ETV Bharat / bharat

ಲೋಕಸಭೆ ಹಿನ್ನಡೆ ಬಳಿಕ ಭರ್ಜರಿ ಕಮ್​​ಬ್ಯಾಕ್​​ ಮಾಡಿದ ಯೋಗಿ ಆದಿತ್ಯನಾಥ್: ಬಿಜೆಪಿ 7, ಎಸ್​ಪಿ 2 ಸ್ಥಾನಗಳಲ್ಲಿ ಮುನ್ನಡೆ - UTTAR PRADESH BYPOLLS

ಉತ್ತರ ಪ್ರದೇಶ ಉಪಚುನಾವಣೆಗಳಲ್ಲಿ ಬಿಜೆಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಪ್ರಚಾರ ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್
ಪ್ರಚಾರ ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ (ETV BHARAT)
author img

By ETV Bharat Karnataka Team

Published : Nov 23, 2024, 4:32 PM IST

ಲಖನೌ, ಉತ್ತರ ಪ್ರದೇಶ: ಉತ್ತರ ಪ್ರದೇಶದ 9 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶಗಳು ದೊಡ್ಡ ಮಟ್ಟದ ಪರಿವರ್ತನೆಯಾಗಿರುವುದನ್ನು ಸೂಚಿಸುತ್ತಿವೆ. ಲೋಕಸಭಾ ಚುನಾವಣೆಯಲ್ಲಿನ ಹಿನ್ನಡೆಯ ನಂತರ ಉಪಚುನಾವಣೆಗಳಲ್ಲಿ ಬಿಜೆಪಿ ಮತ್ತೆ ಪುಟಿದೆದ್ದಿದೆ. ಅಂತಿಮ ಫಲಿತಾಂಶಗಳನ್ನು ಈವರೆಗೆ ಅಧಿಕೃತವಾಗಿ ಘೋಷಿಸಿಲ್ಲವಾದರೂ ಟ್ರೆಂಡ್​ಗಳಲ್ಲಿ ಬಿಜೆಪಿ ನಿರ್ಣಾಯಕ ಮುನ್ನಡೆ ಸಾಧಿಸಿರುವುದು ಸ್ಪಷ್ಟವಾಗಿದೆ. ಮಧ್ಯಾಹ್ನದ ವೇಳೆಗೆ ಬಿಜೆಪಿ 9 ಸ್ಥಾನಗಳ ಪೈಕಿ 7ರಲ್ಲಿ ಮುನ್ನಡೆ ಸಾಧಿಸಿದೆ.

ಅಚ್ಚರಿಯ ಫಲಿತಾಂಶ: ಮೊರಾದಾಬಾದ್ ಜಿಲ್ಲೆಯ ಕುಂದರ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಅತಿದೊಡ್ಡ ಅಚ್ಚರಿಯ ಫಲಿತಾಂಶ ಬಂದಿದೆ. ಈ ಕ್ಷೇತ್ರದಲ್ಲಿ 31 ವರ್ಷಗಳಿಂದ ಬಿಜೆಪಿ ತನ್ನ ಕಮಲವನ್ನು ಅರಳಿಸಲು ಕಾಯುತ್ತಿತ್ತು. ಅದು ಈ ಬಾರಿ ಈಡೇರಿದಂತೆ ಕಾಣುತ್ತಿದೆ. ಇಲ್ಲಿ ಬಿಜೆಪಿಯ ರಾಮ್ ವೀರ್ ಸಿಂಗ್ ಮುನ್ನಡೆ ಸಾಧಿಸಿದ್ದಾರೆ. ಕುಂದರ್ಕಿ ಕ್ಷೇತ್ರದಲ್ಲಿ ಶೇ 60ರಷ್ಟು ಮುಸ್ಲಿಮರಿದ್ದಾರೆ. ಆದರೂ ಇಲ್ಲಿ ಬಿಜೆಪಿಯ ಮುಸ್ಲಿಮೇತರ ಅಭ್ಯರ್ಥಿಯ ಗೆಲುವು ಸಾಕಷ್ಟು ಅಚ್ಚರಿ ಮೂಡಿಸಿದೆ. ಇದಕ್ಕೆ ರಾಮ್ ವೀರ್ ಸಿಂಗ್ ಅವರ ಮುಸ್ಲಿಂ ಕಾರ್ಡ್ ಪ್ರಚಾರವೇ ಕಾರಣ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ಪ್ರಚಾರ ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್
ಪ್ರಚಾರ ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ (ETV BHARAT)

31 ವರ್ಷಗಳ ಬಳಿಕ ಬಿಜೆಪಿಗೆ ಗೆಲುವು: ಚುನಾವಣಾ ಪ್ರಚಾರದ ಸಮಯದಲ್ಲಿ, ರಾಮ್ ವೀರ್ ಮುಸಲ್ಮಾನರು ಧರಿಸುವ ಮೆಶ್ ಕ್ಯಾಪ್ ಧರಿಸಿ ಮುಸ್ಲಿಂ ವಸಾಹತುಗಳಲ್ಲಿ ಸಾಕಷ್ಟು ಪ್ರಚಾರ ಮಾಡಿದ್ದರು. ಅವರು ಮುಸಲ್ಮಾನ ಮತದಾರರ ಅಹವಾಲುಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಇದರ ಪರಿಣಾಮವಾಗಿ 31 ವರ್ಷಗಳ ನಂತರ ಬಿಜೆಪಿ ಇಲ್ಲಿ ಗೆಲ್ಲಲಿದೆ ಎಂದು ಹೇಳಲಾಗಿದೆ.

ಸಿಸಮೌನಲ್ಲಿ ಎಸ್ಪಿ ಭದ್ರಕೋಟೆ ಭೇದಿಸಲು ಬಿಜೆಪಿ ವಿಫಲ: ಕಾನ್ಪುರದ ಸಿಸಮೌ ವಿಧಾನಸಭಾ ಸ್ಥಾನವು ಉಪಚುನಾವಣೆಯಲ್ಲಿ ಬಹಳ ಗಮನ ಸೆಳೆದಿತ್ತು. ಕಳೆದ 28 ವರ್ಷಗಳಿಂದ ಸಮಾಜವಾದಿ ಪಕ್ಷವು ಇಲ್ಲಿ ವಿಜಯದ ಬಾವುಟ ಹಾರಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಈ ಬಾರಿ ಬಿಜೆಪಿ ಇಲ್ಲಿ ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸಿತ್ತು. ಸಿಎಂ ಯೋಗಿ ಸ್ವತಃ 2-3 ಬಾರಿ ಸಿಸಮೌಗೆ ಹೋಗಿ ರೋಡ್ ಶೋಗಳೊಂದಿಗೆ ಸಾರ್ವಜನಿಕ ಸಭೆಗಳನ್ನು ನಡೆಸಿದರು. ಆದರೆ, ಇದರ ನಂತರವೂ ಬಿಜೆಪಿಗೆ ಎಸ್ ಪಿಯ ಈ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಸಮಾಜವಾದಿ ಪಕ್ಷದ ನಸೀಮ್ ಸೋಲಂಕಿ ಮತ್ತೆ ಈ ಸ್ಥಾನವನ್ನು ಗೆದ್ದಿದ್ದಾರೆ.

ಈ ಬಾರಿಯ ಉಪಚುನಾವಣೆಯಲ್ಲಿ 2 ಸ್ಥಾನ ಗೆದ್ದ ಎಸ್​ಪಿ: ಈ ಬಾರಿ ಉಪಚುನಾವಣೆ ನಡೆದ 9 ಸ್ಥಾನಗಳ ಪೈಕಿ 2022 ರ ವಿಧಾನಸಭಾ ಚುನಾವಣೆಯಲ್ಲಿ ಎಸ್​ಪಿ 4 ಸ್ಥಾನಗಳನ್ನು ಗೆದ್ದಿತ್ತು.ಕುಂದರ್ಕಿ, ಸಿಸಮೌ, ಕಾರ್ಹಾಲ್ ಮತ್ತು ಕಟೇರಿ ಕ್ಷೇತ್ರಗಳಲ್ಲಿ ಆಗ ಎಸ್​ಪಿ ಜಯಶಾಲಿಯಾಗಿತ್ತು. ಆದರೆ ಈ ಉಪಚುನಾವಣೆಯಲ್ಲಿ ಅದು 2 ಸ್ಥಾನಗಳನ್ನು ಕಳೆದುಕೊಂಡಿದೆ. ಕುಂದರ್ಕಿ ಮತ್ತು ಕಟೇಹ್ರಿಯಲ್ಲಿ ಎಸ್​ಪಿ ಅಭ್ಯರ್ಥಿಗಳು ಹಿನ್ನಡೆ ಅನುಭವಿಸಿದ್ದಾರೆ. ಕಾರ್ಹಾಲ್​ನಲ್ಲಿ ಮತ್ತು ಸಿಸಮೌನಲ್ಲಿ ಎಸ್​ಪಿ ಗೆಲುವು ಸಾಧಿಸಿದೆ.

ಬಿಜೆಪಿಯ 4 ತಿಂಗಳ ಕಠಿಣ ಪರಿಶ್ರಮಕ್ಕೆ ಫಲ: ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಸ್ಥಾನಗಳ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನಿರಂತರ ಮುನ್ನಡೆಯ ಕಳೆದ 4 ತಿಂಗಳ ಕಠಿಣ ಪರಿಶ್ರಮವಿದೆ. ಇದರಲ್ಲಿ ಸಂಘಟನೆ ಮತ್ತು ಸರ್ಕಾರದ ಉತ್ತಮ ಸಮನ್ವಯ ಕಂಡುಬಂದಿದೆ. ಇದರೊಂದಿಗೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 'ಬಂಟೋಗೆ ಟು ಕಾಂಟೋಗೆ' ಘೋಷಣೆಯ ಮ್ಯಾಜಿಕ್ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬಿಜೆಪಿಗೆ ಲಾಭ ತಂದ ರಾಷ್ಟ್ರೀಯ ಲೋಕದಳ: ಕುಂದರ್ಕಿ, ಕಟೇರಿ ಮತ್ತು ಮೀರಾಪುರ ಕ್ಷೇತ್ರಗಳು ಈ ಮುನ್ನ ಭಾರತೀಯ ಜನತಾ ಪಕ್ಷದ ವಶದಲ್ಲಿರಲಿಲ್ಲ. ಕುಂದರ್ಕಿ ಮತ್ತು ಕಟೇಹ್ರಿಯಲ್ಲಿ ಸಮಾಜವಾದಿ ಪಕ್ಷ ಗೆದ್ದಿತ್ತು. ಹಾಗೆಯೇ 2022 ರಲ್ಲಿ ಸಮಾಜವಾದಿ ಪಕ್ಷದ ಮೈತ್ರಿಕೂಟದ ಭಾಗವಾಗಿದ್ದ ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ಮೀರಾಪುರದಲ್ಲಿ ಗೆದ್ದಿದ್ದರು. ಈ ಬಾರಿ ರಾಷ್ಟ್ರೀಯ ಲೋಕದಳ ಬಿಜೆಪಿ ಜೊತೆಗಿದ್ದು, ಮೀರಾಪುರದಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಕುಂದರ್ಕಿ ಮತ್ತು ಕಟೇರಿಯಲ್ಲಿ ಬಿಜೆಪಿ ಗೆಲುವಿನತ್ತ ಸಾಗುತ್ತಿದೆ.

ಸಿಎಂ ವಿಶೇಷ ಪ್ರಯತ್ನಗಳ ಫಲ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿಶೇಷ ಪ್ರಯತ್ನಗಳ ಫಲವಾಗಿ ಸಾಂಸ್ಥಿಕ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿರುವುದು ಉಪಚುನಾವಣೆಯಲ್ಲಿ ಬಿಜೆಪಿಯನ್ನು ಅಪೇಕ್ಷಿತ ಫಲಿತಾಂಶದತ್ತ ಕೊಂಡೊಯ್ದಿದೆ. 2024 ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷದ ಸೋಲಿನ ನಂತರ, ಪಕ್ಷದ ಅನೇಕ ದೌರ್ಬಲ್ಯಗಳು ಬಹಿರಂಗಗೊಂಡವು. ನಂತರ, ಉಪಚುನಾವಣೆಗೆ ಸಿದ್ಧತೆಗಳು ಪ್ರಾರಂಭವಾದಾಗ, ಭಾರತೀಯ ಜನತಾ ಪಕ್ಷವು ಅನೇಕ ನ್ಯೂನತೆಗಳನ್ನು ನಿವಾರಿಸಿಕೊಂಡು ಚುನಾವಣೆಗೆ ನುಗ್ಗಿತು.

ಆಗ್ರಾದಲ್ಲಿ ಸಿಎಂ ಯೋಗಿ ಬಟೋಗೆ ತೋ ಕಟೋಗೆ ಘೋಷಣೆ: ಆಗ್ರಾದಲ್ಲಿ ನಡೆದ ರ್ಯಾಲಿಯಲ್ಲಿ ಮುಖ್ಯಮಂತ್ರಿ ಯೋಗಿ ಬಟೋಗೆ ತೋ ಕಟೋಗೆ ಎಂಬ ಘೋಷಣೆ ಮೊಳಗಿಸಿದರು. ಇದರ ನಂತರ, ಉತ್ತರ ಪ್ರದೇಶದ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡು ಬಂದಿತು. ಯೋಗಿ ಆದಿತ್ಯನಾಥ್ ಅವರ ಈ ಘೋಷಣೆಯನ್ನು ಹೇಗೆ ಎದುರಿಸುವುದು ಎಂಬುದರ ಮೇಲೆ ಪ್ರತಿಪಕ್ಷಗಳ ಸಂಪೂರ್ಣ ಶಕ್ತಿ ಕೇಂದ್ರೀಕೃತವಾಗಿತ್ತು.

ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಉಮಾಶಂಕರ್ ದುಬೆ ಮಾತನಾಡಿ, ಭಾರತೀಯ ಜನತಾ ಪಕ್ಷವು ಈ ಘೋಷಣೆಯನ್ನು ಮೊಳಗಿಸಿದ ನಂತರ, ಹಿಂದೂ ಮತಗಳು ಒಗ್ಗಟ್ಟಾಗಿ ಅವುಗಳ ಜಾತಿ ರಾಜಕೀಯದ ಪ್ರಭಾವ ಕಡಿಮೆಯಾಗುತ್ತದೆ ಎಂದು ಪ್ರತಿಪಕ್ಷಗಳು ಆತಂಕಕ್ಕೀಡಾದವು. ಆದರೆ ಪ್ರತಿಪಕ್ಷಗಳಿಗೆ ಈ ಈ ಘೋಷಣೆಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಅದರ ಸ್ಪಷ್ಟ ಪರಿಣಾಮವು ಚುನಾವಣೆಯ ಮೇಲೆ ಕಂಡುಬಂದಿತು.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಮಹಾಯುತಿಯ ಕಮಾಲ್​: ಲಾಡ್ಕಿ ಬಹಿಣ್ ಬ್ರಹ್ಮಾಸ್ತ್ರಕ್ಕೆ ಎಂವಿಎ ಛಿದ್ರ.. ಛಿದ್ರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.