ETV Bharat / bharat

ನಟ ದಳಪತಿ ವಿಜಯ್ ರಾಜಕೀಯ ಪ್ರವೇಶ: ನೂತನ ಪಕ್ಷದ ಹೆಸರು ಘೋಷಣೆ - ನಟ ದಳಪತಿ ವಿಜಯ್

Vijay takes Political plunge: ತಮಿಳು ನಟ ವಿಜಯ್ ರಾಜಕೀಯಕ್ಕೆ ಧುಮುಕಿದ್ದಾರೆ. 2026ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಟ ದಳಪತಿ ವಿಜಯ್
ನಟ ದಳಪತಿ ವಿಜಯ್
author img

By ETV Bharat Karnataka Team

Published : Feb 2, 2024, 2:34 PM IST

Updated : Feb 2, 2024, 3:17 PM IST

ಚೆನ್ನೈ: ತಮಿಳು ನಟ ವಿಜಯ್ ಇಂದು ಹೊಸ ಪಕ್ಷ ಘೋಷಿಸುವ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ (ತಮಿಳುನಾಡಿನ ವಿಕ್ಟರಿ ಪಾರ್ಟಿ ಎಂದು ಸರಳವಾಗಿ ಅನುವಾದಿಸಬಹುದು) ಎಂಬ ಪಕ್ಷವನ್ನು ಅವರು ಘೋಷಿಸಿದ್ದಾರೆ. ರಾಜ್ಯದ ಎಲ್ಲ ಧರ್ಮೀಯರಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷ ಶ್ರಮಿಸಲಿದೆ. 2026ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಜಯ್, "ನಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ ಅನ್ನು ನೋಂದಾಯಿಸಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದೇವೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿ. ನಾವು 2024ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾವು ಯಾವುದೇ ಪಕ್ಷವನ್ನೂ ಬೆಂಬಲಿಸುವುದಿಲ್ಲ. ಸಾಮಾನ್ಯ ಮತ್ತು ಕಾರ್ಯಕಾರಿ ಮಂಡಳಿ ಸಭೆಗಾಗಿ ಈ ನಿರ್ಧಾರ ಮಾಡಿದ್ದೇವೆ" ಎಂದಿದ್ದಾರೆ.

"ಎಲ್ಲಾ ಪ್ರೀತಿಯ ತಮಿಳುನಾಡಿನ ಜನತೆಗೆ ನನ್ನ ನಮನಗಳು. 'ವಿಜಯ್ ಪೀಪಲ್ಸ್ ಮೂವ್ಮೆಂಟ್' ತನ್ನ ಕೈಲಾದಷ್ಟು ಹಲವಾರು ಕಲ್ಯಾಣ ಯೋಜನೆಗಳು, ಸಾಮಾಜಿಕ ಸೇವೆಗಳು ಮತ್ತು ಸಹಾಯ ಮಾಡುತ್ತಾ ಬಂದಿರುವುದು ನಿಮಗೆಲ್ಲರಿಗೂ ತಿಳಿದ ವಿಷಯ. ಆದರೆ, ಇದರಿಂದ ಅಂದುಕೊಂಡಷ್ಟು ಸುಧಾರಣೆಗಳನ್ನು ತರಲು ಸಾಧ್ಯವಿಲ್ಲ. ಅದಕ್ಕೆ ರಾಜಕೀಯ ಶಕ್ತಿಯ ಅಗತ್ಯವಿದೆ. ಸದ್ಯದ ರಾಜಕೀಯ ವಾತಾವರಣ ನಿಮಗೆಲ್ಲರಿಗೂ ತಿಳಿದಿದೆ. ಒಂದೆಡೆ ಆಡಳಿತಾತ್ಮಕ ದುರಾಚಾರಗಳು, ಭ್ರಷ್ಟತೆ ಮೆರೆಯುತ್ತಿದ್ದರೆ ಮತ್ತೊಂದೆಡೆ ನಮ್ಮ ಜನರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಶ್ರಮಿಸುವ ಕೆಲಸ ಮಾಡಲಾಗುತ್ತಿದೆ.

ನಿಸ್ವಾರ್ಥ, ಪಾರದರ್ಶಕ, ಜಾತಿಮುಕ್ತ, ದೂರದೃಷ್ಟಿಯುಳ್ಳ, ಭ್ರಷ್ಟಾಚಾರ ರಹಿತ ದಕ್ಷ ಆಡಳಿತಕ್ಕಾಗಿ ಕಾದು ಕುಳಿತಿದ್ದಾರೆ. ವಿಶೇಷವಾಗಿ ತಮಿಳುನಾಡಿನ ಪ್ರತಿಯೊಬ್ಬರೂ ರಾಜಕೀಯ ಬದಲಾವಣೆಗಾಗಿ ಹಾತೊರೆಯುತ್ತಿರುವುದು ಸತ್ಯ. ರಾಜಕೀಯವು ನಮ್ಮ ಸಂವಿಧಾನವನ್ನು ಆಧರಿಸಿರುತ್ತದೆ. ತಮಿಳುನಾಡು ರಾಜ್ಯದ ಹಕ್ಕುಗಳು ಮತ್ತು ಈ ಮಣ್ಣಿನ ಮೇಲೆ 'ಹುಟ್ಟಿನಿಂದ ಎಲ್ಲರೂ ಒಂದೇ' ಸಿದ್ಧಾಂತವನ್ನು ಆಧರಿಸಿದೆ. ತನಗೆ ಎಲ್ಲವನ್ನೂ ನೀಡಿದ ತಮಿಳು ಜನರಿಗೆ ಅದನ್ನು ಅವರಿಗೆ ಮತ್ತೆ ಹಿಂದಿರುಗಿಸಲು ನಾನು ಬಯಸುತ್ತೇನೆ. ನನ್ನ ತಂದೆ ತಾಯಿಯ ನಂತರ ನನ್ನ ಹೆಸರು, ಕೀರ್ತಿ, ಹಣ ಸೇರಿದಂತೆ ಎಲ್ಲವನ್ನೂ ನನಗೆ ಕೊಟ್ಟವರು ತಮಿಳು ಜನರು. ಅದನ್ನು ಅವರಿಗೆ ಹಿಂದಿರುಗಿಸಲು ನಾನು ಬಹಳ ದಿನಗಳಿಂದ ಕಾಯುತ್ತಿದ್ದೇನೆ" ಎಂದು ಅವರು ಹೇಳಿಕೊಂಡಿದ್ದಾರೆ.

"ರಾಜಕೀಯವು ನನಗೆ ಮತ್ತೊಂದು ವೃತ್ತಿಯಲ್ಲ. ಇದು ಪವಿತ್ರವಾದ ಜನರ ಕೆಲಸ. ನಾನು ಬಹಳ ದಿನಗಳಿಂದ ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ. ಅದು ನನ್ನ ಆಳವಾದ ಆಸೆಯಾಗಿದೆ. ನಾನು ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ. ಅಲ್ಲದೇ ಈಗಾಗಲೇ ಕಮಿಟ್ ಆಗಿರುವ ಸಿನಿಮಾವನ್ನು ಪಕ್ಷದ ಕೆಲಸಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಲು ಹಾಗೂ ಜನಸೇವೆಯ ರಾಜಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಅವರು ಪಬ್ಲಿಕ್ ಪರೀಕ್ಷೆಗಳಲ್ಲಿ ಟಾಪರ್ ಆದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಕ್ಷೇತ್ರವಾರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆಗ ಅವರು ವಿದ್ಯಾರ್ಥಿಗಳಿಗೆ ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಅವರಂತಹ ನಾಯಕರ ಬಗ್ಗೆ ಓದಿ, ಒಳ್ಳೆಯದನ್ನು ತೆಗೆದುಕೊಳ್ಳಿ ಮತ್ತು ಉಳಿದವನ್ನು ಬಿಡಿ ಎಂದು ಸಲಹೆ ನೀಡಿದ್ದರು.

ಇದನ್ನೂ ಓದಿ: ರಜಿನಿ ಹೊಸ ಪಕ್ಷದ ಹೆಸರು, ಚಿಹ್ನೆ ಬಹಿರಂಗ!?

Last Updated : Feb 2, 2024, 3:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.