ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಂಭೀರ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಆರೋಪಿ ವಕೀಲರು ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ಕೋರ್ಟ್ ಚೇಂಬರ್‌ಗೆ ಕರೆಸಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಷಯ ಯಾರಿಗಾದರೂ ಹೇಳಿದರೆ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಈ ಕೃತ್ಯ ನಡೆಸಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ವಕೀಲನಿಂದ ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಆರೋಪ: ತನಗೆ ಕೆಲಸ ಕೊಡಿಸುವ ನೆಪದಲ್ಲಿ ತೀಸ್ ಹಜಾರಿ ನ್ಯಾಯಾಲಯದ ವಕೀಲರು, ತನ್ನನ್ನು ಕೋರ್ಟ್ನ ತಮ್ಮ ಕೊಠಡಿಗೆ ಕರೆದು ಅತ್ಯಾಚಾರವೆಸಗಿದ್ದಾರೆ ಎಂದು 21 ವರ್ಷದ ಯುವತಿಯೊಬ್ಬಳು ಆರೋಪಿಸಿದ್ದಾಳೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಜುಲೈ 27 ರಂದು ತನಗೆ ಕೆಲಸ ಕೊಡಿಸುವ ನೆಪದಲ್ಲಿ ಕರೆ ಮಾಡಿ ತನ್ನ ಮೇಲೆ ಈ ಕೃತ್ಯ ಎಸೆಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ 1500 ರೂ ಕೊಟ್ಟೆ ಹೊರಗೆ ಹೋಗುವಂತೆ ತಾಕೀತು?: ಈ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಕೀಲರು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯ ನಂತರ ಆರೋಪಿ ವಕೀಲರು ತನಗೆ 1,500 ರೂಪಾಯಿ ನೀಡಿ ಹೊರಹೋಗುವಂತೆ ಹೇಳಿದ್ದರು ಎಂದು ಮಹಿಳೆ ತಾನು ನೀಡಿರುವ ದೂರಿನಲ್ಲಿ ದಾಖಲಿಸಿದ್ದಾರೆ. ಯುವತಿ ಮನೆಗೆ ಹಿಂದಿರುಗಿದ ಬಳಿಕ ಘಟನೆಯ ಬಗ್ಗೆ ತನ್ನ ಚಿಕ್ಕಮ್ಮನಿಗೆ ವಿವರಿಸಿದ್ದಾಳೆ. ಆ ಬಳಿಕ ಯುವತಿ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತು ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:ದೆಹಲಿ ಅಬಕಾರಿ ಕೇಸ್: ಆಗಸ್ಟ್ 20ರ ವರೆಗೆ ಸಿಎಂ ಕೇಜ್ರಿವಾಲ್ ಬಂಧನ ವಿಸ್ತರಣೆ - Arvind Kejriwal