ETV Bharat / bharat

ಎನ್​​ಸಿ-ಕಾಂಗ್ರೆಸ್​ ಸರ್ಕಾರದ 'ಏಕೈಕ ಹಿಂದು ಶಾಸಕ'ನಿಗೆ ಡಿಸಿಎಂ ಪಟ್ಟ: ಯಾರು ಈ ಸುರೀಂದರ್​​ ಚೌಧರಿ? - JK NEW CM

ಜಮ್ಮು- ಕಾಶ್ಮೀರದ ಡಿಸಿಎಂ ಆಗಿ ಸುರೀಂದರ್ ಕುಮಾರ್ ಚೌಧರಿ ಅವರು ಪ್ರಮಾಣ ಸ್ವೀಕರಿಸಿದ್ದಾರೆ. ಅವರ ಕುಟುಂಬವು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿತ್ತು ಎಂಬುದು ವಿಶೇಷ.

ಡಿಸಿಎಂ ಸುರೀಂದರ್​​ ಚೌಧರಿ
ಸಿಎಂ ಒಮರ್​ ಅಬ್ದುಲ್ಲಾ, ಡಿಸಿಎಂ ಸುರೀಂದರ್​​ ಚೌಧರಿ (ANI)
author img

By ETV Bharat Karnataka Team

Published : Oct 16, 2024, 8:11 PM IST

ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಇಂದು (ಬುಧವಾರ) ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನ್ಯಾಷನಲ್​ ಕಾನ್ಫರೆನ್ಸ್ (ಎನ್‌ಸಿ)​ ಮತ್ತು ಕಾಂಗ್ರೆಸ್​ ಮೈತ್ರಿ ಸರ್ಕಾರದ ಸಿಎಂ ಆಗಿ ಒಮರ್​ ಅಬ್ದುಲ್ಲಾ ಪ್ರಮಾಣವಚನ ಸ್ವೀಕರಿಸಿದರು. ಅವರ ಸಂಪುಟದಲ್ಲಿ ಓರ್ವ ಡಿಸಿಎಂ, ನಾಲ್ವರು ಸಚಿವರು ಸೇರಿಕೊಂಡಿದ್ದಾರೆ.

ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರದಲ್ಲಿ ಸುರೀಂದರ್ ಕುಮಾರ್ ಚೌಧರಿ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಸುರಿಂದರ್ ಚೌಧರಿ ಅವರು ಹಿಂದು ಸಮುದಾಯದ ಪ್ರಬಲ ನಾಯಕ. ವಿಶೇಷವೆಂದರೆ, ನ್ಯಾಷನಲ್​​ ಕಾನ್ಫರೆನ್ಸ್​ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಏಕೈಕ ಹಿಂದು ಶಾಸಕ. ಕಾಂಗ್ರೆಸ್​ ಮತ್ತು ಎನ್​ಸಿ ಮೈತ್ರಿಯ ಏಕೈಕ ಹಿಂದು ಶಾಸಕರೂ ಹೌದು.

ಬಿಜೆಪಿ ಮುಖ್ಯಸ್ಥನ ಸೋಲಿಸಿದ್ದಕ್ಕೆ ಡಿಸಿಎಂ ಪಟ್ಟ: ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟದ ಏಕೈಕ ಹಿಂದೂ ಶಾಸಕರಾಗಿರುವ ಸುರೀಂದರ್ ಚೌಧರಿ ಅವರು ಬಿಜೆಪಿ ಅಧ್ಯಕ್ಷರಾಗಿರುವ ರವೀಂದರ್ ರೈನಾ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು. ಈ ಸಾಧನೆಯೇ ಅವರನ್ನು ಉಪಮುಖ್ಯಮಂತ್ರಿ ಪಟ್ಟಕ್ಕೆ ತಂದು ಕೂರಿಸಿದೆ.

ನೌಶೇರಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸುರೀಂದರ್ ಕುಮಾರ್ ಚೌಧರಿ ಅವರು ಈಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಮ್ಮು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಅವರನ್ನು 7,819 ಮತಗಳ ಅಂತರದಿಂದ ಸೋಲಿಸಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಸುರೀಂದರ್ ಚೌಧರಿ ಪಿಡಿಪಿಯಿಂದ ಸ್ಪರ್ಧಿಸಿದಾಗ ಇದೇ ರವೀಂದರ್ ರೈನಾ ಅವರ ವಿರುದ್ಧ 9,000ಕ್ಕೂ ಹೆಚ್ಚು ಮತಗಳಿಂದ ಸೋಲು ಕಂಡಿದ್ದರು.

ಚೌಧರಿ ರಾಜಕೀಯ ಹಾದಿ: ಜಾಟ್ ಸಮುದಾಯಕ್ಕೆ ಸೇರಿದ ಸುರೀಂದರ್ ಚೌಧರಿ ಅವರು ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಹಿಂದೂ ನಾಯಕರಲ್ಲಿ ಒಬ್ಬರು. ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಆಪ್ತರಾಗಿದ್ದರು. 2014ರ ಚುನಾವಣೆಯಲ್ಲಿ ಸೋತ ಬಳಿಕ ಅವರನ್ನು ಪಕ್ಷ 2015ರಲ್ಲಿ ಎಂಎಲ್‌ಸಿಯನ್ನಾಗಿ ನಾಮನಿರ್ದೇಶನ ಮಾಡಿತ್ತು.

ಪಿಡಿಪಿಯ ಪ್ರಮುಖ ನಾಯಕರಾಗಿದ್ದ ಚೌಧರಿ ಅವರು ಪಕ್ಷದ ನೀತಿ ನಿರೂಪಣೆಗಳಿಂದ ಬೇಸರಗೊಂಡಿದ್ದರು. ಇದರಿಂದ 2021ರಲ್ಲಿ ಪಿಡಿಪಿಗೆ ರಾಜೀನಾಮೆ ನೀಡಿದರು. ಬಳಿಕ ಬಿಜೆಪಿ ಸೇರಿದ್ದರು. ಒಂದು ವರ್ಷದ ನಂತರ ಕೇಸರಿ ಪಕ್ಷವನ್ನೂ ತೊರೆದು, 2023ರಲ್ಲಿ ಒಮರ್ ಅಬ್ದುಲ್ಲಾ ಅವರ ಸಮ್ಮುಖದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ಗೆ ಜಂಪ್​ ಆಗಿದ್ದರು.

ಸುರೀಂದರ್ ಚೌಧರಿ ಹೆಚ್ಚು ವಿದ್ಯಾವಂತರಲ್ಲ. ಚುನಾವಣಾ ಅಫಿಡವಿಟ್ ಪ್ರಕಾರ, 12ನೇ ತರಗತಿ ಅವರ ವಿದ್ಯಾರ್ಹತೆ. ಇವರ ತಂದೆ ಜಿಯಾ ಲಾಲ್​​ ಚೌಧರಿ ಅವರು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್​ ಆಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಸಿಎಂ ಆಗಿ ಒಮರ್​ ಅಬ್ದುಲ್ಲಾ ಪ್ರಮಾಣವಚನ; ಇಂಡಿಯಾ ಒಕ್ಕೂಟದ ನಾಯಕರಿಂದ ಶುಭಾಶಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.