ETV Bharat / bharat

ದಕ್ಷಿಣ - ದಕ್ಷಿಣ ಸಹಕಾರಕ್ಕಾಗಿ ಅಂತಾರಾಷ್ಟ್ರೀಯ ದಿನ 2024: ಈ ದಿನದ ಇತಿಹಾಸ, ಮಹತ್ವ ಹೀಗಿದೆ! - South South Cooperation 2024 - SOUTH SOUTH COOPERATION 2024

ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ಅಂತಾರಾಷ್ಟ್ರೀಯ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 12 ರಂದು ಆಚರಿಸಲಾಗುತ್ತದೆ. ಭೂಮಿಯ ಸಮಭಾಜಕ ವೃತ್ತದ ದಕ್ಷಿಣದಲ್ಲಿರುವ ರಾಷ್ಟ್ರಗಳ ಅಭಿವೃದ್ಧಿ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವಿಶ್ವಸಂಸ್ಥೆ
ವಿಶ್ವಸಂಸ್ಥೆ (ETV Bharat)
author img

By ETV Bharat Karnataka Team

Published : Sep 12, 2024, 4:45 AM IST

ಹೈದರಾಬಾದ್​: ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ಅಂತಾರಾಷ್ಟ್ರೀಯ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 12 ರಂದು ಆಚರಿಸಲಾಗುತ್ತದೆ.

ಈ ದಿನದ ಇತಿಹಾಸ: ದಕ್ಷಿಣ - ದಕ್ಷಿಣ ಸಹಕಾರಕ್ಕಾಗಿ ಅಂತಾರಾಷ್ಟ್ರೀಯ ದಿನವನ್ನು 2011 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ದಕ್ಷಿಣ-ದಕ್ಷಿಣ ಸಹಕಾರದ ಮಹತ್ವವನ್ನು ಎತ್ತಿ ತೋರಿಸಲು, ವಿಶ್ವಸಂಸ್ಥೆಯು ತನ್ನ ಸಾಮಾನ್ಯ ಸಭೆ ನಿರ್ಣಯ 58/220 ರಲ್ಲಿ ಪ್ರತಿವರ್ಷ ಸೆಪ್ಟೆಂಬರ್ 12 ರಂದು ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ಅಂತಾರಾಷ್ಟೀಯ ದಿನವನ್ನು ಆಚರಿಸಲು ನಿರ್ಧರಿಸಿತು.

ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ತಾಂತ್ರಿಕ ಸಹಕಾರವನ್ನು ಉತ್ತೇಜಿಸಲು ಮತ್ತು ಅವುಗಳನ್ನು ಅನುಷ್ಠಾನಗೊಳಿಸಲು ಬ್ಯೂನಸ್ ಐರಿಸ್ ಕ್ರಿಯಾ ಯೋಜನೆಯನ್ನು (BAPA) 1978 ರಲ್ಲಿ ಅಂಗೀಕರಿಸಿದ ನೆನಪಿಗಾಗಿ ಈ ದಿನಾಂಕದಂದು ದಕ್ಷಿಣ - ದಕ್ಷಿಣ ಸಹಕಾರಕ್ಕಾಗಿ ಅಂತಾರಾಷ್ಟ್ರೀಯ ದಿನ ಆಚರಿಸಲು ನಿರ್ಣಯಿಸಲಾಯಿತು.

ವರ್ಷದ ಥೀಮ್: "ದಕ್ಷಿಣ-ದಕ್ಷಿಣ ಸಹಕಾರದ ಮೂಲಕ ಉತ್ತಮ ನಾಳೆ"(A Better Tomorrow through South-South Cooperation) ಎಂಬುದಾಗಿದೆ.

ಈ ದಿನ ಪ್ರಗತಿಯನ್ನು ನಿರ್ಣಯಿಸಲು ಮತ್ತು ಹೊಸ ಟ್ರೆಂಡ್ ಜೊತೆಗೆ ಜಾಗತಿಕ ದಕ್ಷಿಣದ ದೇಶಗಳ ನಡುವಿನ ಸಹಕಾರಕ್ಕಾಗಿ ಅವಕಾಶಗಳು ಹಾಗೂ ಸವಾಲುಗಳನ್ನು ಒತ್ತಿಹೇಳಲು ವೇದಿಕೆಯಾಗಿದೆ. ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಗುರಿಯೊಂದಿಗೆ ಪ್ರಾದೇಶಿಕ ಮತ್ತು ಜಾಗತಿಕ ಉದ್ದೇಶಗಳನ್ನು ಸಾಧಿಸುವಲ್ಲಿ ದಕ್ಷಿಣ-ದಕ್ಷಿಣ ಸಹಕಾರದ ಪ್ರಗತಿಯನ್ನು ಪರಿಶೀಲಿಸಲು ಮತ್ತು ವಿವಿಧ ಪ್ರದೇಶಗಳನ್ನು ಮತ್ತಷ್ಟು ಅನ್ವೇಷಿಸಲು ಇದು ಒಂದು ಅವಕಾಶವಾಗಿದೆ.

ದಕ್ಷಿಣ-ದಕ್ಷಿಣ ಸಹಕಾರ: ದಕ್ಷಿಣ-ದಕ್ಷಿಣ ಸಹಕಾರವು ದಕ್ಷಿಣದ ಜನರು ಮತ್ತು ದೇಶಗಳ ನಡುವಿನ ಒಗ್ಗಟ್ಟಿನ ಅಭಿವ್ಯಕ್ತಿಯಾಗಿದ್ದು, ಇದು ಅವರ ರಾಷ್ಟ್ರೀಯ ಯೋಗಕ್ಷೇಮ, ರಾಷ್ಟ್ರೀಯ ಹಾಗೂ ಸಾಮೂಹಿಕ ಸ್ವಾವಲಂಬನೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ 2030ರ ಅಜೆಂಡಾ ಸೇರಿದಂತೆ ಅಂತಾರಾಷ್ಟ್ರೀಯವಾಗಿ ಒಪ್ಪಿತ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಕೊಡುಗೆ ನೀಡುತ್ತದೆ.

ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ದಕ್ಷಿಣದ ದೇಶಗಳ ನಡುವೆ ಸಹಯೋಗದ ಮೂಲಕ ದಕ್ಷಿಣ - ದಕ್ಷಿಣ ಸಹಕಾರವನ್ನು ಮಾಡಲಾಗುತ್ತದೆ. ಎರಡು ಅಥವಾ ಹೆಚ್ಚು ಅಭಿವೃದ್ಧಿಶೀಲ ದೇಶಗಳನ್ನು ಒಳಗೊಂಡಂತೆ, ಇದು ದ್ವಿಪಕ್ಷೀಯ, ಪ್ರಾದೇಶಿಕ, ಅಂತರ ಪ್ರಾದೇಶಿಕ ಆಧಾರದ ಮೇಲೆ ನಡೆಯಬಹುದು.

ದಕ್ಷಿಣ - ದಕ್ಷಿಣ ಸಹಯೋಗದ ಮೂಲಕ, ಅಭಿವೃದ್ಧಿಶೀಲ ರಾಷ್ಟ್ರಗಳು ಸಂಘಟಿತ ಪ್ರಯತ್ನಗಳ ಮೂಲಕ ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಜ್ಞಾನ, ಕೌಶಲ್ಯಗಳು, ಪರಿಣತಿ ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತವೆ. ಈ ಸಹಯೋಗದ ಮನೋಭಾವವನ್ನು ಹೆಚ್ಚಿಸಲು, ವಿಶ್ವಸಂಸ್ಥೆಯ ದಕ್ಷಿಣ-ದಕ್ಷಿಣ ಸಹಕಾರ ಕಚೇರಿ (UNOSSC) ಜಾಗತಿಕ ಮತ್ತು ಭಿವೃದ್ಧಿಗಾಗಿ ದಕ್ಷಿಣ-ದಕ್ಷಿಣ ಮತ್ತು ತ್ರಿಕೋನ ಸಹಕಾರವನ್ನು ಉತ್ತೇಜಿಸುತ್ತದೆ.

ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ವಿಶ್ವಸಂಸ್ಥೆಯ ದಿನ: ವಿಶ್ವಸಂಸ್ಥೆಯ ದಕ್ಷಿಣ-ದಕ್ಷಿಣ ಸಹಕಾರ ದಿನವು ಇತ್ತೀಚಿನ ವರ್ಷಗಳಲ್ಲಿ ದಕ್ಷಿಣದ ದೇಶಗಳು ಮಾಡಿದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳನ್ನು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ತಾಂತ್ರಿಕ ಸಹಕಾರಕ್ಕಾಗಿ ಕೆಲಸ ಮಾಡುವ ವಿಶ್ವಸಂಸ್ಥೆಯ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ.

ಭಾರತ ಮತ್ತು ದಕ್ಷಿಣ-ದಕ್ಷಿಣ ಸಹಕಾರ:

  • ಜಾಗತಿಕ ದಕ್ಷಿಣದಲ್ಲಿ ಭಾರತದ ಪ್ರಮುಖ ಪಾತ್ರ ಪ್ರಶ್ನಾತೀತವಾಗಿದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಸಹಯೋಗವನ್ನು ಬೆಳೆಸಲು ದಕ್ಷಿಣ-ದಕ್ಷಿಣ ಸಹಕಾರದಲ್ಲಿ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ.
  • ಭಾರತವು 2024 ರ ಆಗಸ್ಟ್ 17 ರಂದು 3ನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯನ್ನು ಆಯೋಜಿಸಿತ್ತು.
  • ಈ ವಿಶಿಷ್ಟ ಉಪಕ್ರಮವು ಪ್ರಧಾನಿ ನರೇಂದ್ರ ಮೋದಿಯವರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್' ದೃಷ್ಟಿಕೋನದ ಮಹತ್ವಾಕಾಂಕ್ಷೆಯಾಗಿ ಪ್ರಾರಂಭವಾಯಿತು ಮತ್ತು ಇದು ಭಾರತದ "ವಸುದೈವ ಕುಟುಂಬಕಂ ತತ್ವ"ದ ಆಧಾರವಾಗಿದೆ.
  • ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಪ್ರತಿನಿಧಿಗಳು, ವಿಶ್ವಾದ್ಯಂತದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅಸಾಧಾರಣ ನಾಯಕತ್ವಕ್ಕಾಗಿ ಮತ್ತು ಜಾಗತಿಕ ದಕ್ಷಿಣದ ದೇಶಗಳ ನಡುವಿನ ಸಹಯೋಗದ ಬೆಂಬಲಕ್ಕಾಗಿ ಭಾರತವನ್ನು ದಕ್ಷಿಣ-ದಕ್ಷಿಣ ಸಹಕಾರದ ಚಾಂಪಿಯನ್ ಎಂದು ಶ್ಲಾಘಿಸಿದ್ದಾರೆ.
  • ಭಾರತ-ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಫಂಡ್ 54 ಉದಯೋನ್ಮುಖ ರಾಷ್ಟ್ರಗಳಲ್ಲಿ 76 ಅಭಿವೃದ್ಧಿ ಉಪಕ್ರಮಗಳನ್ನು ಬೆಂಬಲಿಸಿದೆ.
  • 78ನೇ ಯುಎನ್ ಜನರಲ್ ಅಸೆಂಬ್ಲಿಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಇದನ್ನು ಮಹತ್ವದ ಸಾಧನೆ ಎಂದು ಬಣ್ಣಿಸಿದ್ದಾರೆ.
  • ನವೆಂಬರ್ 2023 ರಲ್ಲಿ, ಯುನೈಟೆಡ್ ನೇಷನ್ಸ್ ಡೆಪ್ಯುಟಿ ಸೆಕ್ರೆಟರಿ-ಜನರಲ್ ಅಮಿನಾ ಜೆ ಮೊಹಮ್ಮದ್ ಅವರು ಭಾರತವನ್ನು ದಕ್ಷಿಣ-ದಕ್ಷಿಣ ಸಹಕಾರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDG) ಸಾಧಿಸುವ ವಿಶ್ವವ್ಯಾಪಿ ಪ್ರಯತ್ನಗಳನ್ನು ಬೆಂಬಲಿಸುತ್ತಿರುವುದಕ್ಕಾಗಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ವಿಶ್ವ ಆತ್ಮಹತ್ಯೆ ತಡೆ ದಿನ 2024: ಆತ್ಮಹತ್ಯೆಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? - World Suicide Prevention Day

ETV Bharat Logo

Copyright © 2024 Ushodaya Enterprises Pvt. Ltd., All Rights Reserved.