ETV Bharat / bharat

ನಾಯಿ ಮರಿಗಳ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಮಹಿಳೆಯರು: ಪ್ರಕರಣ ದಾಖಲು

ನಾಯಿ ಮರಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಮೀರತ್​ನಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳೆಯರಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

UP Case Registered Against 2 Women For Burning Alive Newborn Puppies By Pouring Petrol Over Them
ಸಾಂದರ್ಭಿಕ ಚಿತ್ರ (ANI)
author img

By ETV Bharat Karnataka Team

Published : Nov 9, 2024, 1:54 PM IST

ಮೀರತ್ (ಉತ್ತರ ಪ್ರದೇಶ)​: ರಾತ್ರಿ ವೇಳೆ ಬೊಗಳುವ ಮೂಲಕ ನಿದ್ರೆಗೆ ಅಡ್ಡಿ ಮಾಡುತ್ತಿವೆ ಎಂದು ಐದು ನಾಯಿ ಮರಿಗಳಿಗೆ ಮಹಿಳೆಯರಿಬ್ಬರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳೆಯರಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಸಿಐಎಸ್​ಎಫ್​ ಸಿಬ್ಬಂದಿ ಪತ್ನಿಯರಾದ ಶೋಭಾ ಮತ್ತು ಆರತಿ ವಿರುದ್ಧ ಇದೀಗ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 325 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೀರತ್​ನ ರೋಹ್ತಾ ರಸ್ತೆಯಲ್ಲಿರುವ ಸಂತ ನಗರ ಕಾಲೋನಿಯಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಶುಕ್ರವಾರ ದೂರು ಸಲ್ಲಿಕೆಯಾಗಿದೆ. ಮೀರತ್​ ಪ್ರಾಣಿದಯಾ ಸಂಘಟನೆಯ ಸದಸ್ಯರು ಘಟನೆಯನ್ನು ಖಂಡಿಸಿ ಕಂಕೇರಖೇಡ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.

ತಪ್ಪೊಪ್ಪಿಗೆ: ಮೂರು ದಿನಗಳ ಹಿಂದೆ ಜನ್ಮ ಪಡೆದ ಐದು ಬೀದಿ ನಾಯಿಗಳ ಮರಿಗಳು ರಾತ್ರಿ ವೇಳೆ ಶಬ್ಧ ಮಾಡುವುದರಿಂದ ನಿದ್ದೆಗೆ ಅಡ್ಡಿ ಆಗುತ್ತಿತ್ತು. ರಾತ್ರಿ ಸಮಯದಲ್ಲಿ ಮರಿಗಳ ಬೊಗಳುವದನ್ನು ಕೇಳಲಾಗದೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವುದಾಗಿ ಮಹಿಳೆಯರು ತಪ್ಪೊಪ್ಪಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೀರತ್​ ವ್ಯಾಪಾರ್​ ಮಂಡಲ್​ ಸಿಒ ದೌರಾಲಾ ಸುಚಿತಾ ಸಿಂಗ್​ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಘಟನೆ ಕುರಿತು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್​ ಅಧಿಕಾರಿ ಜಿತೇಂದ್ರ ಕುಮಾರ್​ ಕೂಡ ತಿಳಿಸಿದ್ದಾರೆ.

ದೇಶದಲ್ಲಿ ನಾಯಿಗಳ ಮೇಲೆ ಮಾನವೀಯತೆ ಮರೆತು ನಡೆಯುತ್ತಿರುವ ಅಪರಾಧಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಈ ವರ್ಷದ ಆರಂಭದಲ್ಲಿ ಕೂಡ ಅಪ್ರಾಪ್ತ ಬಾಲಕನೊಬ್ಬ ನಾಯಿ ಮರಿಯನ್ನು ಗ್ರೇಟರ್​ ನೋಯ್ಡಾದಲ್ಲಿ ಬಹುಮಹಡಿ ಕಟ್ಟಡದಿಂದ ತಳ್ಳಿದ್ದ. ಈ ಕುರಿತು ವಿಚಾರಣೆ ನಡೆಸಿದಾಗ ದೊಡ್ಡವರ ಮಾತಿನಂತೆ ತಾನು ಕಾರ್ಯ ನಡೆಸಿದ್ದಾಗಿ ಬಾಯ್ಬಿಟ್ಟಿದ್ದ.

ಪ್ರಾಣಿಗಳ ಮೇಲಿನ ಕ್ರೂರತೆ ತಡೆ ಕಾಯ್ದೆ 1960: ಮೂಕ ಪ್ರಾಣಿಗಳಿಗೆ ಅನಗತ್ಯ ನೋವು ಉಂಟು ಮಾಡುವುದನ್ನು ತಡೆಗಟ್ಟಲು, ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಕಾನೂನು ಇದೆ. ಬೀದಿನಾಯಿಗಳಿಗೆ ಹಾನಿ ಮಾಡುವ ಜನರ ವಿರುದ್ಧ 1960 ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬಹುದಾಗಿದೆ.

ಇದನ್ನೂ ಓದಿ: ಯೂಟ್ಯೂಬ್​ ನೋಡಿಕೊಂಡು ನಕಲಿ ನೋಟ್​​ ಪ್ರಿಂಟ್​ ಮಾಡುತ್ತಿದ್ದ ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.