ETV Bharat / bharat

ಲಡಾಖ್​ ಬೇಡಿಕೆಗಳ ಬಗ್ಗೆ ಮಾತುಕತೆಗೆ ಕೇಂದ್ರ ಒಪ್ಪಿಗೆ: ಸೋನಮ್​ ವಾಂಗ್​​ಚುಕ್​ ನೇತೃತ್ವದ ಉಪವಾಸ ಸತ್ಯಾಗ್ರಹ ಅಂತ್ಯ - LADHAK PROTEST

ಲಡಾಖ್​​ ಅನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಹವಾಮಾನ ಕಾರ್ಯಕರ್ತ ಸೋನಮ್​ ವಾಂಗ್​ಚುಕ್​ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸೋಮವಾರ ಅಂತ್ಯವಾಗಿದೆ.

ಸೋನಮ್​ ವಾಂಗ್​​ಚುಕ್​ ನೇತೃತ್ವದ ಉಪವಾಸ ಸತ್ಯಾಗ್ರಹ ಅಂತ್ಯ
ಸೋನಮ್​ ವಾಂಗ್​​ಚುಕ್​ ನೇತೃತ್ವದ ಉಪವಾಸ ಸತ್ಯಾಗ್ರಹ ಅಂತ್ಯ (ETV Bharat)
author img

By ETV Bharat Karnataka Team

Published : Oct 21, 2024, 11:02 PM IST

ನವದೆಹಲಿ: ಚಂದ್ರ ಮುರಿದು ಬಿದ್ದ ತಾಣ ಎಂದೇ ಬಣ್ಣಿಸಲ್ಪಡುವ ಲಡಾಖ್​​ಗೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೋರಿ ಹವಾಮಾನ ಕಾರ್ಯಕರ್ತ ಸೋನಮ್​ ವಾಂಗ್​ಚುಕ್​ ಅವರ ನೇತೃತ್ವದಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸೋಮವಾರ ಅಂತ್ಯವಾಗಿದೆ.

ಲಡಾಖ್​ ಜನರ ಬೇಡಿಕೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬೆನ್ನಲ್ಲೇ ಸೋನಮ್​ ಅವರು ತಮ್ಮ ಉಪವಾಸ ಧರಣಿಯನ್ನು ಕೊನೆಗೊಳಿಸಿದರು.

ಅಕ್ಟೋಬರ್​ 6ರಿಂದ ದೆಹಲಿಯಲ್ಲಿನ ಲಡಾಖ್​ ಭವನದಲ್ಲಿ ಸೋನಮ್​ ವಾಂಗ್​​ಚುಕ್​ ಅವರ ನೇತೃತ್ವದಲ್ಲಿ ಜನರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇಂದು ಜಮ್ಮು - ಕಾಶ್ಮೀರ ಮತ್ತು ಲಡಾಖ್​​ನ ಜಂಟಿ ಕಾರ್ಯದರ್ಶಿ ಪ್ರಶಾಂತ್​ ಲೋಖಂಡೆ ಅವರು ಧರಣಿ ಸ್ಥಳಕ್ಕೆ ಭೇಟಿ ಗೃಹ ಸಚಿವಾಲಯದ ಪತ್ರವನ್ನು ನೀಡಿದರು.

ಅದರಲ್ಲಿ ತಿಳಿಸಿದಂತೆ, ಲಡಾಖ್​​ನ ಬೇಡಿಕಗಳ ಕುರಿತು ಡಿಸೆಂಬರ್​​ನಲ್ಲಿ ಮಾತುಕತೆ ಪುನಾರಂಭಿಸಲಾಗುವುದು. ಲಡಾಖ್‌ನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಸಚಿವಾಲಯದ ಉನ್ನತಾಧಿಕಾರ ಸಮಿತಿಯು ಮುಂದಿನ ಸಭೆಯನ್ನು ಡಿಸೆಂಬರ್ 3ರಂದು ನಡೆಸಲಿದೆ ಎಂದು ಗೃಹ ಸಚಿವಾಲಯ ಪತ್ರದಲ್ಲಿ ಭರವಸೆ ನೀಡಿದೆ.

ಪ್ರತಿಭಟನಾಕಾರರಿಗೆ ಸೋನಮ್ ಧನ್ಯವಾದ: ಲಡಾಖ್‌ನ ಜನರು ಹೋರಾಟಕ್ಕಾಗಿ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಇದು ಲಡಾಖ್‌ನ ಜನರಿಗೆ ಸಂತೋಷದ ಕ್ಷಣವಾಗಿದೆ. ದೆಹಲಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಉಪವಾಸ ಧರಣಿಯಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದ ಎಂದು ಸೋನಮ್ ವಾಂಗ್‌ಚುಕ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಲಡಾಖ್​​ಗೆ ವಿಶೇಷ ಸ್ಥಾನಮಾನ ಮತ್ತು ನಾಲ್ಕು ಅಂಶಗಳ ಕಾರ್ಯಸೂಚಿಗಳ ಬಗ್ಗೆ ಅರ್ಥಪೂರ್ಣ ಮಾತುಕತೆ ನಡೆಸುತ್ತದೆ ಎಂಬ ಭರವಸೆ ಹೊಂದಿದ್ದೇನೆ. ಈ ಬಗ್ಗೆ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಲಡಾಖ್​​ ಜನರ ನಿರೀಕ್ಷೆಯಾಗಿದೆ ಎಂದರು.

ಲಡಾಖ್​ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸಬೇಕು, ಸಂಸದ್ ಸ್ಥಾನವನ್ನು ಹೆಚ್ಚಿಸಬೇಕು. ಪ್ರತ್ಯೇಕ ನೇಮಕಾತಿ ವಿಭಾಗವನ್ನು ನೀಡಬೇಕು ಎಂದು ಒತ್ತಾಯಿಸಿ ತಮ್ಮ ಬೆಂಬಲಿಗರೊಂದಿಗೆ ಲೇಹ್‌ನಿಂದ ದೆಹಲಿಗೆ ಸೋನಮ್ ವಾಂಗ್​ಚುಕ್​ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.