ETV Bharat / bharat

ಕೇರಂ ಆಡುತ್ತಿದ್ದ ಬಿಜೆಪಿ ಕಾರ್ಯಕರ್ತನಿಗೆ ಗುಂಡಿಕ್ಕಿ ಹತ್ಯೆಗೈದು ಶಿರಚ್ಛೇದನ - Bengal BJP Worker Shot - BENGAL BJP WORKER SHOT

ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡು ಪಕ್ಷದ ಬೂತ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹಫೀಜುಲ್ ಶೇಖ್, ತನ್ನ ಸ್ನೇಹಿತರೊಂದಿಗೆ ಕೇರಂ ಆಡುತ್ತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

Bengal BJP Worker Shot Dead  West Bengal
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jun 2, 2024, 7:58 PM IST

ಕಾಲಿಗಂಜ್(ಪಶ್ಚಿಮ ಬಂಗಾಳ): ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡು ಪಕ್ಷದ ಬೂತ್ ಏಜೆಂಟನಾಗಿ ಕೆಲಸ ಮಾಡುತ್ತಿದ್ದ ಹಫೀಜುಲ್ ಶೇಖ್ ತನ್ನ ಸ್ನೇಹಿತರೊಂದಿಗೆ ಕೇರಂ ಆಡುತ್ತಿದ್ದ ಸಮಯದಲ್ಲಿ ಆತನ ಮೇಲೆ ಗುಂಡು ಹಾರಿಸಿ ಹತ್ಯೆಗೈದು ನಂತರ ಶಿರಚ್ಛೇದನ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಶೇಖ್ ಹಾಗು ಅವರ ಸಹೋದರ ಜಯನ್ ಉದ್ದೀನ್ ಮೊಲ್ಲಾ ಕೂಡ ಬಿಜೆಪಿಗೆ ಬೆಂಬಲ ನೀಡಿದ್ದು, ಅವರನ್ನು ಟಾರ್ಗೆಟ್​ ಮಾಡಲಾಗಿದೆ ಎಂದು ನಾಡಿಯಾದ ಬಿಜೆಪಿ ಅಭ್ಯರ್ಥಿ ಅಮೃತಾ ರಾಯ್ ಆರೋಪಿಸಿದ್ದಾರೆ.

ಮೃತನ ಸಹೋದರನ ಹೇಳಿಕೆ: ಮೃತನ ಸಹೋದರ ಜಯನ್ ಉದ್ದೀನ್ ಮೊಲ್ಲಾ ಮಾತನಾಡಿ, ''ನನ್ನ ಸಹೋದರ ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಬೆಲೆ ತೆರಬೇಕಾಯಿತು. ನಮ್ಮ ಕುಟುಂಬದ ಸದಸ್ಯರು ಸಿಪಿಎಂಗೆ ನಿಷ್ಠರಾಗಿದ್ದರು. ಆದರೆ, ನಾವು ಬಿಜೆಪಿ ಸೇರಿದಾಗಿನಿಂದ, ನಮಗೆ ಟಿಎಂಸಿ ಬೆಂಬಲಿಗರಿಂದ ಬೆದರಿಕೆ ಬರುತ್ತಿತ್ತು. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿಗೆ ಬಂದು ನನ್ನ ಸಹೋದರನ ತಲೆ ಕತ್ತರಿಸುವ ಮೊದಲು ಎರಡು ಬಾರಿ ಗುಂಡು ಹಾರಿಸಿದ್ದಾರೆ. ಹಗಲು ಹೊತ್ತಿನಲ್ಲೇ ಹತ್ಯೆ ನಡೆದಿದೆ. ನಂತರ 10ರಿಂದ 11 ಟಿಎಂಸಿ ಗೂಂಡಾಗಳು ಇತರ ಬಿಜೆಪಿ ಕಾರ್ಯಕರ್ತರ ಮನೆಗೆ ತೆರಳಿ ಅವರ ಮನೆಗಳ ಮೇಲೂ ಬಾಂಬ್ ದಾಳಿ ನಡೆಸಿದರು'' ಎಂದು ಹೇಳಿದರು.

ಬಿಜೆಪಿ ನಾಯಕಿ ಅಮೃತಾ ರಾಯ್ ಖಂಡನೆ: ಹತ್ಯೆ ಖಂಡಿಸಿದ ಅಮೃತಾ ರಾಯ್, ''ಹಫೀಜುಲ್​ಅವರನ್ನು ಬರ್ಬರವಾಗಿ ಹತ್ಯೆಗೈದಿರುವುದು ತೃಣಮೂಲ ಕಾಂಗ್ರೆಸ್ ಸರ್ಕಾರದ ಹತಾಶೆಯನ್ನು ತೋರಿಸುತ್ತದೆ. ಇದು ಪೂರ್ವಯೋಜಿತ ಕೊಲೆ. ಬಿಜೆಪಿಯ ಬೂತ್ ಏಜೆಂಟ್ ಆಗಿದ್ದರಿಂದ ಪ್ರತೀಕಾರದ ಹತ್ಯೆ ನಡೆದಿದೆ. ಎರಡು ತಿಂಗಳ ಹಿಂದಷ್ಟೇ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹತ್ಯೆಯನ್ನು 'ಅನಾಗರಿಕ ಕೃತ್ಯ' ಎಂದು ಕರೆದಿರುವ ಅವರು, ಹಫೀಜುಲ್‌ನನ್ನು ಟಿಎಂಸಿ ಗೂಂಡಾಗಳು ಕೊಂದಿದ್ದಾರೆ ಮತ್ತು ಪೊಲೀಸರಿಗೆ ಯೋಜನೆಯ ಬಗ್ಗೆ ತಿಳಿದಿತ್ತು. ಆದರೆ, ಯಾವುದೇ ಕ್ರಮವಹಿಸಿಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಎಂಸಿ, ಸಿಪಿಎಂ ವಿರುದ್ಧ ಬಿಜೆಪಿ ಆರೋಪ: ತನ್ನ ಕಾರ್ಯಕರ್ತರ ಮೇಲಿನ ದಾಳಿಗೆ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕಾರಣ ಎಂದು ಬಿಜೆಪಿ ಆರೋಪಿಸಿದೆ. "ಪಶ್ಚಿಮ ಬಂಗಾಳದಲ್ಲಿ ಹತ್ಯೆಗಳು ಆರಂಭವಾಗಿವೆ. ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಹಫೀಜುಲ್ ಶೇಖ್ ಹತ್ಯೆಗೀಡಾಗಿದ್ದಾನೆ. ಶೇಖ್ ಮೇಲೆ ಗುಂಡು ಹಾರಿಸಿ, ತಲೆ ಕತ್ತರಿಸಿ ಆರೋಪಿಗಳು ನಾಪತ್ತೆಯಾಗಿದ್ದಾರೆ. ಶೇಖ್​ ದೇಹ ರಸ್ತೆ ಬದಿ ಬಿದ್ದಿತ್ತು" ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತಿಹಾರ್ ಜೈಲಿಗೆ ಶರಣಾಗುವ ಮುನ್ನ ರಾಜ್​ಘಾಟ್, ಹನುಮಾನ್ ದೇವಸ್ಥಾನಕ್ಕೆ ಕೇಜ್ರಿವಾಲ್ ಭೇಟಿ - Arvind Kejriwal

ETV Bharat Logo

Copyright © 2024 Ushodaya Enterprises Pvt. Ltd., All Rights Reserved.