ಹೈದರಾಬಾದ್: ವಿಶ್ವ ಆನೆ ದಿನವನ್ನು ಆಗಸ್ಟ್ 12 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಥೈಲ್ಯಾಂಡ್‌ನ ಆನೆ ಮರುಪರಿಚಯ ಪ್ರತಿಷ್ಠಾನ ಮತ್ತು ಕೆನಡಾದ ಚಲನಚಿತ್ರ ನಿರ್ಮಾಪಕ ಪೆಟ್ರಿಸಿಯಾ ಸಿಮ್ಸ್ ಅವರು 2011ರಲ್ಲಿ ವಿಶ್ವ ಆನೆ ದಿನವನ್ನು ಪ್ರಾರಂಭಿಸಿದರು. ಇದನ್ನು ಆಗಸ್ಟ್ 12, 2012 ರಂದು ಮೊದಲ ಬಾರಿಗೆ ಆಚರಿಸಲಾಯಿತು.
ಸ್ಟಾರ್ ಟ್ರೆಕ್ ಐಕಾನ್ ಮತ್ತು ಚಲನಚಿತ್ರ ತಾರೆ ವಿಲಿಯಂ ಶಾಟ್ನರ್, ಬಂಧಿತ ಏಷ್ಯನ್ ಆನೆಗಳನ್ನು ಕಾಡಿಗೆ ಮರುಪರಿಚಯಿಸುವ ಬಗ್ಗೆ 30 ನಿಮಿಷಗಳ ಆಕರ್ಷಕ ಸಾಕ್ಷ್ಯಚಿತ್ರ 'ರಿಟರ್ನ್ ಟು ದಿ ಫಾರೆಸ್ಟ್' ಅನ್ನು ನಿರ್ಮಿಸಿದರು. ಅವರು ಈ ಉಪಕ್ರಮವನ್ನು ಉದಾರವಾಗಿ ಬೆಂಬಲಿಸಿದರು. ಪ್ರಪಂಚದಾದ್ಯಂತದ ಜನರು ಮತ್ತು ಸಂಸ್ಕೃತಿಗಳಲ್ಲಿ ಈ ಭವ್ಯವಾದ ಪ್ರಾಣಿಗಳು ಎದುರಿಸುತ್ತಿರುವ ಸಂಕಟದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ಆನೆ ದಿನದ ಮಹತ್ವ : ಆನೆಗಳು ಎದುರಿಸುತ್ತಿರುವ ಬೆದರಿಕೆಗಳನ್ನು ಪರಿಹರಿಸಲು ಜಾಗತಿಕವಾಗಿ ಜನರು ಮತ್ತು ಸಂಸ್ಥೆಗಳನ್ನು ಒಟ್ಟುಗೂಡಿಸುವುದು ಈ ದಿನದ ಉದ್ದೇಶವಾಗಿದೆ. ಇದರ ಒಳಗೊಳ್ಳುವ ದೃಷ್ಟಿಕೋನವು ವಿವಿಧ ಗುಂಪುಗಳು ಮತ್ತು ವ್ಯಕ್ತಿಗಳಿಗೆ ಅದರ ಆಶ್ರಯದಲ್ಲಿ ಅಭಿಯಾನಗಳನ್ನು ಪ್ರಾರಂಭಿಸಲು ಅವಕಾಶ ನೀಡುವ ಮೂಲಕ ಗಡಿಗಳಾದ್ಯಂತ ಸಹಕಾರವನ್ನು ಪ್ರೋತ್ಸಾಹಿಸುತ್ತದೆ.
ಈ ಉಪಕ್ರಮವು ಎಲ್ಲರಿಗೂ ಜಾಗತಿಕ ಮಟ್ಟದಲ್ಲಿ ಧ್ವನಿಯನ್ನು ನೀಡುತ್ತದೆ. ಆನೆಗಳು, ಇತರ ಪ್ರಾಣಿಗಳು ಮತ್ತು ಅವುಗಳ ಆವಾಸಸ್ಥಾನಗಳ ಭವಿಷ್ಯವನ್ನು ರಕ್ಷಿಸುವ ಸಂರಕ್ಷಣಾ ಕಾರ್ಯತಂತ್ರಗಳನ್ನು ರಚಿಸಲು ಮತ್ತು ಬೆಂಬಲಿಸಲು ನಾಗರಿಕರು, ಶಾಸಕರು, ನೀತಿ ನಿರೂಪಕರು ಮತ್ತು ಸರ್ಕಾರಗಳನ್ನು ಸಕ್ರಿಯಗೊಳಿಸುತ್ತದೆ.
ವಿಶ್ವ ಆನೆ ದಿನದ ಇತಿಹಾಸ : ವಿಶ್ವ ಆನೆ ದಿನವನ್ನು 2012ರಲ್ಲಿ ಕೆನಡಾದ ಪೆಟ್ರೀಷಿಯಾ ಸಿಮ್ಸ್ ಮತ್ತು ಥೈಲ್ಯಾಂಡ್‌ನ ಎಲಿಫೆಂಟ್ ರೀ ಇಂಟ್ರಡಕ್ಷನ್ ಫೌಂಡೇಶನ್, ಹೆಚ್ ಎಂ ರಾಣಿ ಸಿರಿಕಿಟ್ ಅವರ ನಿರ್ದೇಶನದಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ, ಪೆಟ್ರೀಷಿಯಾ ಸಿಮ್ಸ್ ಈ ಯೋಜನೆಯ ಉಸ್ತುವಾರಿ ವಹಿಸಿದ್ದಾರೆ. ವಿಶ್ವ ಆನೆ ದಿನವು ವಿಶ್ವಾದ್ಯಂತ 100 ಆನೆ ಸಂರಕ್ಷಣಾ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಮೂಲಕ ವಿಶ್ವದಾದ್ಯಂತ ಅಸಂಖ್ಯಾತ ಜನರ ಜೀವನದ ಮೇಲೆ ಪ್ರಭಾವ ಬೀರಿದೆ. ಈ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಯು ಆನೆ ಸಂರಕ್ಷಣೆಯನ್ನು ಬೆಂಬಲಿಸುವ ಜನರ ನಿಜವಾದ ಕಾಳಜಿ ಮತ್ತು ಬದ್ಧತೆಯನ್ನು ತೋರಿಸುತ್ತದೆ.
ದಂತಕ್ಕಾಗಿ ಆನೆಗಳ ಬೇಟೆ : ಕಳ್ಳ ಬೇಟೆಗಾರರು ದಂತಗಳಿಗಾಗಿ ಪ್ರತಿ ವರ್ಷ ಸುಮಾರು 20,000 ಆನೆಗಳನ್ನು ಕೊಲ್ಲುತ್ತಾರೆ ಎಂದು ಅಂದಾಜಿಸಲಾಗಿದೆ. ಈ ಮಟ್ಟದ ಹತ್ಯೆಯು ಆನೆ ತಳಿಯನ್ನು ಕಡಿಮೆಗೊಳಿಸುತ್ತಿದೆ. ಕಾಡಿನಲ್ಲಿ ಆನೆಗಳು ಹೆಚ್ಚಾಗಿ ಚಿಕ್ಕ ದಂತಗಳೊಂದಿಗೆ ಅಥವಾ ದಂತರಹಿತವಾಗಿ ಜನಿಸುತ್ತವೆ.
ಆನೆಗಳು ಏನನ್ನು ತಿನ್ನುತ್ತವೆ ?: ಆನೆಗಳು ಸಸ್ಯಹಾರಿಗಳು. ಅವು ಒಂದೇ ದಿನದಲ್ಲಿ 150-170 ಕೆಜಿ ಸಸ್ಯವರ್ಗವನ್ನು ತಿನ್ನುತ್ತವೆ. ಅವರು ಸಾಮಾನ್ಯವಾಗಿ ಸಣ್ಣ ಸಸ್ಯಗಳು, ಹುಲ್ಲುಗಳು, ಪೊದೆಗಳು, ಮರದ ತೊಗಟೆಗಳು, ಕೊಂಬೆಗಳು, ಹಣ್ಣುಗಳು ಮತ್ತು ಬೇರುಗಳನ್ನು ತಿನ್ನುತ್ತವೆ.
ದಿನಕ್ಕೆ 16-18 ಗಂಟೆಗಳ ಕಾಲ ತಿನ್ನುತ್ತವೆ. ಅವುಗಳ ನೆಚ್ಚಿನ ಆಹಾರದ ಮೂಲವೆಂದರೆ ಮರದ ತೊಗಟೆ. ಇವು ಕ್ಯಾಲ್ಸಿಯಂ ಒಳಗೊಂಡಿರುತ್ತದೆ. ಅಲ್ಲದೇ ಆನೆಗಳ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ.
ಇದನ್ನೂ ಓದಿ : ವಿಶ್ವ ಆನೆ ದಿನವಾದ ಆ.12 ರಂದು ಅಂತಾರಾಷ್ಟ್ರೀಯ ಸಮ್ಮೇಳನ: ಸಂಶೋಧನಾ ಲೇಖನ ಆಹ್ವಾನ - International conference