ETV Bharat / bharat

ಮಕ್ಕಳ ಹೆಸರಿನಲ್ಲೂ ಆರಂಭಿಸಬಹುದು ಪಿಂಚಣಿ ಯೋಜನೆ: ಇಲ್ಲಿದೆ ವಾತ್ಸಲ್ಯ ಸ್ಕೀಂ ಮಾಹಿತಿ - NPS VATSALYA - NPS VATSALYA

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಎನ್‌ಪಿಎಸ್ ವಾತ್ಸಲ್ಯ ಎಂಬ ಹೊಸ ಪಿಂಚಣಿ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಡಿ ಮಕ್ಕಳ ಹೆಸರಿನಲ್ಲಿ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಬಹುದು. ಈ ಯೋಜನೆಯ ವಿವರ ಇಲ್ಲಿದೆ.

ಮಕ್ಕಳ ಹೆಸರಿನಲ್ಲಿ ಉಳಿತಾಯಕ್ಕಾಗಿ ಹೊಸ ಯೋಜನೆ NPS ವಾತ್ಸಲ್ಯ
ಮಕ್ಕಳ ಹೆಸರಿನಲ್ಲಿ ಉಳಿತಾಯಕ್ಕಾಗಿ ಹೊಸ ಯೋಜನೆ NPS ವಾತ್ಸಲ್ಯ (ETV Bharat)
author img

By ETV Bharat Karnataka Team

Published : Jul 23, 2024, 5:58 PM IST

Updated : Jul 23, 2024, 6:19 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಿದ್ದಾರೆ. ಅಪ್ರಾಪ್ತ ಮಕ್ಕಳ ಹೆಸರಿನಲ್ಲೂ ಖಾತೆ ತೆರೆದು ಹಣದ ಉಳಿತಾಯ ಮಾಡಲು ಈ ಯೋಜನೆ ಅವಕಾಶ ನೀಡಲಿದೆ. ಅಂದರೆ, ಪೋಷಕರು ಮಕ್ಕಳ ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಿ, ಹೂಡಿಕೆ ಮಾಡಬಹುದು.

ಈ ಯೋಜನೆಗೆ 'ಎನ್‌ಪಿಎಸ್ ವಾತ್ಸಲ್ಯ' ಎಂದು ಹೆಸರಿಸಲಾಗಿದೆ. ಹೆಸರೇ ಸೂಚಿಸುವಂತೆ ಮಕ್ಕಳ ಮೇಲಿನ ಪ್ರೀತಿ, ವಾತ್ಸಲ್ಯದಿಂದ ಅವರ ಭವಿಷ್ಯದ ದೃಷ್ಟಿಯಿಂದ ಅಪ್ರಾಪ್ತ ವಯಸ್ಸಿನಲ್ಲೇ ಅವರಿಗಾಗಿ ಹಣದ ಉಳಿತಾಯ ಮಾಡುವುದಾಗಿದೆ. ಮಕ್ಕಳು ಪ್ರಾಪ್ತರಾದ ಬಳಿಕ ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನಾಗಿ(ಎನ್​​ಪಿಎಸ್​) ಮಾರ್ಪಾಡು ಮಾಡಲು ಅವಕಾಶ ನೀಡಲಾಗುತ್ತದೆ.

ಎನ್​​ಪಿಎಸ್​ಗೆ ಅರ್ಹತೆ: ಎನ್​ಪಿಎಸ್​ ಯೋಜನೆ ಆರಂಭಿಸಲು ಫಲಾನುಭವಿಗಳು ಭಾರತದ ನಿವಾಸಿಯಾಗಿರಬೇಕು. ಅನಿವಾಸಿ ಅಥವಾ ವಿದೇಶಿ ಪ್ರಜೆಯಾಗಿದ್ದರೆ ಷರತ್ತುಗಳಿಗೆ ಬದ್ಧರಾಗಿರಬೇಕು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ದಿನಾಂಕದಂದು ನಿಮ್ಮ ವಯಸ್ಸು 18 ರಿಂದ 70 ವರ್ಷಗಳ ನಡುವೆ ಇರಬೇಕು. ಚಂದಾದಾರರ ನೋಂದಣಿ ಫಾರ್ಮ್ (SRF) ಪ್ರಕಾರ, ಕೆವೈಸಿ ಮಾನದಂಡಗಳನ್ನು ಅನುಸರಿಸಬೇಕು. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಎನ್​ಪಿಎಸ್​ ಖಾತೆ ಆರಂಭಕ್ಕೆ ಅವಕಾಶ ನೀಡಿದೆ. ಜನವರಿ 1, 2004 ರಂದು ಅಥವಾ ನಂತರ ನೇಮಕವಾದ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಎನ್​ಪಿಎಸ್​ ಯೋಜನೆಯಡಿ ಬರಬಹುದು.

ಖಾತೆ ಎಲ್ಲಿ ಆರಂಭಿಸಬಹುದು: ಮಕ್ಕಳ ಭವಿಷ್ಯವನ್ನು ಗಟ್ಟಿಗೊಳಿಸಲು ಈ ಹೊಸ ಸ್ಕೀಂ ಆರಂಭಿಸಲಾಗಿದೆ. ಇದನ್ನು ಅಂಚೆ ಕಚೇರಿಯಲ್ಲಾಗಲಿ ಅಥವಾ ರಾಷ್ಟ್ರೀಯ ಬ್ಯಾಂಕ್​​ನಲ್ಲಾಗಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ(ಎನ್​ಪಿಎಸ್​) ವಾತ್ಸಲ್ಯ ಯೋಜನೆಯನ್ನು ಆರಂಭಿಸಬಹುದು. ಪ್ರತಿ ತಿಂಗಳು ಅಥವಾ ನಿಗದಿತ ಅಂತರದಲ್ಲಿ ಮಕ್ಕಳ ಪೋಷಕರು ಯೋಜನೆಗೆ ಹಣವನ್ನು ಪಾವತಿಸಬೇಕು.

ಎನ್​​ಪಿಎಸ್​ ಯೋಜನೆ ಈಗಾಗಲೇ ಚಾಲ್ತಿಯಲ್ಲಿದೆ. ಆದರೆ, ಇದು 18 ವರ್ಷದ ಒಳಗಿನ ಮಕ್ಕಳಿಗೂ ಅನ್ವಯವಾಗಲಿದೆ. ಈಗಿರುವ ಎನ್​ಪಿಎಸ್​ ಪ್ರಾಪ್ತರಿಗೆ (18 ವರ್ಷ ಮೇಲ್ಪಟ್ಟ) ಮಾತ್ರ ಅನ್ವಯಿಸುತ್ತದೆ. ಇದು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಇರುವ ಸ್ಕೀಂ ಆಗಿರುವ ಕಾರಣ, ಬಳಿಕ ಇದನ್ನು ಸಾಮಾನ್ಯ ಎನ್​​ಪಿಎ ಯೋಜನೆಯನ್ನಾಗಿ ಬದಲಾಯಿಸಿಕೊಳ್ಳಬಹುದು.

ಈ ಉಳಿತಾಯಕ್ಕೆ ತೆರಿಗೆ ವಿನಾಯ್ತಿ: ಯಾವುದೇ ಸರ್ಕಾರಿ ಯೋಜನೆಗಳು ತೆರಿಗೆ ವಿನಾಯ್ತಿಯಿಂದ ಕೂಡಿರುತ್ತವೆ. ಅದರಂತೆ ಇದು ಕೂಡ ತೆರಿಗೆ ಮುಕ್ತವಾಗಿದೆ. ಕನಿಷ್ಠ ವಯಸ್ಸಿನಿಂದ ಗರಿಷ್ಠ ವಯಸ್ಸಿಗೆ ಬರುವಷ್ಟರಲ್ಲಿಗೆ ಯೋಜನೆಯ ಮೊತ್ತವು ದೊಡ್ಡದಾಗಿ ಅದು ಮಕ್ಕಳ ಭವಿಷ್ಯಕ್ಕೆ ನೆರವಾಗಲಿದೆ. ಜೊತೆಗೆ ಇದಕ್ಕೆ ಬಡ್ಡಿ ದರವೂ ಅಧಿಕ ಇರುವ ಕಾರಣ ಮೊತ್ತವು ದುಪ್ಪಟ್ಟಾಗಲಿದೆ.

ಇದನ್ನೂ ಓದಿ: ಆದಾಯ ತೆರಿಗೆದಾರರು ಗಮನಿಸಿ!: ಸ್ಟ್ಯಾಂಡರ್ಡ್ ಡಿಡಕ್ಷನ್ ₹75 ಸಾವಿರಕ್ಕೇರಿಕೆ; ₹3 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ - Income Tax

Last Updated : Jul 23, 2024, 6:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.