ಅದಿಲಾಬಾದ್(ತೆಲಂಗಾಣ): ಈ ವರ್ಷ ಬಿರು ಬೇಸಿಗೆ ಅವಧಿ ಪೂರ್ವದಲ್ಲೇ ಆರಂಭವಾಗಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದುರಾಗಿದೆ. ಕೊಲಂ ಬುಡಕಟ್ಟು ಪ್ರದೇಶದ ಜನರ ಬವಣೆ ಹೆಚ್ಚಿದೆ. ಕೊಲಂನ ಬುಡಕಟ್ಟು ಜನರು ಕುಡಿವ ನೀರಿಗಾಗಿ ದೊಡ್ಡ ಸಾಹಸವನ್ನೇ ಮಾಡಬೇಕಿದೆ. ಕಾರಣ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಅಪಾಯಕಾರಿಯಾದ ಬಾವಿಗೆ ಇಳಿದು ಅಲ್ಲಿಂದ ನೀರು ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಅದಿಲ್ಬಾದ್ ಜಿಲ್ಲೆಯ ಇಂದ್ರವೆಲ್ಲಿ ಮಂಡಲ್ನ ಗಟ್ಟೆಪಲ್ಲಿ ಕೊಲಂಗುಡುನಲ್ಲಿ 105 ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇಲ್ಲಿ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಇಡೀ ಗ್ರಾಮಕ್ಕೆ ಕೇವಲ ಒಂದೇ ನೀರಿನ ಪಂಪ್ ಇದ್ದು, ಇದೀಗ ಅಂತರ್ಜಲ ಕೂಡ ಬತ್ತಿ ಹೋಗಿದೆ. ಅಷ್ಟೇ ಅಲ್ಲದೆ, ವಾರಕ್ಕೆ ಅರ್ಧಗಂಟೆಗೂ ಹೆಚ್ಚು ಕಾಲ ಇಲ್ಲಿನ ಜನರು ಮಿಷನ್ ಭಗೀರಥ ನೀರನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನರು ಕುಟುಕು ಹನಿ ನೀರಿಗೆ ತೊಂದರೆ ಎದುರಿಸುವಂತಾಗಿದೆ.
ಪರಿಣಾಮ ಈ ಗ್ರಾಮದ ಜನರು ಗ್ರಾಮದಿಂದ 200 ಮೀಟರ್ ದೂರ ಇರುವ 40 ಅಡಿ ಆಳದ ಬಾವಿಯಲ್ಲಿ ನೀರು ತೆಗೆದುಕೊಂಡು ಬರುವ ಪರಿಸ್ಥಿತಿ ಎದುರಾಗಿದೆ. ಅದು ಕಡಿದಾದ ಈ ಬಾವಿಯಲ್ಲಿ ಮೆಟ್ಟಿಲಿನ ಮೇಲೆ ಹೆಜ್ಜೆ ಇಡುವುದು ಕೂಡಾ ಕಷ್ಟವಾಗಿದೆ. ಇದರಿಂದಾಗಿ ಜನರು ಬಾವಿಯೊಳಗೆ ಏಣಿ ಸಹಾಯದಿಂದ ಇಳಿದು, ಬಕೆಟ್ ಮೂಲಕ ಸಿಕ್ಕ ನೀರು ತುಂಬಿಕೊಂಡು ಸಾಗುವಂತಹ ಪರಿಸ್ಥಿತಿ ಎದುರಾಗಿದ್ದಾರೆ. ಇಷ್ಟೆಲ್ಲ ಸಾಹಸ ಪಟ್ಟು ನೀರು ಪಡೆದರೂ ಇದು ಕುಡಿಯಲು ಯೋಗ್ಯವಾದ ನೀರು ಏನೂ ಅಲ್ಲ. ಈ ನೀರನ್ನು ಸೇವಿಸಿದ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಕೂಡ ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದೆ. ಇಷ್ಟೆಲ್ಲ ನೀರಿನ ಬವಣೆ ಎದುರಿಸುತ್ತಿರುವ ಗ್ರಾಮದ ಜನರು ಒಂದೇ ಮನವಿ ಎಂದರೆ ಕಡೆ ಪಕ್ಷ ಒಂದು ಭಗೀರಥ ಯೋಜನೆಯಲ್ಲಿ ದಿನಕ್ಕೆ ಎರಡು ದಿನವಾದರೂ ನೀರು ಬಿಡಿ ಎಂಬ ಆಗ್ರಹ ಮಾಡುತ್ತಿದ್ದಾರೆ.
40 ಅಡಿ ಈ ಬಾವಿಯಲ್ಲಿ ಮೊದಲಿಗೆ ಬರುವ ಅಶುದ್ಧ ನೀರನ್ನು ತೆಗೆದು, ಬಳಿಕ ಶುದ್ದ ನೀರನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ದಿನವಿಡಿ ಸಮಯ ವ್ಯರ್ಥವಾಗುತ್ತದೆ. ಇದರಿಂದ ಕೆಲವೇ ಮಂದಿ ನೀರು ಪಡೆಯುತ್ತಾರೆ. ಇದು ಇವತ್ತು ಮತ್ತು ನಿನ್ನೆಯ ಕಥೆಯಲ್ಲ ಹಲವಾರು ವರ್ಷಗಳಿಂದ ಇದೇ ರೀತಿ ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ. ಈ ಬಾವಿಯಲ್ಲಿ ನೀರು ಮೊಗೆಯುವಾಗ ಯಾರಾದರೂ ಬಿದ್ದರೆ ಯಾರು ಹೊಣೆ ಎಂಬುದು ಗ್ರಾಮದ ಜನರ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ: ಹೊಸ ಹಣಕಾಸು ವರ್ಷದ ಮೊದಲ ದಿನವೇ ಗುಡ್ ನ್ಯೂಸ್