ಶ್ರೀನಗರ (ಜಮ್ಮು- ಕಾಶ್ಮೀರ): ಉಗ್ರರ ಉಪಟಳ ಹೆಚ್ಚಿರುವ ಜಮ್ಮು ಮತ್ತು ಕಾಶ್ಮೀರ ಮತ್ತು ಜನಾಂಗೀಯ ಘರ್ಷಣೆಗೆ ತುತ್ತಾಗಿರುವ ಈಶಾನ್ಯ ರಾಜ್ಯವಾದ ಮಣಿಪುರಕ್ಕೆ ಪ್ರವಾಸ ತೆರಳದಂತೆ ಅಮೆರಿಕ ತನ್ನ ದೇಶವಾಸಿಗಳಿಗೆ ಸಲಹೆ ನೀಡಿದೆ. ಇದನ್ನು ನ್ಯಾಷನಲ್ ಕಾನ್ಫ್ರೆನ್ಸ್ ಉಪಾಧ್ಯಕ್ಷ, ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ಟೀಕಿಸಿದ್ದಾರೆ. ಕೇಂದ್ರ ಸರ್ಕಾರದ ಅಸಮರ್ಥತೆಯಿಂದಾಗಿ ಅಮೆರಿಕ ಈ ಸೂಚನೆ ನೀಡಿದೆ ಎಂದು ಜರಿದಿದ್ದಾರೆ.
“In asking US citizens to not visit Jammu and Kashmir, the advisory points to ‘terrorist attacks' and ‘violent civil unrest,’ as well as ‘sporadic violence’ between the Indian and Pakistani forces along the Line of Control (LoC)”
— Omar Abdullah (@OmarAbdullah) July 25, 2024
So much for ‘naya J&K’. For all the talk of…
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಒಮರ್ ಅಬ್ದುಲ್ಲಾ, ಜಮ್ಮು ಕಾಶ್ಮೀರ ಮತ್ತು ಮಣಿಪುರಕ್ಕೆ ಪ್ರವಾಸ ತೆರಳದಂತೆ ಅಮೆರಿಕದ ವಿದೇಶಾಂಗ ಇಲಾಖೆ ತನ್ನ ಭಾರತದ ನಾಗರಿಕರಿಗೆ ಸಲಹೆ ನೀಡಿದೆ. ಇದು ಆಕ್ಷೇಪಾರ್ಹ. ಹೊಸ ಜಮ್ಮು ಕಾಶ್ಮೀರದಲ್ಲಿ ಸಹಜ ವಾತಾವರಣ, ಶಾಂತಿ, ಪ್ರವಾಸೋದ್ಯಮ ಹೆಚ್ಚಳ ಮತ್ತು ಜಿ20ಯಂತಹ ಸಭೆಗಳು ನಡೆದಿವೆ. ಇದರ ಹೊರತಾಗಿಯೂ ಅಮೆರಿಕ ಇಂತಹ ಸಲಹೆ ಹೊರಡಿಸಿದ್ದು ಸರಿಯಲ್ಲ ಎಂದಿದ್ದಾರೆ.
ಹಿಂಸಾಪೀಡಿತ ಮಣಿಪುರಕ್ಕೆ ತೆರಳದಂತೆಯೂ ಹೇಳಿದ್ದು ಕೇಂದ್ರದ ಎನ್ಡಿಎ ಸರ್ಕಾರದ ವೈಫಲ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ವೈಷಮ್ಯವನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿದ್ದಾರೆ ಎಂಬುದು ತೋರಿಸುತ್ತದೆ. ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಬದಲಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.
ಅಮೆರಿಕ ವಿದೇಶಾಂಗ ಇಲಾಖೆ ಹೇಳಿದ್ದೇನು?: ಭಾರತ-ಪಾಕಿಸ್ತಾನದ ಗಡಿ ಭಾಗದಲ್ಲಿರುವ ಜಮ್ಮು ಮತ್ತು ಕಾಶ್ಮೀರವನ್ನು 'ಹಂತ 4' (ಪ್ರಯಾಣಕ್ಕೆ ಉತ್ತಮವಲ್ಲ) ಎಂದು ಗುರುತಿಸಿದೆ. 2023 ರಿಂದ ಜನಾಂಗೀಯ ಘರ್ಷಣೆಗೆ ಗುರಿಯಾಗಿರುವ ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳನ್ನು 'ಹಂತ 3' (ಪ್ರಯಾಣ ಮಾಡಬೇಡಿ) ಎಂದು ವರ್ಗೀಕರಿಸಿದೆ.
ಒಟ್ಟಾರೆ ಭಾರತವನ್ನು 2 ನೇ ಹಂತದಲ್ಲಿ (ಪ್ರಯಾಣಕ್ಕೆ ಉತ್ತಮವಲ್ಲ) ಇರಿಸಿರುವ ಅಮೆರಿಕ, "ಭಯೋತ್ಪಾದನೆ ಮತ್ತು ನಾಗರಿಕ ಅಶಾಂತಿಯಿಂದಾಗಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ (ಪೂರ್ವ ಲಡಾಖ್ ಪ್ರದೇಶ ಮತ್ತು ಅದರ ರಾಜಧಾನಿ ಲೇಹ್ ಹೊರತುಪಡಿಸಿ) ಮತ್ತು ಮಣಿಪುರಕ್ಕೆ ಪ್ರಯಾಣಿಸಬೇಡಿ ಎಂದು ಅಮೆರಿಕ ವಿದೇಶಾಂಗ ಇಲಾಖೆ ಹೇಳಿದೆ.
ಹಿಂಸಾಚಾರ ಹೆಚ್ಚಿರುವ ಈಶಾನ್ಯ ರಾಜ್ಯಗಳಿಗೆ ಪ್ರಯಾಣಿಸಬೇಕಾದರೆ ಯೋಚಿಸಿ ಎಂದು ಅಮೆರಿಕನ್ನರಿಗೆ ಸಲಹೆ ನೀಡಿದೆ. ಭಾರತದಲ್ಲಿ ಅತ್ಯಾಚಾರವು ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲಿ ಒಂದಾಗಿದೆ. ಲೈಂಗಿಕ ದೌರ್ಜನ್ಯದಂತಹ ಹಿಂಸಾತ್ಮಕ ಅಪರಾಧಗಳು ಪ್ರವಾಸಿ ತಾಣಗಳು ಮತ್ತು ಇತರ ಸ್ಥಳಗಳಲ್ಲಿ ಸಂಭವಿಸಿವೆ. ಭಯೋತ್ಪಾದಕರು ಯಾವುದೇ ಎಚ್ಚರಿಕೆಯಿಲ್ಲದೆ ದಾಳಿ ಮಾಡಬಹುದು. ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು/ಶಾಪಿಂಗ್ ಮಾಲ್‌ಗಳು ಮತ್ತು ಸರ್ಕಾರಿ ಸ್ಥಳಗಳನ್ನೂ ಗರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ಸಿಂಗಾಪುರ ಪಾಸ್ಪೋರ್ಟ್ ವಿಶ್ವದ ನಂ.1; ಭಾರತದ ಸ್ಥಾನವೆಷ್ಟು ಗೊತ್ತೇ? ಪಾಕ್ ಅತ್ಯಂತ ದುರ್ಬಲ! - Passport Ranks