ಬಲರಾಂಪುರ (ಉತ್ತರ ಪ್ರದೇಶ): ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯ ಕೃಷ್ಣನಗರ ಗ್ರಾಮದಲ್ಲಿ ಯುವಕನೊಬ್ಬ ಎಲೆಕ್ಟ್ರಿಕ್ ವಾಹನವನ್ನು ಸಿದ್ಧಪಡಿಸಿ ಅಚ್ಚರಿ ಮೂಡಿಸಿದ್ದಾನೆ.
ಶ್ರೀದಮ್ ಹಲ್ದಾರ್ ಎಂಬುವವರು ತಾವೇ ವಿದ್ಯುತ್ ಚಾಲಿತ ವಾಹನ ತಯಾರಿಸಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಜತೆಗೆ ತನ್ನ ಯೂಟ್ಯೂಬ್ ಚಾನಲ್ನಲ್ಲಿ ಇ-ಬೈಕ್ ತಯಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಶ್ರೀದಮ್ ತಯಾರಿಸಿರುವ ಈ ಎಲೆಕ್ಟ್ರಿಕ್ ವಾಹನವು ಒಂದೇ ಚಾರ್ಜ್‌ನಲ್ಲಿ 100 ಕಿಲೋ ಮೀಟರ್ ಪ್ರಯಾಣಿಸಲಿದೆ. ಅದರಲ್ಲಿ ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ.
ಇ ಬೈಕ್ ತಯಾರಿಸುವ ಐಡಿಯಾ ಬಂದಿದ್ದು ಹೇಗೆ?: ಶ್ರೀದಮ್ ಹಲ್ದಾರ್ ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಎಲೆಕ್ಟ್ರಿಕ್ ರಿಕ್ಷಾವನ್ನು ನೋಡಿ ಅದರಿಂದ ಪ್ರೇರೇಪಿತನಾಗಿದ್ದೇನೆ. ಇ-ರಿಕ್ಷಾವನ್ನು ದ್ವಿಚಕ್ರ ವಾಹನವನ್ನಾಗಿ ಪರಿವರ್ತಿಸಿದರೆ, ಅದನ್ನು ಗುಡ್ಡಗಾಡು ರಸ್ತೆಗಳಲ್ಲಿ ಸುಲಭವಾಗಿ ಓಡಿಸಬಹುದು ಎಂದು ಭಾವಿಸಿದೆ. ನಾನು ರಾಮಾನುಜಗಂಜ್‌ನಲ್ಲಿ ಕೃಷಿ ಬೇಸಾಯ ಮಾಡುತ್ತಿದ್ದೇನೆ.
ದಿನವೂ ಹೋಗಿ ಬರಲು ಕಷ್ಟವಾಗುತ್ತಿತ್ತು. ಇದೀಗ ಬೈಕ್ ಮೂಲಕ ನಿರಾಯಾಸವಾಗಿ ಮನೆಗೆ ಹೋಗುತ್ತೇನೆ. ನಾನು ತಯಾರಿಸಿರುವ ಇ-ಬೈಕ್ 100 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 50 ಕಿಲೋ ಮೀಟರ್ ಆಗಿದೆ. ಇದನ್ನು ತಯಾರಿಸಲು 60 ಸಾವಿರ ರೂಪಾಯಿ ಖರ್ಚಾಗಿದೆ ಎಂದು ಶ್ರೀದಮ್ ತಿಳಿಸಿದ್ದಾರೆ.
ಇದನ್ನೂ ಓದಿ: "ಅಪ್ಪು" ಹೆಸರಲ್ಲಿ ಸೈಕಲ್ ಮೇಲೆ ಅಭಿಮಾನಿಯ ಪ್ರಪಂಚ ಪರ್ಯಟನೆ ; 5 ಲಕ್ಷ ಗಿಡ ನೆಡುವ ಗುರಿ - APPU FAN CYCLE YATRA