ETV Bharat / bharat

ರಾಯ್​ ಬರೇಲಿ, ವಯನಾಡ್ ಎರಡಲ್ಲಿ ಯಾವುದನ್ನ ಉಳಿಸಿಕೊಳ್ತಾರೆ ರಾಹುಲ್​: ಉತ್ತರದ ಈ ಕ್ಷೇತ್ರ ಉಳಿಸಿಕೊಳ್ಳಲು ’ರಾಗಾ’ಗಿರುವ ಕಾರಣಗಳಿವು! - Rahul Gandhi

ರಾಯ್​ ಬರೇಲಿ, ವಯನಾಡ್ ಎರಡೂ ಕ್ಷೇತ್ರಗಳಲ್ಲಿ ಭಾರಿ ಅಂತರದಿಂದ ಗೆದ್ದಿರುವ ರಾಹುಲ್ ಗಾಂಧಿ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು ಎಂಬ ಚರ್ಚೆ ಈಗ ಜೋರಾಗಿ ಸಾಗಿದೆ.

Priyanka and Rahul Gandhi
ಪ್ರಿಯಾಂಕಾ ಮತ್ತು ರಾಹುಲ್​ ಗಾಂಧಿ (ANI)
author img

By ETV Bharat Karnataka Team

Published : Jun 6, 2024, 10:57 AM IST

2024ರ ಲೋಕಸಭೆ ಹಣಾಹಣಿಯಲ್ಲಿ ರಾಯ್ ಬರೇಲಿ ಮತ್ತು ವಯನಾಡ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಉತ್ತರ ಮತ್ತು ದಕ್ಷಿಣದ ಈ ಎರಡು ಸ್ಥಾನಗಳಲ್ಲಿ ಒಂದನ್ನು ಅವರು ಬಿಡಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲೀಗ ಈ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಆದರೆ, ದೆಹಲಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಈ ವಿಷಯದ ಬಗ್ಗೆ ಪ್ರಶ್ನೆ ಎದುರಾದಾಗ, ಮುಗುಳ್ನಕ್ಕು ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ಆದರೆ ಈ ಬಗ್ಗೆ ಕಾಂಗ್ರೆಸ್‌ನಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

2019ರಲ್ಲಿ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ 1,67,178 ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿಯೂ ಬಿಜೆಪಿಯಿಂದ ದಿನೇಶ್ ಪ್ರತಾಪ್ ಸಿಂಗ್ ರಾಯ್ ಬರೇಲಿಯಿಂದ ಸ್ಪರ್ಧಿಸಿದ್ದು, ರಾಹುಲ್​ ಹಾಂಧಿ ಅತ್ಯಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಕಂಡಿದ್ದಾರೆ. ಇನ್ನೂ, 2019ರಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಬಿಜೆಪಿಯ ಸ್ಮೃತಿ ಇರಾನಿಯವರಿಂದ ಹೀನಾಯ ಸೋಲನ್ನು ಎದುರಿಸಬೇಕಾಯಿತು. 2024ರ ಈ ಚುನಾವಣೆಯಲ್ಲಿ ತಾಯಿ ಸೋನಿಯಾ ಗಾಂಧಿಯವರ ಸ್ಥಾನದಿಂದ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಅವರನ್ನು 3,90,030 ಮತಗಳ ಅಂತರದಿಂದ ಸೋಲುಣಿಸುವ ಮೂಲಕ ದೇಶಕ್ಕೆ ಉತ್ತರ ಕೊಟ್ಟಿದ್ದಾರೆ.

ಇನ್ನೂ ವಯನಾಡ್ ಲೋಕಸಭಾ ಕ್ಷೇತ್ರವನ್ನು ಗಮನಿಸಿದರೆ, ಬಂಪರ್ ಗೆಲುವು ಸಾಧಿಸಿದ್ದಾರೆ. ಆದರೆ, ಈ ಬಾರಿ ಅವರ ಗೆಲುವಿನ ಅಂತರ ಕೊಂಚ ಕಡಿಮೆಯಾಗಿದೆ. ಈ ಚುನಾವಣೆಯಲ್ಲಿ ಸಿಪಿಐನ ಅನ್ನಿ ರಾಜ ಅವರನ್ನು 3,64,422 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅದಾಗ್ಯೂ, ರಾಯ್ ಬರೇಲಿಗೆ ಹೋಲಿಸಿದರೆ ಇಲ್ಲಿನ ಅಂತರ ಸ್ವಲ್ಪ ಕಡಿಮೆ ಇದೆ.

ಸದ್ಯ ಈ ಎರಡರ ಪೈಕಿ ಯಾವ ಸ್ಥಾನವನ್ನು ರಾಹುಲ್ ಗಾಂಧಿ ಉಳಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ನಿನ್ನೆ ದೆಹಲಿಯಲ್ಲಿ ಪತ್ರಕರ್ತರು ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ನಗುತ್ತಲೇ ಉತ್ತರಿಸಿದ ಅವರು, 'ವಯನಾಡ್ ಅಥವಾ ರಾಯ್​ ಬರೇಲಿ ಸೇರಿ ಎರಡರ ಪೈಕಿ ಯಾವ ಕ್ಷೇತ್ರದಿಂದ ಸಂಸದನಾಗುತ್ತೀರಿ ಎಂದು ನನ್ನನ್ನು ಕೇಳಲಾಗುತ್ತಿದೆ. ನಾನು ಎರಡೂ ಸ್ಥಳಗಳಿಂದ ಸಂಸದನಾಗಿ ಉಳಿಯಲು ಬಯಸುತ್ತೇನೆ. ನಿಮಗೆಲ್ಲರಿಗೂ ಅಭಿನಂದನೆಗಳು' ಎಂದು ತಿಳಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಬಿಡುಗಡೆ ಮಾಡಿದ ಅವರು ಎರಡೂ ಕ್ಷೇತ್ರಗಳ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಎರಡನ್ನೂ ಉಳಿಸಿಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು. ಎರಡೂ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸಿದರೂ ಕೂಡ ಅಸಹಾಯಕ ಪರಿಸ್ಥಿತಿ ಇದೆ ಎಂಬುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: 'ಲಕ್ಷ್ಮೀ ಹೆಬ್ಬಾಳ್ಕರ್ ಸುಧಾರಿಸಿಕೊಳ್ಳಬೇಕು, ಬಿಜೆಪಿ ರಾಜ್ಯ ನಾಯಕರು ಅಹಂಕಾರ ಬಿಡಬೇಕು': ರಮೇಶ್ ಜಾರಕಿಹೊಳಿ - Ramesh Jarkiholi

ಉತ್ತರ ಪ್ರದೇಶದಲ್ಲಿ ಈ ಬಾರಿ ಪಕ್ಷ ಆರು ಸಂಸದರನ್ನು ಪಡೆದಿದೆ. ಇದು ಕಾಂಗ್ರೆಸ್‌ಗೆ ದೊಡ್ಡ ಗೆಲುವು. ಉತ್ತರ ಪ್ರದೇಶದ ಅಮೇಥಿಯಲ್ಲಿ ಸೋತಿದ್ದ ರಾಹುಲ್​ ಗಾಂಧಿ ಈಗ ರಾಯ್​ ಬರೇಲಿಯಲ್ಲಿ ಗೆದ್ದಿದ್ದು, ಅವರ ಇಮೇಜ್ ಕಳೆದುಕೊಳ್ಳಲು ಕಾಂಗ್ರೆಸ್ ಬಯಸುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಪಕ್ಷ ಅವರನ್ನು ಅಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ, ವಯನಾಡ್ ಸ್ಥಾನವನ್ನು ಬಿಡಬಹುದು. ದಕ್ಷಿಣದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿರುವ ಈನ್ನೆಲೆ, ಪಕ್ಷ ಈ ನಿರ್ಧಾರ ತೆಗೆದುಕೊಳ್ಳಬಹುದು.

ಒಂದು ವೇಳೆ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರವನ್ನು ತೊರೆದರೆ ಆ ಸ್ಥಾನದಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಏಕೆಂದರೆ ರಾಹುಲ್ ಗಾಂಧಿ ಅವರು ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳಲು ಬಯಸಿದ್ದಾರೆ. ಹೀಗಿರುವಾಗ ಅವರು ತಮ್ಮ ಸ್ಥಾನ ಬಿಟ್ಟುಕೊಟ್ಟರೆ, ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸುವ ಮೂಲಕ ಆ ಸ್ಥಾನ ಪಡೆಯಲು ಕಾಂಗ್ರೆಸ್ ಪ್ರಯತ್ನಿಸಲಿದೆ.

ರಾಯ್ ಬರೇಲಿ ಸ್ಥಾನವನ್ನು ಉಳಿಸಿಕೊಳ್ಳಲಿರುವ ಐದು ಪ್ರಮುಖ ಕಾರಣಗಳು:

  • ರಾಯ್ ಬರೇಲಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ಮಾಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಅಲ್ಲಿನ ಜನರ ಬಾಂಧವ್ಯವನ್ನು ಉಲ್ಲೇಖಿಸಿ, ಕಾಂಗ್ರೆಸ್ ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ ಎಂದು ತಿಳಿಸಿದ್ದರು. ಹಾಗಾಗಿ ಕಾಂಗ್ರೆಸ್ ತನ್ನ ಭರವಸೆ ಉಳಿಸಿಕೊಳ್ಳಬೇಕಿದೆ. ಈ ಮೂಲಕ ತನ್ನ ಸ್ಥಾನವನ್ನು ಗಟ್ಟಿಯಾಗಿಟ್ಟುಕೊಳ್ಳಲು ಬಯಸಿದೆ. ಈ ಬಗ್ಗೆ ಯಾವುದೇ ವಿರೋಧಿ ಸಂದೇಶ ರವಾನೆಯಾಗುವುದನ್ನು ಪಕ್ಷ ಸಹಿಸುವುದಿಲ್ಲ.
  • ರಾಯ್ ಬರೇಲಿ ಮತ್ತು ಅಮೇಥಿ ಯುಪಿಯಲ್ಲಿ ಪಕ್ಷ ಸಂಘಟನೆಗಿರುವ ಎರಡು ಮಾರ್ಗಗಳೆಂಬುದು ಕಾಂಗ್ರೆಸ್‌ಗೆ ತಿಳಿದಿದೆ. ಕಾಂಗ್ರೆಸ್ ಆರು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಪುನರಾಗಮನ ಮಾಡಿದೆ. ರಾಯ್ ಬರೇಲಿ ಕ್ಷೇತ್ರವನ್ನು ಬಿಟ್ಟುಕೊಡುವ ಮೂಲಕ ರಾಹುಲ್ ಗಾಂಧಿ ಯುಪಿಯಲ್ಲಿ ತಮ್ಮ ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸಲು ಇಚ್ಛಿಸುವುದಿಲ್ಲ.
  • ಅಮೇಥಿಯಲ್ಲಿ ಕಾಂಗ್ರೆಸ್ ಸ್ಮೃತಿ ಇರಾನಿ ಅವರನ್ನು ಸೋಲಿಸಿದೆ. ಈ ಸಂದರ್ಭ ಬೇರೆ ಪಕ್ಷದ ಅಭ್ಯರ್ಥಿಗಳು ಇಲ್ಲಿ ಪ್ರಾಬಲ್ಯ ಬೀರಿ ಹಾನಿ ಉಂಟು ಮಾಡುವುದು ಪಕ್ಷಕ್ಕೆ ಇಷ್ಟವಿಲ್ಲ. ಹಾಗಾಗಿ ಈ ಪರಿಸ್ಥಿತಿಯಲ್ಲಿ ರಾಯ್ ಬರೇಲಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಮೂಲಕ ಎರಡೂ ಸ್ಥಾನಗಳಲ್ಲಿ ಪಕ್ಷ ತನ್ನ ಭದ್ರ ಹಿಡಿತವನ್ನು ಕಾಯ್ದುಕೊಳ್ಳಲಿದೆ.
  • ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಗಾಂಧಿ ಕುಟುಂಬದ ಪ್ರತಿಷ್ಠೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಪಕ್ಷ ತನ್ನ ಪ್ರತಿಷ್ಠೆಗೆ ಯಾವುದೇ ರೀತಿಯ ಹಾನಿಯನ್ನು ಬಯಸುವುದಿಲ್ಲ. ಸಾಕಷ್ಟು ಹೋರಾಟದ ನಂತರ ಪಕ್ಷವು ಗೆಲುವಿನ ನಗೆ ಬೀರಿರುವ ಹಿನ್ನೆಲೆ ಈ ಕ್ಷೇತ್ರಗಳಲ್ಲಿ ಭ್ರದವಾಗಿ ನೆಲೆಯೂರುವುದು ಅನಿವಾರ್ಯವಾಗಿದೆ.
  • ದಕ್ಷಿಣದಲ್ಲಿ ಪಕ್ಷದ ಸ್ಥಾನ ಪ್ರಬಲವಾಗಿದೆ. ಹಾಗಾಗಿ ಪಕ್ಷವು ಸುಲಭವಾಗಿ ಡ್ಯಾಮೇಜ್ ಕಂಟ್ರೋಲ್ ಮಾಡಬಹುದು. ಪ್ರತಿಪಕ್ಷಗಳು ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಈ ಕಾರಣಗಳಿಂದ ವಯನಾಡ್ ಕ್ಷೇತ್ರಕ್ಕಿಂತ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್​ ಗಾಂಧಿ ಉಳಿಯುವ ಸಾಧ್ಯತೆ ಹೆಚ್ಚಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.