ETV Bharat / bharat

ಜಾಮೀನು ಮೇಲೆ ಜೈಲಿಂದ ದೆಹಲಿ ಸಿಎಂ ಬಿಡುಗಡೆ: ನಾವು ಸರ್ವಾಧಿಕಾರದಿಂದ ದೇಶವನ್ನು ಕಾಪಾಡಬೇಕಿದೆ ಎಂದ ಕೇಜ್ರಿವಾಲ್ - Chief Minister Arvind Kejriwal - CHIEF MINISTER ARVIND KEJRIWAL

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದು ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರ ಬಂದಿದ್ದಾರೆ.

Arvind Kejriwal
ಅರವಿಂದ್ ಕೇಜ್ರಿವಾಲ್ (IANS)
author img

By PTI

Published : May 10, 2024, 8:55 PM IST

Updated : May 10, 2024, 9:17 PM IST

ನವದೆಹಲಿ : ಮಧ್ಯಂತರ ಜಾಮೀನು ಪಡೆದು ಹೊರ ತಿಹಾರ್ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹನುಮಂತನಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ, "ಸರ್ವಾಧಿಕಾರಿ ವಿರುದ್ಧದ ತನ್ನ ಹೋರಾಟ" ದಲ್ಲಿ ದೇಶದ ಜನರ ಬೆಂಬಲವನ್ನು ಕೋರಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರಿಗೆ ಸುಪ್ರೀಂಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಎಎಪಿ ಕಾರ್ಯಕರ್ತರು ಮತ್ತು ಮುಖಂಡರ ಡೋಲ್ ಬಡಿತ ಮತ್ತು ಘೋಷಣೆಗಳ ನಡುವೆ ಅವರು ಸಂಜೆ ಜೈಲಿನಿಂದ ಹೊರಬಂದರು. ಕಾರಿನ ಸನ್‌ರೂಫ್ ಮೇಲೆ ನಿಂತ ಕೇಜ್ರಿವಾಲ್, 'ಜೈಲ್ ಕೆ ಟೇಲ್ ಟೂಟ್ ಗಯೇ, ಕೇಜ್ರಿವಾಲ್ಜಿ ಛೂಟ್ ಗಯೇ' ಎಂಬ ಎಎಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಘೋಷಣೆಗಳ ಮಧ್ಯೆ ಅವರು ಮಾತನಾಡಿದರು.

'ಭಾರತ್ ಮಾತಾ ಕಿ ಜೈ', 'ವಂದೇ ಮಾತರಂ' ಮತ್ತು 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆಗಳೊಂದಿಗೆ ಮಾತನ್ನು ಪ್ರಾರಂಭಿಸಿದ ದೆಹಲಿ ಮುಖ್ಯಮಂತ್ರಿ, "ನಾನು ಸರ್ವಾಧಿಕಾರದ ವಿರುದ್ಧ ನನ್ನ ಶಕ್ತಿ ಮೀರಿ ಹೋರಾಡುತ್ತಿದ್ದೇನೆ. ಆದರೆ, ಅದರ ವಿರುದ್ಧ ಒಟ್ಟಾಗಿ ಹೋರಾಡಲು 140 ಕೋಟಿ ಜನರು (ದೇಶದ) ಬರಬೇಕಾಗಿದೆ" ಎಂದರು.

ಶನಿವಾರ ಬೆಳಗ್ಗೆ 11 ಗಂಟೆಗೆ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ, ಮಧ್ಯಾಹ್ನ 1 ಗಂಟೆಗೆ ಎಎಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದೇನೆ ಎಂದು ಅವರು ತಿಳಿಸಿದರು.

"ನಿಮ್ಮೊಂದಿಗೆ ಇರಲು ನನಗೆ ತುಂಬಾ ಸಂತೋಷವಾಗಿದೆ. ನಾನು ಶೀಘ್ರದಲ್ಲೇ ಹೊರಗೆ ಬರುತ್ತೇನೆ ಎಂದು ನಾನು ನಿಮಗೆ ಹೇಳಿದ್ದೆ ... ಎಲ್ಲಕ್ಕಿಂತ ಮೊದಲು ನಾನು ಹನುಮಂತ ದೇವರಿಗೆ ನಮಸ್ಕರಿಸುತ್ತೇನೆ. ಹನುಮಂತನ ಆಶೀರ್ವಾದದಿಂದಾಗಿ ನಾನು ನಿಮ್ಮ ನಡುವೆ ಇದ್ದೇನೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಎಎಪಿ ನಾಯಕ ಜನರ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಡಲು ಒಗ್ಗೂಡುವಂತೆ ಕೇಳಿಕೊಂಡರು. "ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ದೇಶದ ಕೋಟಿಗಟ್ಟಲೆ ಜನರು ತಮ್ಮ ಆಶೀರ್ವಾದವನ್ನು ನನಗೆ ಕಳುಹಿಸಿದ್ದಾರೆ. ನಾನು ಇಲ್ಲಿರುವ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದಿದ್ದಾರೆ.

ಇದನ್ನೂ ಓದಿ : ದೆಹಲಿ ಸಿಎಂ ಕೇಜ್ರಿವಾಲ್​​​ಗೆ ಜಾಮೀನು: ಎಎಪಿ ರಾಜ್ಯ ಕಚೇರಿಯಲ್ಲಿ ಸಂಭ್ರಮಾಚರಣೆ - Arvind Kejriwal

Last Updated : May 10, 2024, 9:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.