ಹೈದರಾಬಾದ್: ಹೈಟೆಕ್ ವ್ಯವಸ್ಥೆಯಲ್ಲಿ ವ್ಯವಸ್ಥಿತ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಪ್ರಮುಖರು ಹಾಗೂ ಓರ್ವ ಯುವಕನನ್ನು ಬಂಧಿಸಲಾಗಿದೆ. ಜೊತೆಗೆ ಆರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ವೇಶ್ಯಾಗೃಹದ ನಿರ್ವಾಹಕಿಯ ವಿರುದ್ಧ ಈ ಹಿಂದೆ 16 ಪ್ರಕರಣಗಳು ದಾಖಲಾಗಿದ್ದವು ಎಂದು ಡಿಸಿಪಿ ಸಾಧನಾ ರಶ್ಮಿ ಪೆರುಮಾಳ್ ಗುರುವಾರ ಮಾಧ್ಯಮಗಳಿಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.
ಗ್ಯಾಂಗ್‌ನ ಮಾಸ್ಟರ್ ಮೈಂಡ್ ಹಾಗೂ ಹತ್ತು ಬೇರೆ ಬೇರೆ ಹೆಸರುಗಳು: ಆಕೆಗೆ 10 ಹತ್ತು ಬೇರೆ ಹೆಸರುಗಳಿರುವುದು ತನಿಖೆಯಿಂದೆ ತಿಳಿದಿದೆ. ವಿಜಯವಾಡ ಮೂಲದ ಕೆ. ಸೂರ್ಯಕುಮಾರಿ (38) ಈ ವೇಶ್ಯಾವಾಟಿಕೆ ಗ್ಯಾಂಗ್‌ನ ಮಾಸ್ಟರ್ ಮೈಂಡ್. ಹತ್ತು ಬೇರೆ ಬೇರೆ ಹೆಸರುಗಳನ್ನು ಹೊಂದಿರುವ ಇವರು ನಗರದ ಮಧುರಾ ನಗರದಲ್ಲಿ ನೆಲೆಸಿದ್ದಾರೆ. ತಿರುಪತಿ ಮೂಲದ ಕೆ.ವಿಜಯಶೇಖರ್ ರೆಡ್ಡಿ (49) ಅದೇ ಪ್ರದೇಶದಲ್ಲೇ ವಾಸವಾಗಿದ್ದ. ಇಬ್ಬರೂ ನಗರದಲ್ಲಿ ವೇಶ್ಯಾಗೃಹಗಳನ್ನು ನಡೆಸುತ್ತಿದ್ದರು. 2020ರಲ್ಲಿ ಅವರನ್ನು ಪಿಡಿ ಕಾಯ್ದೆಯಡಿ ಜೈಲಿಗೆ ಕಳುಹಿಸಲಾಗಿತ್ತು. ಆದ್ರೂ ಕೂಡಾ ಅವರು ಅದೇ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು.
ಯುವತಿಯರನ್ನು ವೇಶ್ಯಾವಾಟಿಕೆ ದೂಡಿದ ಆರೋಪಿಗಳು: ಸೂರ್ಯಕುಮಾರಿ ಮತ್ತು ವಿಜಯ ಶೇಖರ್ ರೆಡ್ಡಿ ಆರಂಭದಲ್ಲಿ ಯುವತಿಯರಿಗೆ ಹಣ ಮತ್ತು ಉದ್ಯೋಗ ಕೊಡುವುದಾಗಿ ಹುಸಿ ಭರವಸೆ ನೀಡುತ್ತಾರೆ. ಎಪಿ, ಪಶ್ಚಿಮ ಬಂಗಾಳ, ತ್ರಿಪುರಾ, ಮತ್ತು ಇತರ ರಾಜ್ಯಗಳಿಂದ ಯುವತಿಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ಕೇಂದ್ರಗಳಿಗೆ ಕರೆತರುತ್ತಾರೆ. ಶೇಖರ್ ರೆಡ್ಡಿ ಆ್ಯಪ್‌ನಲ್ಲಿ ಗ್ರಾಹಕರ ಡೇಟಾವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ. ಅದನ್ನು ಆಧರಿಸಿ ಯುವತಿಯರನ್ನು ಗ್ರಾಹಕರು ಹೇಳಿದ ಪ್ರದೇಶಗಳಿಗೆ, ಹೋಟೆಲ್ಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಸೂರ್ಯಕುಮಾರಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಗ್ರಾಹಕರಿಂದ ಹಣ ಪಡೆಯುತ್ತಿದ್ದಳು.
ಗ್ಯಾಂಗ್‌ನ ಮಾಸ್ಟರ್ ಮೈಂಡ್ ಅರೆಸ್ಟ್: ಪಶ್ಚಿಮ ಮಂಡಲ ಕಾರ್ಯಪಡೆ ಪೊಲೀಸರು ಗುರುವಾರ ಪಂಜಗುಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ ಹೋಟೆಲ್‌ನಲ್ಲಿ ತಪಾಸಣೆ ನಡೆಸಿದಾಗ ಗಂಡಿಪೇಟೆಯ ಕಿಲಾರು ಕೀರ್ತಿ ತೇಜ (29) ಎಂಬ ಯುವತಿಯನ್ನು ಬಂಧಿಸಲಾಗಿದೆ. ಅವರು ನೀಡಿದ ಮಾಹಿತಿ ಮೇರೆಗೆ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಸೂರ್ಯಕುಮಾರಿ, ಸಹಚರ ಶೇಖರ್ ರೆಡ್ಡಿ, ಪಶ್ಚಿಮ ಬಂಗಾಳ ನಿವಾಸಿ ಅರ್ಕೋಜಿತ್ ಮುಖರ್ಜಿ (30), ತಿರುಪತಿಯ ವೇಣುಗೋಪಾಲ್ ಬಾಲಾಜಿ (50) ಅವರನ್ನು ಬಂಧಿಸಿ ಪಂಜಗುಟ್ಟ ಪೊಲೀಸರಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ; ಮೂವರು ಸೆರೆ, 7 ವಿದೇಶಿ ಮಹಿಳೆಯರ ರಕ್ಷಣೆ