ETV Bharat / bharat

ಆಂಧ್ರದಲ್ಲಿ 'ಭ್ರಷ್ಟ' ವೈಎಸ್‌ಆರ್‌ಸಿಪಿ ಆಡಳಿತಕ್ಕೆ ವಿದಾಯ ಹೇಳಿ: ಜನತೆಗೆ ಪ್ರಧಾನಿ ಮೋದಿ ಕರೆ

author img

By ETV Bharat Karnataka Team

Published : Mar 17, 2024, 10:55 PM IST

Updated : Mar 17, 2024, 11:01 PM IST

ಆಂಧ್ರಪ್ರದೇಶದ ಚಿಲಕಲೂರಿಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದರು.

Viksit Andhra Pradesh' Possible Only With NDA: PM Modi Lauds Chandrababu Naidu, Pawan Kalyan
ಆಂಧ್ರದಲ್ಲಿ 'ಭ್ರಷ್ಟ' ವೈಎಸ್‌ಆರ್‌ಸಿಪಿ ಆಡಳಿತಕ್ಕೆ ವಿದಾಯ ಹೇಳಿ: ಜನತೆಗೆ ಪ್ರಧಾನಿ ಮೋದಿ ಕರೆ

ಚಿಲಕಲೂರಿಪೇಟ (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ವೈಎಸ್‌ಆರ್‌ ಕಾಂಗ್ರೆಸ್​ ಎರಡೂ ಪಕ್ಷಗಳನ್ನೂ ಒಂದೇ ಕುಟುಂಬ ನಡೆಸುತ್ತಿದೆ. ರಾಜ್ಯದಲ್ಲಿ 'ಭ್ರಷ್ಟ' ವೈಎಸ್‌ಆರ್‌ಸಿಪಿ ಆಡಳಿತಕ್ಕೆ ಈ ಬಾರಿ ವಿದಾಯ ಹೇಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಕರೆ ನೀಡಿದರು.

ಆಂಧ್ರಪ್ರದೇಶದ ಚಿಲಕಲೂರಿಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಕೂಟದ ಜಂಟಿ ಸಾರ್ವಜನಿಕ ಸಭೆಯಲ್ಲಿ ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಪ್ರಧಾನಿ ಮೋದಿ ಅಪಾರ ಜನಸ್ತೋಮ ಉದ್ದೇಶಿಸಿ ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ ಆಂಧ್ರ ಪ್ರದೇಶವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಜನರ ಕಲ್ಯಾಣವನ್ನು ಖಾತ್ರಿಪಡಿಸುವುದರ ಜೊತೆಗೆ ರಾಜ್ಯವನ್ನು ಮತ್ತೆ ಅಭಿವೃದ್ಧಿಯ ಪಥಕ್ಕೆ ತರುವುದು ಎನ್‌ಡಿಎ ಮೈತ್ರಿಕೂಟದಿಂದ ಸಾಧ್ಯ. ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ಧದ ಮತವನ್ನು ವಿಭಜಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಜನತೆ ಎಚ್ಚೆತ್ತುಕೊಳ್ಳಬೇಕು. ಆಂಧ್ರದಲ್ಲಿ ಡಬಲ್ ಎಂಜಿನ್ ಸರ್ಕಾರ ಮಾತ್ರ ಪ್ರಗತಿಯನ್ನು ತರುತ್ತದೆ ಎಂದು ಮೋದಿ ತಿಳಿಸಿದರು.

ಎನ್‌ಡಿಎ ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡಲಿದೆ. ಆಂಧ್ರಪ್ರದೇಶದ ಜನರ ಪ್ರಗತಿಗೆ ಕೆಲಸ ಮಾಡುತ್ತದೆ. ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಆಂಧ್ರದ ಜನರ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ನಮ್ಮ ಸರ್ಕಾರ 10 ಲಕ್ಷ ಮನೆಗಳನ್ನು ನೀಡಿದೆ. ನಮ್ಮ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದೆ. ವೈಎಸ್‌ಆರ್‌ಸಿಪಿಯ ಐದು ವರ್ಷಗಳ ಆಡಳಿತದಿಂದ ರಾಜ್ಯದ ಜನರು ಹತಾಶರಾಗಿದ್ದಾರೆ. ಈ ಬಾರಿ ರಾಜ್ಯದ ಮತದಾರರು ಎನ್‌ಡಿಎ ಸರ್ಕಾರವನ್ನು ಮರಳಿ ತರಲು ನಿರ್ಧರಿಸಿದ್ದಾರೆ ಎಂದು ಪ್ರಧಾನಿ ಪ್ರತಿಪಾದಿಸಿದರು.

ವೈಎಸ್‌ಆರ್‌ಸಿಪಿ ಸಚಿವರು ಭ್ರಷ್ಟ ಚಟುವಟಿಕೆಗಳಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷ ಯಾವಾಗಲೂ ಆಂಧ್ರ ಮತ್ತು ತೆಲುಗು ಜನರನ್ನು ಅವಮಾನಿಸುತ್ತಿದೆ. ಇಂತಹ ವಿಷಯದಲ್ಲಿ ಜಗನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷ ಒಂದೇ ಆಗಿವೆ. ವಿಕಸಿತ್ ಭಾರತ್ ಜೊತೆಗೆ ವಿಕಸಿತ್ ಆಂಧ್ರ ಪ್ರದೇಶವನ್ನು ಸಾಧಿಸಲು ಕೇಂದ್ರದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ 400ಕ್ಕೂ ಅಧಿಕ ಸ್ಥಾನಗಳನ್ನು ಪಡೆಯಲು ಸಹಾಯ ಮಾಡುವಂತೆ ಮೋದಿ ಮನವಿ ಮಾಡಿದರು.

ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಮಾತನಾಡಿ, ವೈಎಸ್‌ಆರ್‌ಸಿಪಿಯ ನಿರಂಕುಶ ಮತ್ತು ವಿನಾಶಕಾರಿ ಆಡಳಿತದಿಂದಾಗಿ ಕಳೆದ ಐದು ವರ್ಷಗಳಲ್ಲಿ ರಾಜ್ಯವು ವ್ಯಾಪಕ ನಷ್ಟಯನ್ನು ಅನುಭವಿಸಿದ್ದು, ಆಂಧ್ರವನ್ನು ಪುನರ್​ನಿರ್ಮಾಣದ ಕನಸನ್ನು ನನಸಾಗಿಸುವ ಉದ್ದೇಶವನ್ನು ಈ ಪ್ರಜಾನಾಡಿ ಸಾರ್ವಜನಿಕ ಸಭೆ ಹೊಂದಿದೆ ಎಂದು ಹೇಳಿದರು. ಇದೇ ವೇಳೆ, ಪ್ರಧಾನಿ ಮೋದಿ ಅವರನ್ನು 'ಪ್ರಗತಿವಾದಿ' ಮತ್ತು ಅವರು ಕೇವಲ ಒಬ್ಬ ವ್ಯಕ್ತಿಯಲ್ಲ ಒಂದು 'ಶಕ್ತಿ' ಎಂದು ಬಣ್ಣಿಸಿದ ನಾಯ್ಡು, ಮುಂಬರುವ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಜನಾದೇಶವು ರಾಜ್ಯದ ಭವಿಷ್ಯವನ್ನು ಬದಲಾಯಿಸುತ್ತದೆ ಎಂದು ತಿಳಿಸಿದರು.

ಜನಸೇನಾ ಅಧ್ಯಕ್ಷ, ನಟ ಪವನ್ ಕಲ್ಯಾಣ್ ಮಾತನಾಡಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿಧ್ವಂಸಕ ಮತ್ತು ದಬ್ಬಾಳಿಕೆಯ ಆಡಳಿತದಿಂದ ಬಳಲುತ್ತಿರುವ ಆಂಧ್ರ ಪ್ರದೇಶದ ಜನರ ಜೀವನದಲ್ಲಿ ಪ್ರಧಾನಿ ಮೋದಿಯವರ ಆಗಮನ ಮತ್ತು ಬಿಜೆಪಿ-ಟಿಡಿಪಿ-ಜನಸೇನಾ ಪುನರ್​​ಮಿಲನವು ಖುಷಿ ಮತ್ತು ಸಂತೋಷವನ್ನು ತರಲಿದೆ. 2014ರಲ್ಲಿ ತಿರುಪತಿಯ ವೆಂಕಟೇಶ್ವರ ದೇವರ ಆಶೀರ್ವಾದದೊಂದಿಗೆ ಆಂಧ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈಗ 2024ರಲ್ಲಿ ವಿಜಯವಾಡದ ಕನಕ ದುರ್ಗ ದೇವಿಯು ರಾಜ್ಯದಲ್ಲಿ ಎನ್‌ಡಿಎ ಸರ್ಕಾರವನ್ನು ಮರುಸ್ಥಾಪಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಚುನಾವಣಾ ಬಾಂಡ್​ಗಳ ಹೊಸ ಮಾಹಿತಿ ಬಹಿರಂಗ: ಬಿಜೆಪಿಗೆ ₹ 6,987 ಕೋಟಿ, ಜೆಡಿಎಸ್​ಗೆ ₹ 89.75 ಕೋಟಿ ದೇಣಿಗೆ

Last Updated : Mar 17, 2024, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.