ETV Bharat / bharat

ಉಗುಳಿ ಮಸಾಜ್ ಮಾಡಿದ​ ಆರೋಪ: ಬುಲ್ಡೋಜರ್​​​​​​​​​ ಹಚ್ಚಿ ಸಲೂನ್​​ ಉಡಾಯಿಸಿದ ಪೊಲೀಸ್​ - Salon Demolished With Bulldozer - SALON DEMOLISHED WITH BULLDOZER

ಕನೌಜ್‌ನ ಸಲೂನ್‌ಗೆ ಮಸಾಜ್‌ಗಾಗಿ ಯುವಕನೊಬ್ಬ ತೆರಳಿದ್ದ. ಅಲ್ಲಿ ಸಲೂನ್ ಕೆಲಸಗಾರ ಉಗುಳಿ ಮಸಾಜ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿತ್ತು. ವಿಷಯ ಬೆಳಕಿಗೆ ಬಂದ ಹಿನ್ನೆಲೆ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ.

UP Kannauj salon spit scandal Police arrested accused Salon demolished with bulldozer
ಅಸಹ್ಯ, ಉಗುಳಿ ಮಸಾಜ್ ಮಾಡಿದ​ ಆರೋಪ: ಬುಲ್ಡೋಜರ್​​​​​​​​​ ಹಚ್ಚಿ ಸಲೂನ್​​ ಉಡಾಯಿಸಿದ ಪೊಲೀಸ್​ (ETV Bharat)
author img

By ETV Bharat Karnataka Team

Published : Aug 8, 2024, 9:17 AM IST

ಕನೌಜ್, ಉತ್ತರಪ್ರದೇಶ: ಇಲ್ಲಿನ ತಾಲ್ಗ್ರಾಮ್ ಪ್ರದೇಶದ ಸಲೂನ್‌ನಲ್ಲಿ ಅಸಹ್ಯಕರ ವರ್ತನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಲೂನ್ ನ ಕೆಲಸಗಾರನೊಬ್ಬ ಇಲ್ಲಿಗೆ ಬಂದ ಯುವಕನಿಗೆ ಉಗುಳಿ ಮಸಾಜ್ ಮಾಡಿದ್ದಾನೆ. ಅದನ್ನು ಅವರೇ ವಿಡಿಯೋ ಕೂಡಾ ಮಾಡಿದ್ದಾರೆ. ಇದಾದ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡಾ ಮಾಡಿದ್ದಾರೆ.

15 ದಿನಗಳ ಹಿಂದೆ ನಡೆದ ಘಟನೆ, ಈಗ ಬೆಳಕಿಗೆ: ಅಂದ ಹಾಗೆ ಈ ಘಟನೆ ನಡೆದಿದ್ದು, ಸುಮಾರು 15 ದಿನಗಳ ಹಿಂದೆ. ಬುಧವಾರ ಈ ವಿಡಿಯೋ ವೈರಲ್​ ಆಗಿದೆ. ಇದನ್ನು ವೀಕ್ಷಣೆ ಮಾಡಿದ ಜನರು, ಸಲೂನ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಈ ಸಂಬಂಧ ಬಂದ ದೂರು ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು ತಡರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ. ಇದಾದ ನಂತರ ಅವರ ಸಲೂನ್ ಅನ್ನು ಬುಲ್ಡೋಜರ್‌ ಹಚ್ಚಿ ಕೆಡವಿ ತಕ್ಕ ಪಾಠವನ್ನೂ ಕಲಿಸಿದ್ದಾರೆ.

ಅಸಹ್ಯಕರ ವಿಡಿಯೋ ವೈರಲ್​; ಈ ಸಲೂನ್​​ ಕನೌಜ್​​ನ ತಿಲಾ ಮೊಹಲ್ಲಾ ತಾಲ್ಗ್ರಾಮ್ ಪ್ರದೇಶದಲ್ಲಿದೆ. ಅದೇ ಪ್ರದೇಶದ ನಿವಾಸಿ ಯೂಸುಫ್ ಛಿಬ್ರಮೌ ರಸ್ತೆಯಲ್ಲಿ ಸಲೂನ್ ನಡೆಸುತ್ತಿದ್ದಾರೆ. ಬುಧವಾರ, ಯೂಸುಫ್ ಅವರ ಅಸಹ್ಯಕರ ಕೃತ್ಯದ ವಿಡಿಯೋ ಹೊರಬಿದ್ದಿದೆ. ಸಲೂನ್ ನಲ್ಲಿ ಮಸಾಜ್ ಮಾಡಿಸಿಕೊಳ್ಳಲು ಬಂದಿದ್ದ ವ್ಯಕ್ತಿಗೆ ಉಗುಳಿ ಮಸಾಜ್ ಮಾಡುತ್ತಿರುವುದು ಕಂಡು ಬಂದಿದೆ. ಅದನ್ನು ಅವರೇ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಪೊಲೀಸರಿಂದ ಬುಲ್ಡೋಜರ್​ ಕಾರ್ಯಾಚರಣೆ: ಪೊಲೀಸರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ತನಿಖೆ ಆರಂಭಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದಾರೆ. ಮಸಾಜ್​ ಮಾಡುತ್ತಿರುವ ಸಿಬ್ಬಂದಿ ಕಿವುಡ ಮತ್ತು ಮೂಕ ಎಂದು ಹೇಳಲಾಗುತ್ತಿದೆ. ಸರ್ಕಾರಿ ಜಮೀನಿನಲ್ಲಿ ಗೂಡಂಗಡಿ ಇಟ್ಟುಕೊಂಡು ಅಕ್ರಮವಾಗಿ ಅಂಗಡಿ ನಡೆಸುತ್ತಿದ್ದಾರೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆ ಬಳಿಕ ಉಗುಳಿ ಮಸಾಜ್​ ಮಾಡಿದ ಸಂಬಂಧವಾಗಿ ತಹಸಿಲ್ ಆಡಳಿತದ ನೆರವಿನೊಂದಿಗೆ ಪೊಲೀಸರು ಬುಲ್ಡೋಜರ್‌ನಿಂದ ಆತನ ಅಂಗಡಿಯನ್ನು ತೆರವುಗೊಳಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಆನಂದ್ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಉತ್ತರಾಖಂಡ:ಕೊಚ್ಚಿ ಹೋದ ರುದ್ರಪ್ರಯಾಗದ ಸೋನಪ್ರಯಾಗ ತಾತ್ಕಾಲಿಕ ಸೇತುವೆ - Temporary bridge Washout

ETV Bharat Logo

Copyright © 2024 Ushodaya Enterprises Pvt. Ltd., All Rights Reserved.