹಲಿಯಿಂದ ಹೊರಟ ಬಸ್ ಅಂಬಾಲಾ, ಚಂಡೀಗಢ, ಕಿರಾತ್‌ಪುರ, ಸುಂದರ್‌ನಗರ, ಮಂಡಿ, ಕುಲು, ಮನಾಲಿ, ಅಟಲ್ ಟನಲ್, ಕೀಲಾಂಗ್, ಬರ್ಲಾಚಾ ಪಾಸ್, ತಂಗ್ಲಾಂಗ್ಲಾ ಪಾಸ್, ಲಾಚುಂಗ್ ಪಾಸ್ ಮೂಲಕ ಲೇಹ್​ನಿಂದ ಲಡಾಖ್​ಗೆ ತಲುಪಲಿದೆ. ದೆಹಲಿಯಿಂದ ಮಧ್ಯಾಹ್ನ 12:15 ಕ್ಕೆ ಹೊರಡಲಿದೆ. ಚಂಡೀಗಢದಿಂದ ಸಂಜೆ 6:10, ಸುಂದರನಗರಕ್ಕೆ ರಾತ್ರಿ 10 ಗಂಟೆಗೆ ತಲುಪಲಿದೆ. ಅಲ್ಲಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಮನಾಲಿಗೆ ಬರಲಿದೆ. ಮನಾಲಿಯಿಂದ ಹೊರಟು ಬೆಳಿಗ್ಗೆ 5 ಗಂಟೆಗೆ ಕೀಲಾಂಗ್​ಗೆ ಬಂದು ಬಸ್ ಮತ್ತು ಸಿಬ್ಬಂದಿಯನ್ನು ಬದಲಾಯಿಸಿದ ಬಳಿಕ 5:30ಕ್ಕೆ ಲೇಹ್‌ಗೆ ಹೊರಡಲಿದೆ.

ಇದನ್ನೂ ಓದಿ: ಲಡಾಖ್​ನಲ್ಲಿ ಬೆಳೆಯಲಾಗುವ ಸೀ ಬಕ್‌ಥಾರ್ನ್ ಹಣ್ಣಿಗೆ ಲಭಿಸಿದ ಜಿಐ ಟ್ಯಾಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.