ETV Bharat / bharat

ಪ್ರಧಾನಿ ಮೋದಿಗೆ ಹ್ಯಾಟ್ರಿಕ್​ ಗೆಲುವು: 1.5 ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯಭೇರಿ - PM MODI WINS IN VARANASI - PM MODI WINS IN VARANASI

ವಾರಾಣಸಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದ ಪ್ರಧಾನಿ ಮೋದಿ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ರೈ ವಿರುದ್ಧ ಅದ್ಧೂರಿ ಜಯಭೇರಿ ಬಾರಿಸಿದ್ದಾರೆ.

PM Modi
ಪ್ರಧಾನಿ ಮೋದಿ (IANS)
author img

By ETV Bharat Karnataka Team

Published : Jun 4, 2024, 10:20 AM IST

Updated : Jun 4, 2024, 6:02 PM IST

ನವದೆಹಲಿ: ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 1.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2014 ಹಾಗೂ 2019ರಲ್ಲಿ ಇದೇ ವಾರಾಣಸಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಈ ಬಾರಿಯೂ ಗೆಲುವಿನ ನಗೆ ಬೀರುವ ಮೂಲಕ ಹ್ಯಾಟ್ರಿಕ್​ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಾರಂಭದ ಕೆಲವು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ರೈ ಅವರು ಪರಾಜಯಗೊಂಡಿದ್ದಾರೆ. 2014 ಹಾಗೂ 2019ರಲ್ಲಿಯೂ ಕಾಂಗ್ರೆಸ್​ ಅಜಯ್​ ರೈ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಎರಡೂ ಸಲವೂ ಅಜಯ್​ ಅವರು ಮೋದಿ ವಿರುದ್ಧ ಸೋಲನಭವಿಸಿದ್ದರು. ಆದರೂ ಈ ಬಾರಿ ಮತ್ತೆ ಮೋದಿ ವಿರುದ್ಧವೇ ಕಣಕ್ಕಿಳಿದಿದ್ದರು. ಇದೀಗ ಮೂರನೇ ಬಾರಿಯೂ ಸೋಲನಭವಿಸಿದ್ದಾರೆ.

ಪ್ರಧಾನಿ ಮೋದಿ ಅವರೇನೋ ಗೆಲುವು ಸಾಧಿಸಿದ್ದಾರೆ. ಆದರೆ ಉತ್ತರಪ್ರದೇಶದಲ್ಲಿ ಬಿಜೆಪಿ 62ರಿಂದ 35ಕ್ಕೆ ಕುಸಿತ ಕಂಡಿದೆ. ಈ ಮೂಲಕ ಅತಿ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡು ಏಕಾಂಗಿಯಾಗಿ 272 ಸ್ಥಾನಗಳನ್ನು ಗೆಲ್ಲಲು ವಿಫಲವಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕ್ಷಣ ಕ್ಷಣದ ಅಪ್ಡೇಟ್​​ - ಕಣದಲ್ಲಿರುವ ಪ್ರಮುಖರಿವರು! - Lok Sabha election results 2024

Last Updated : Jun 4, 2024, 6:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.