ETV Bharat / bharat

ಹೊಸ ವರ್ಷಕ್ಕೆ ಹರಿದು ಬರಲಿರುವ ಭಕ್ತರು; ವಾರಾಣಸಿ ದೇಗುಲ ದರ್ಶನದಲ್ಲಿ ಕೆಲ ಬದಲಾವಣೆ - VARANASI KASHI VISHWANATH TEMPLE

ವಾರಾಣಸಿಯಲ್ಲಿ ಶ್ರೀ ಕಾಶಿ ವಿಶ್ವನಾಥ ಕಾರಿಡಾರ್​ ಉದ್ಘಾಟನೆಯಾದ ಬಳಿಕ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ನಿರಂತರವಾಗಿ ಏರಿಕೆ ಕಂಡಿದೆ.

Varanasi Shri Kashi Vishwanath Temple Darshan rules Changed sanctum sanctorum Entry
ವಾರಣಾಸಿ ವಿಶ್ವನಾಥ (ಈಟಿವಿ ಭಾರತ್​​)
author img

By ETV Bharat Karnataka Team

Published : Dec 30, 2024, 11:22 AM IST

ವಾರಾಣಸಿ: 2025ರ ಹೊಸ ವರ್ಷ ಪ್ರಾರಂಭಕ್ಕೆ ಇನ್ನೂ ಎರಡು ದಿನ ಬಾಕಿ ಇದೆ. ಅನೇಕರು ಈ ನವ ವರ್ಷವನ್ನು ದೇವರ ಆಶೀರ್ವಾದದಿಂದ ಪ್ರಾರಂಭ ಮಾಡಲು ಇಚ್ಛಿಸುತ್ತಾರೆ. ಈ ಸಮಯದಲ್ಲಿ ಶ್ರೀ ಕಾಶಿ ವಿಶ್ವನಾಥ ಸನ್ನಿಧಿಗೆ ಭೇಟಿ ನೀಡುವ ಮಂದಿ ಕೂಡ ಹೆಚ್ಚು. ಲಕ್ಷಾಂತರ ಜನರು ಈ ದಿನ ದೇಗುಲಕ್ಕೆ ಬರುವ ಹಿನ್ನೆಲೆ ಶ್ರೀ ಕಾಶಿ ವಿಶ್ವನಾಥ್​ ನ್ಯಾಸ್​ ಪರಿಷದ್​ ಕ್ಯೂ ಸಿದ್ಧತೆ ನಡೆಸಿದೆ. ಈ ದಿನ ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ದೇಗುಲದ ಗರ್ಭಗುಡಿ ಪ್ರವೇಶ ಸಂಪೂರ್ಣ ಬಂದ್​ ಮಾಡಲಾಗಿದೆ.

ವಿಶ್ವನಾಥನ ದರ್ಶನಕ್ಕೆ ಮುಗಿಬಿದ್ದ ಜನ - ಎಲ್ಲ ಟಿಕೆಟ್​ ಬುಕ್​: ವಾರಾಣಸಿಯಲ್ಲಿ ಶ್ರೀ ಕಾಶಿ ವಿಶ್ವನಾಥ ಕಾರಿಡಾರ್​ ಉದ್ಘಾಟನೆಯಾದ ಬಳಿಕ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ನಿರಂತರವಾಗಿ ಏರಿಕೆ ಕಂಡಿದೆ. ಹೊಸ ವರ್ಷಕ್ಕೂ ಮೊದಲೇ ಬೃಹತ್​ ಸಂಖ್ಯೆಯಲ್ಲಿ ಭಕ್ತರು ಶ್ರೀ ಕಾಶಿ ವಿಶ್ವನಾಥ ಧಾಮಕ್ಕೆ ಭೇಟಿ ನೀಡುತ್ತಿದ್ದು, ವಿಶ್ವನಾಥನ ಆರತಿ, ರುದ್ರಾಭಿಷೇಕ, ಸುಗಮ ದರ್ಶನದ ಟಿಕೆಟ್​ಗಳ ಬೇಡಿಕೆ ನಾಲ್ಕು ಪಟ್ಟು ಹೆಚ್ಚಿದ್ದು, ಎಲ್ಲವೂ ಬುಕ್​ ಆಗಿದೆ.

ವಿಶ್ವನಾಥನ ಮಂಗಳಾರತಿ , ಮಧ್ಯಾಹ್ನದ ಬೋಗ್​ ಆರತಿ, ಸಪ್ತರಿಶಿ ಆರತಿ ಮತ್ತು ಶ್ರೀನಗರ್​​ ಬೋಗ್​ ಆರತಿ ಆನ್​ಲೈನ್​ ಟಿಕೆಟ್​ಗಳು ಸದ್ಯ ಭಕ್ತರಿಗೆ ಲಭ್ಯವಿಲ್ಲ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ. ರುದ್ರಾಭಿಷೇಕ ಮತ್ತು ಸುಗಮ ದರ್ಶನದ ಟಿಕೆಟ್​ಗಳು ಸಂಪೂರ್ಣವಾಗಿ ಬುಕ್​ ಆಗಿದೆ. ಡಿಸೆಂಬರ್​ 31ರಿಂದ ಜನವರಿ 2ರವರೆಗೆ ಯಾವುದೇ ರೀತಿಯ ಬುಕ್ಕಿಂಗ್​ಗಳಿಗೆ ಅವಕಾಶವಿಲ್ಲ ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಿದೆ.

ದೇಗುಲದಲ್ಲಿ ಬಿಗಿ ಭದ್ರತೆ, ಸುರಕ್ಷತೆಗೆ ಹೆಚ್ಚಿನ ಒತ್ತು; ದೇಗುಲದ ಭದ್ರತೆ ಕುರಿತು ಮಾತನಾಡಿರುವ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಎಲ್ಲ ರೀತಿಯ ಸುರಕ್ಷತೆ ಕೈಗೊಳ್ಳಲಾಗಿದೆ. ಹೊಸ ವರ್ಷದಂದು ಭೇಟಿ ನೀಡಲಿರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ವರ್ಷ ಹೊಸ ವರ್ಷದಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದೃಷ್ಟಿಯಲ್ಲಿ ಶ್ರಾವಣ ಮತ್ತು ಮಹಾಶಿವರಾತ್ರಿಯಲ್ಲಿ ಮಾಡುವಂತೆ ಬ್ಯಾರಿಕೇಡ್​ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಸಂಖ್ಯೆ ಕಡಿಮೆಯಾಗುವವರೆಗೆ ಗರ್ಭಗುಡಿ ಪ್ರವೇಶ, ಸ್ಪರ್ಶ ದರ್ಶನಕ್ಕೆ ಅವಕಾಶವಿಲ್ಲ. ಇದರ ಜೊತೆಗೆ ಮಹಾ ಕುಂಭಕ್ಕೂ ಎಲ್ಲಾ ರೀತಿ ಸಿದ್ಧತೆ ನಡೆಸಲಾಗಿದ್ದು, ಜನವರಿ 10 ರಿಂದ ಈ ಭದ್ರತಾ ಕಾರ್ಯ ಜಾರಿ ಮಾಡಲಾಗುವುದು ಎಂದರು.

ಇದನ್ನೂ ಓದಿ: ಆಂಗ್ಲ ಮಾಧ್ಯಮ ಪೈಪೋಟಿ ನಡುವೆ ಸಂಸ್ಕೃತ ವೇದ ವಿದ್ಯಾಲಯದಿಂದ ಸಾಂಪ್ರದಾಯಿಕ ಶಿಕ್ಷಣ: ಏನಿದರ ವಿಶೇಷತೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.