ETV Bharat / bharat

ಕೇಂದ್ರ ಬಜೆಟ್‌ನತ್ತ ಇಡೀ ದೇಶದ ಚಿತ್ತ​: ಜನರ ನಿರೀಕ್ಷೆಗಳೇನು? ಬಜೆಟ್​ ಭಾಷಣ ಹೀಗೆ ವೀಕ್ಷಿಸಿ - Union Budget 2024

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಬಜೆಟ್​ ಮಂಡನೆ ಮಾಡಲಿದ್ದಾರೆ. ಇದು ಅವರ ಸತತ 7ನೇ ಆಯವ್ಯಯ ಭಾಷಣ. ಆರ್ಥಿಕ ವೃದ್ಧಿಗೆ ಸರ್ಕಾರದ ಕ್ರಮಗಳೇನು ಎಂಬ ಬಗ್ಗೆ ನಿರೀಕ್ಷೆ ಗರಿಗೆದರಿದೆ.

ಕೇಂದ್ರ ಬಜೆಟ್​ ಮಂಡನೆ
ಕೇಂದ್ರ ಬಜೆಟ್​ ಇಂದು (ETV Bharat)
author img

By ETV Bharat Karnataka Team

Published : Jul 22, 2024, 10:57 PM IST

Updated : Jul 23, 2024, 9:30 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸತತ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್​​ ಇಂದು ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ಸತತ 7ನೇ ಆಯವ್ಯಯ ಪ್ರಸ್ತುತಪಡಿಸಲಿದ್ದಾರೆ. ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್​ ಮಂಡಿಸಿದ್ದರು. ಮೋದಿ 3.0 ಸರ್ಕಾರದ ಮೊದಲ ಬಜೆಟ್​ ಆಗಿರುವ ಕಾರಣ ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ.

2024-25ರ ಸಾಲಿನ ಪೂರ್ಣ ಬಜೆಟ್​ ಇದಾಗಿದ್ದು, ಬೆಳಗ್ಗೆ 11 ಗಂಟೆಯಿಂದ ನಿರ್ಮಲಾ ಮಂಡನೆ ಆರಂಭಿಸಲಿದ್ದಾರೆ. ಎನ್​​ಡಿಎ ಮಿತ್ರಪಕ್ಷಗಳ ಸಹಕಾರದೊಂದಿಗೆ ಸರ್ಕಾರ ರಚನೆ ಮಾಡಿರುವ ಮೋದಿ, ತಮ್ಮ ಮಿತ್ರರ ಬೇಡಿಕೆಗಳನ್ನು ಈಡೇರಿಸುವ ಮೂಲಕ 2047ರ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್​ ಮಂಡಿಸಬೇಕಿದೆ.

ಬಜೆಟ್​ ಗಾತ್ರವೆಷ್ಟು?: 2024-25ರ ಹಣಕಾಸು ವರ್ಷದ ಬಜೆಟ್​ ಗಾತ್ರವು ಅಂದಾಜು 47.66 ಲಕ್ಷ ಕೋಟಿ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಬಜೆಟ್ ಗಾತ್ರ ಶೇಕಡಾ 76ಕ್ಕಿಂತ ಹೆಚ್ಚಾಗಿದೆ. ಕೇಂದ್ರ ಬಜೆಟ್​ನ ಈ ಬೃಹತ್ ಮೊತ್ತವು ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಅಂದಾಜು ನಾಮಿನಲ್ ಜಿಡಿಪಿಯ ಶೇಕಡಾ 15ರಷ್ಟಿದೆ.

ಬಜೆಟ್​​ಗೂ ಮೊದಲು ಸೋಮವಾರ ಮಂಡನೆಯಾದ ಆರ್ಥಿಕ ಸಮೀಕ್ಷೆಯಲ್ಲಿ ನವಭಾರತದ ಕನಸನ್ನು ಬಿಚ್ಚಿಡಲಾಗಿದೆ. ದೇಶದ ಈಗಿನ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ವಿವರಿಸಲಾಗಿದೆ. 2024-25ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡಾ 6.5ರಿಂದ 7ಕ್ಕೆ ಅಂದಾಜಿಸಲಾಗಿದೆ. ಭಾರತದ ನೈಜ ಜಿಡಿಪಿ 2024ರ ಹಣಕಾಸು ವರ್ಷದಲ್ಲಿ ಶೇಕಡಾ 8.2ರಷ್ಟು ಬೆಳೆದಿದೆ. ಇದು ಹಣಕಾಸು ವರ್ಷ 2024ರ ನಾಲ್ಕು ತ್ರೈಮಾಸಿಕಗಳ ಪೈಕಿ ಮೂರು ತ್ರೈಮಾಸಿಕಗಳಲ್ಲಿ ಶೇಕಡಾ 8ರ ಗಡಿ ಮೀರಿದೆ.

ಹಣದುಬ್ಬರ ಗಮನಾರ್ಹ ಇಳಿಕೆ: ಸರಿಯಾದ ನೀತಿಗಳನ್ನು ಜಾರಿಗೊಳಿಸಿದ್ದರಿಂದ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬೆಲೆ ಸ್ಥಿರತೆ ಕ್ರಮಗಳು ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.4ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಹಣಕಾಸು ವರ್ಷ 2022 ಮತ್ತು 2023ರ ಅವಧಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಪೂರೈಕೆ ಅಡೆ ತಡೆಗಳು ಜಾಗತಿಕವಾಗಿ ಹಣದುಬ್ಬರದ ಒತ್ತಡವನ್ನು ಹೆಚ್ಚಿಸಲು ಕಾರಣವಾಗಿವೆ ಎಂದು ಸಮೀಕ್ಷೆ ಹೇಳಿದೆ.

ವಿದೇಶಿ ಬಂಡವಾಳ ಹೂಡಿಕೆಯ ಹೆಚ್ಚಳ, ವಿದ್ಯುತ್​ ಸಾಮರ್ಥ್ಯ ದುಪ್ಪಟ್ಟು ಮಾಡುವ ಗುರಿ, ಬ್ಯಾಂಕಿಂಗ್​ ಮತ್ತು ಹಣಕಾಸು ವಲಯದ ಬಲವರ್ಧನೆ, ಷೇರು ಮಾರುಕಟ್ಟೆಯಲ್ಲಿನ ಪ್ರಗತಿಯನ್ನು ಮತ್ತಷ್ಟು ವೃದ್ಧಿಸುವುದು ಬಜೆಟ್​ ಭಾಗವಾಗಿರಲಿವೆ ಎಂದು ಅಂದಾಜಿಸಲಾಗಿದೆ.

ಬಜೆಟ್​ ಭಾಷಣ ಎಲ್ಲಿ ವೀಕ್ಷಿಸಬಹುದು?: ಬಜೆಟ್​ ಭಾಷಣ ಹಲವು ವೇದಿಕೆಗಳಲ್ಲಿ ನೇರಪ್ರಸಾರವಾಗಲಿದೆ. ಕೇಂದ್ರ ಸರ್ಕಾರದ ಸಂಸದ್​ ಟಿವಿ ಮತ್ತು ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗುತ್ತದೆ. ಈ ವಾಹಿನಿಗಳ ಯೂಟ್ಯೂಬ್​ ಚಾನಲ್​​ನಲ್ಲೂ ಲೈವ್​ ಲಭ್ಯ. ಇಂಡಿಯಾ ಬಜೆಟ್​​ ವೆಬ್​ಸೈಟ್​ನಲ್ಲೂ ಲೈವ್​ಸ್ಟ್ರೀಮ್​ ಇರುತ್ತದೆ.

ಬಜೆಟ್​ನ ವಿಶೇಷತೆಗಳು:

  • ಭಾರತದ ಮೊದಲ ಬಜೆಟ್ ಅನ್ನು ಜೇಮ್ಸ್​ ವಿಲ್ಸನ್​ 1860ರಲ್ಲಿ ಮಂಡಿಸಿದರು.
  • ದೇಶ ಸ್ವಾತಂತ್ರ್ಯವಾದ ಬಳಿಕ 1947ರ ನವೆಂಬರ್​ 26ರಂದು ಮೊದಲ ಬಜೆಟ್​ ಮಂಡಿಸಲಾಯಿತು.
  • ಷಣ್ಮುಗಂ ಚೆಟ್ಟಿ ಬಜೆಟ್​ ಮಂಡಿಸಿದ ಮೊದಲ ಭಾರತೀಯ.
  • ನಿರ್ಮಲಾ ಸೀತಾರಾಮನ್​ ಈವರೆಗೆ ಸತತ 6 ಬಜೆಟ್​ ಮಂಡಿಸಿದ್ದಾರೆ. ಜುಲೈ 23ರಂದಿನ ಬಜೆಟ್​ 7ನೇಯದ್ದು.
  • ಯಶವಂತ್​ ಸಿನ್ಹಾ, ಸಿ.ಡಿ.ದೇಶ್​​ಮುಖ್​​ ಈವರೆಗೂ 7 ಬಜೆಟ್​ ಮಂಡಿಸಿದ್ದಾರೆ.
  • ಪ್ರಣಬ್​ ಮುಖರ್ಜಿ 8, ಪಿ.ಚಿದಂಬರಂ 9 ಆಯವ್ಯಯ ಮಂಡನೆ ಮಾಡಿದ್ದಾರೆ.
  • ಮೊರಾರ್ಜಿ ದೇಸಾಯಿ 10 ಬಾರಿ ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವರು.

ಇದನ್ನೂ ಓದಿ: ಆರ್ಥಿಕ ಸಮೀಕ್ಷೆ: ನವಭಾರತಕ್ಕಾಗಿ 6 ಮಂತ್ರಗಳು, ಎಫ್​​ಡಿಐ ಹೆಚ್ಚಳ ಗುರಿ, ಬ್ಯಾಂಕಿಂಗ್​, ಷೇರು ಮಾರುಕಟ್ಟೆ ಬಲವರ್ಧನೆ - Economic Survey key points

Last Updated : Jul 23, 2024, 9:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.