ETV Bharat / bharat

ಎಲೆಕ್ಟ್ರಿಕ್​ ವೆಹಿಕಲ್​ ಆಯ್ತು ಹಳೆಯ ಪೆಟ್ರೋಲ್​ ಬೈಕ್​: 9 ರೂಪಾಯಿಯಲ್ಲಿ 50 ಕಿಮೀ ಪ್ರಯಾಣ

ಹೊಸ ಬೈಕ್​ಗಳು ದುಬಾರಿ. ಹಳೆಯ ಬೈಕ್​​ಗಳು ಪೆಟ್ರೋಲ್​​ ಲೆಕ್ಕವಿಲ್ಲದಂತೆ ನುಂಗುತ್ತವೆ. ಅದನ್ನು ತಡೆಯಲು ಇಲ್ಲೊಬ್ಬ ಮೆಕ್ಯಾನಿಕ್​ ಪೆಟ್ರೋಲ್‌ಚಾಲಿತ ಬೈಕ್​ ಅನ್ನೇ ಎಲೆಕ್ಟ್ರಿಕ್​ ವೆಹಿಕಲ್​​ (ಇವಿ) ಆಗಿ ಮಾರ್ಪಡಿಸಿದ್ದಾರೆ.

ಎಲೆಕ್ಟ್ರಿಕ್​ ವೆಹಿಕಲ್​ ಆಯ್ತು ಹಳೆಯ ಪೆಟ್ರೋಲ್​ ಬೈಕ್​
ಎಲೆಕ್ಟ್ರಿಕ್​ ವೆಹಿಕಲ್​ ಆಯ್ತು ಹಳೆಯ ಪೆಟ್ರೋಲ್​ ಬೈಕ್​ (ETV Bharat)
author img

By ETV Bharat Karnataka Team

Published : 7 hours ago

ಫಾರೂಕಾಬಾದ್(ಉತ್ತರ ಪ್ರದೇಶ): ಮಾರುಕಟ್ಟೆಯಲ್ಲಿ ಮಿರಿಮಿರಿ ಮಿಂಚುವ ಹೊಸ ಎಲೆಕ್ಟ್ರಿಕ್​ ಬೈಕ್​ಗಳನ್ನು ಕಂಡಾಗ ಅದನ್ನು ಖರೀದಿಸಲು, ಹಳೆಯ ಬೈಕ್​​ಗಳನ್ನು ಗುಜರಿಗೋ ಅಥವಾ ಕಡಿಮೆ ದರಕ್ಕೋ ಮಾರಾಟ ಮಾಡುತ್ತೇವೆ. ಆದರೆ, ಇಲ್ಲೊಬ್ಬ ಮೆಕ್ಯಾನಿಕ್​ ತನ್ನ ಪೆಟ್ರೋಲ್‌ಚಾಲಿತ ಹಳೆಯ ಬೈಕ್​ ಅನ್ನು ಎಲೆಕ್ಟ್ರಿಕ್​ ಬೈಕಾಗಿ ಮಾರ್ಪಡಿಸಿದ್ದಾರೆ. ಕೇವಲ 9 ರೂಪಾಯಿ ವೆಚ್ಚದಲ್ಲಿ 50 ಕಿ.ಮೀ ಓಡುವಂತೆ ವಿನ್ಯಾಸ ಮಾಡಿದ್ದಾರೆ.

ಉತ್ತರ ಪ್ರದೇಶದ ಫಾರೂಕಾಬಾದ್​​ನ ಮೆಕ್ಯಾನಿಕ್​ ಶ್ರೀಕಾಂತ್​​ ತಮ್ಮ ಕೈಚಳಕದಿಂದ ಪೆಟ್ರೋಲ್​ ಬೈಕ್​ ಅನ್ನು ಎಲೆಕ್ಟ್ರಿಕ್​ ಬೈಕ್​ ಆಗಿ ರೂಪಾಂತರಿಸಿದ್ದಾರೆ. ವಿಪರೀತ ಹೊಗೆ ಉಗುಳುತ್ತಿದ್ದ ಪೆಟ್ರೋಲ್‌ಚಾಲಿತ ಬೈಕ್​ ಅನ್ನು ಈಗ ಸದ್ದಿಲ್ಲದ ಎಲೆಕ್ಟ್ರಿಕ್​ ಮಾದರಿಗೆ ತಂದಿದ್ದಾರೆ. ಇದರಿಂದ ಆತನಿಗೆ ಖರ್ಚೂ ಕಡಿಮೆ ಆಗುತ್ತಿದೆಯಂತೆ.

ಇವಿಗೆ ಬದಲಾದ ಹಳೆಯ ಪೆಟ್ರೋಲ್​ ಬೈಕ್​
ಇವಿಗೆ ಬದಲಾದ ಹಳೆಯ ಪೆಟ್ರೋಲ್​ ಬೈಕ್​ (ETV Bharat)

ಮಾಲಿನ್ಯ ತಡೆಯಲು ಪರಿವರ್ತನೆ: ತನ್ನಲ್ಲಿದ್ದ 16 ವರ್ಷಗಳ ಹಳೆಯ ಬೈಕ್​ ವಿಪರೀತ ಹೊಗೆ ಉಗುಳುತ್ತಿತ್ತು. ಇದರಿಂದ ಪರಿಸರಕ್ಕಾಗುವ ಹಾನಿ ಬಗ್ಗೆ ಬೇಸರಗೊಂಡಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ಬೈಕ್​​ ಬದಲಿಸುವ ಬಗ್ಗೆ ಯೋಚನೆ ಮಾಡಿದ್ದಾರೆ. ಕೆಲ ಮೆಕ್ಯಾನಿಕ್​ಗಳ ಸಲಹೆಯನ್ನು ಪಡೆದು, ಎಲೆಕ್ಟ್ರಿಕ್​​ ವೆಹಿಕಲ್​ ಆಗಿ ಮಾರ್ಪಡಿಸಲು ತಯಾರಿ ನಡೆಸಿದ್ದಾರೆ.

ಇದಕ್ಕಾಗಿ 35 ಸಾವಿರ ರೂಪಾಯಿ ಖರ್ಚು ಮಾಡಿ ಕೆಲ ಬಿಡಿ ಭಾಗಗಳನ್ನು ಆನ್​ಲೈನ್​ ಮೂಲಕ ಖರೀದಿಸಿದ್ದಾರೆ. ಇನ್ನೊಂದಷ್ಟು ಹಳೆಯ ವಸ್ತುಗಳನ್ನೇ ಅಳವಡಿಸಿದ್ದಾರೆ. 15 ದಿನದಲ್ಲಿ ಕಷ್ಟಪಟ್ಟು ಪೆಟ್ರೋಲ್‌ಚಾಲಿತ ಬೈಕ್​ ಅನ್ನು ಎಲೆಕ್ಟ್ರಿಕ್​ ವೆಹಿಕಲ್​ ಆಗಿ ಮಾರ್ಪಡಿಸಿದ್ದಾರೆ.

ಇದೀಗ ಗಾಡಿಯು ಥೇಟ್​ ಎಲೆಕ್ಟ್ರಿಕ್​ ವೆಹಿಕಲ್​​ನಂತೆ ಕಾಣುತ್ತಿದೆ. ಗಾಡಿಗಿದ್ದ ಚೈನ್ ಅನ್ನೂ ಕಿತ್ತು ಹಾಕಲಾಗಿದೆ. ಪೆಟ್ರೋಲ್ ಎಂಜಿನ್ ತೆಗೆದು ಅದರ ಜಾಗದಲ್ಲಿ 60 ವೋಲ್ಟ್ ಬ್ಯಾಟರಿ ಅಳವಡಿಸಿದ್ದಾರೆ. ಬೈಕ್​​ ಇದೀಗ ಕೇವಲ 9 ರೂಪಾಯಿ ವೆಚ್ಚದಲ್ಲಿ 50 ಕಿಲೋಮೀಟರ್ ಓಡುತ್ತದೆಯಂತೆ.

ರೂಪಾಂತರಿ ಬೈಕ್​ ಜೊತೆ ಮೆಕ್ಯಾನಿಕ್​ ಶ್ರೀಕಾಂತ್​
ರೂಪಾಂತರಿ ಬೈಕ್​ ಜೊತೆ ಮೆಕ್ಯಾನಿಕ್​ ಶ್ರೀಕಾಂತ್​ (ETV Bharat)

ಒಂದೂವರೆ ಯೂನಿಟ್​ನಲ್ಲಿ ಫುಲ್​ ಚಾರ್ಜ್​: ಈ ಬಗ್ಗೆ ಮಾಹಿತಿ ಹಂಚಿಕೊಂಡ ಮೆಕ್ಯಾನಿಕ್​ ಶ್ರೀಕಾಂತ್​, "ಇದನ್ನು ತಯಾರಿಸಲು 35 ಸಾವಿರ ರೂಪಾಯಿ ಖರ್ಚು ಮಾಡಿದೆ. ಒಮ್ಮೆ ಚಾರ್ಜ್​ ಮಾಡಿದರೆ ಒಂದೂವರೆ ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಅಂದರೆ ಸುಮಾರು 9 ರೂಪಾಯಿ. ಒಮ್ಮೆ ಫುಲ್​ ಚಾರ್ಜ್ ಮಾಡಿದರೆ ಗಂಟೆಗೆ 50 ಕಿ.ಮೀ ವೇಗದಲ್ಲಿ 50 ಕಿ.ಮೀ ದೂರ ಸಾಗಬಹುದು. 108 ರೂಪಾಯಿ ಬೆಲೆಯ ಲೀಟರ್ ಪೆಟ್ರೋಲ್​​ನಿಂದ 50ರಿಂದ 60 ಕಿ.ಮೀ ದೂರ ಚಲಾಯಿಸಬಹುದು. ಇದಕ್ಕೆ ಹೋಲಿಸಿದರೆ, ವೆಚ್ಚವೂ ತುಂಬಾ ಕಡಿಮೆ ಆಗಿದೆ" ಎಂದು ತಿಳಿಸಿದರು.

"ಓವರ್ ಲೋಡ್ ಹಾಕಿದರೂ ಬೈಕ್​ಗೆ ಹಾನಿಯಾಗಲ್ಲ. ಸಾಮಾನು-ಸರಂಜಾಮು ಜೊತೆಗೆ ಇಬ್ಬರು ಆರಾಮವಾಗಿ ಕೂತು ಪ್ರಯಾಣ ಮಾಡಬಹುದು. ಹೊಸ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಬೈಕ್‌ಗಳ ಬೆಲೆ ಹೆಚ್ಚು. ಖರೀದಿಸಲಾಗದವರು ಹಳೆಯ ವಾಹನವನ್ನೇ ಈ ರೀತಿಯಲ್ಲಿ ಸುಲಭವಾಗಿ ಮಾರ್ಪಡಿಸಿಕೊಳ್ಳಬಹುದು. ಇದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಬಹುದು" ಎಂದು ಅವರು ಹೇಳಿದರು.

ಇದನ್ನೂ ಓದಿ: ಚೀನಾ-ಭಾರತ ನಡುವೆ ಮಹತ್ವದ ಬೆಳವಣಿಗೆ: ಪೂರ್ವ ಲಡಾಖ್‌ನ LAC ಉದ್ದಕ್ಕೂ ಸೇನಾ ಗಸ್ತಿಗೆ ಒಪ್ಪಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.