ETV Bharat / bharat

ಉದ್ಧವ್ ಠಾಕ್ರೆ ಬಣದ ಮುಖಂಡನ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ - Facebook Live Shootout

ಶಿವಸೇನಾ (ಯುಬಿಟಿ) ಮುಖಂಡ ಅಭಿಷೇಕ್ ಘೋಸಲ್ಕರ್ ಅವರ ಹತ್ಯೆ ಪ್ರಕರಣದಲ್ಲಿ ಮೌರಿಸ್ ನೊರೊನ್ಹಾ ಅವರ ಬೆಂಬಲಿಗರಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಗುಂಡಿಕ್ಕಿ ಹತ್ಯೆ
ಗುಂಡಿಕ್ಕಿ ಹತ್ಯೆ
author img

By ETV Bharat Karnataka Team

Published : Feb 9, 2024, 7:17 AM IST

Updated : Feb 9, 2024, 10:41 AM IST

ಮುಂಬೈ (ಮಹಾರಾಷ್ಟ್ರ) : ಉದ್ಧವ್ ಠಾಕ್ರೆ ಗುಂಪಿನ ಶಿವಸೇನಾ (ಯುಬಿಟಿ) ಮುಖಂಡ ಅಭಿಷೇಕ್ ಘೋಸಲ್ಕರ್ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೌರಿಸ್ ನೊರೊನ್ಹಾ ಅವರ ಕಟ್ಟಾ ಬೆಂಬಲಿಗ ಮೆಹುಲ್ ಪಾರೇಖ್ ಮತ್ತು ರೋಹಿತ್ ಶಾಹು ಅಲಿಯಾಸ್ ರಾವಣ ಎಂದು ಗುರುತಿಸಲಾಗಿದೆ. ಮೃತ ಆರೋಪಿಯಾದ ಮೌರಿಸ್ ನೊರೊನ್ಹಾಗೆ ಈ ಇಬ್ಬರು ಬಂಧಿತ ಆರೋಪಿಗಳು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

ಗುರುವಾರ ಮುಂಬೈನಲ್ಲಿ ಅಭಿಷೇಕ್ ಘೋಸಲ್ಕರ್ ಅವರನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮೌರಿಸ್ ನೊರೊನ್ಹಾ ಫೇಸ್‌ಬುಕ್ ಲೈವ್‌ ವೇಳೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದನು. ಬಳಿಕ ಮೌರಿಸ್ ನೊರೊನ್ಹಾ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದರು.

ಫೇಸ್‌ಬುಕ್ ಲೈವ್‌ ವೇಳೆ ಅಭಿಷೇಕ್ ಘೋಸಲ್ಕರ್ ಮತ್ತು ಮೌರಿಸ್ ನೊರೊನ್ಹಾ ಒಟ್ಟಿಗೆ ಮಾತನಾಡುತ್ತಿದ್ದರು. ಸ್ವಲ್ಪ ಸಮಯದ ಬಳಿಕ ನೊರೊನ್ಹಾ ಎದ್ದು ಹೋಗುತ್ತಾರೆ. ಈ ವೇಳೆ, ಅಭಿಷೇಕ್ ಘೋಸಲ್ಕರ್ ಮೇಲೆ ನೊರೊನ್ಹಾ ಏಕಾಏಕಿ ಮೂರು ಸುತ್ತು ಗುಂಡು ಹಾರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಭಿಷೇಕ್ ಘೋಸಲ್ಕರ್ ಅವರ ಹೊಟ್ಟೆ ಮತ್ತು ಭುಜಕ್ಕೆ ಎರಡು ಗುಂಡು ತಗುಲಿದ್ದು, ಬಳಿಕ ಒಂದು ಗುಂಡಿನ ಶಬ್ದ ವಿಡಿಯೋ ಮರೆಯಲ್ಲಿ ಕೇಳಿ ಬಂದಿದೆ.

ಈ ಹಿಂದಿನಿಂದಲೂ ಇಬ್ಬರು ಕೂಡ ವೈಯಕ್ತಿಕ ದ್ವೇಷ ಹೊಂದಿದ್ದರು. ಆದರೆ ಇತ್ತೀಚೆಗಷ್ಟೇ ಘೋಸಲ್ಕರ್ ಮತ್ತು ನೊರೊನ್ಹಾ ಹೊಂದಾಣಿಕೆ ಮಾಡಿಕೊಂಡಿದ್ದರು. ಹೀಗಾಗಿ ಘೋಸಲ್ಕರ್ ಅವರನ್ನು ನೊರೊನ್ಹಾ ತನ್ನ ಕಚೇರಿಗೆ ಆಹ್ವಾನಿಸಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. ತಾನು ಆತ್ಮಹತ್ಯೆ ಮಾಡಿ ಕೊಳ್ಳುವ ಮೊದಲು ಘೋಸಲ್ಕರ್​ನನ್ನು ಹತ್ಯೆ ಮಾಡಿದ್ದಾನೆ. ಇಡೀ ಈ ಘಟನೆಯನ್ನು ಫೇಸ್ ಬುಕ್​ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿದೆ.

ಇನ್ನು ಇತ್ತೀಚೆಗೆ ಉಲ್ಲಾಸ್‌ನಗರದ ಪೊಲೀಸ್ ಠಾಣೆಯೊಳಗೆ ಏಕನಾಥ್ ಶಿಂಧೆ ಬಣದ ನಾಯಕನ ಮೇಲೆ ಬಿಜೆಪಿ ಶಾಸಕರೊಬ್ಬರು ಗುಂಡು ಹಾರಿಸಿದ್ದ ಘಟನೆ ನಡೆದಿತ್ತು. ಈ ಘಟನೆ ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.

ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದ್ದಾರೆ. ಇನ್ನೊಂದೆಡೆ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಬೇಕು ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ.

ಅಭಿಷೇಕ್ ಘೋಸಲ್ಕರ್ ಅವರನ್ನು ಸಂಜೆಯ ವೇಳೆಗೆ ಭೇಟಿಯಾಗಿದ್ದೆ. ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಕಾನೂನಿನ ಭಯವಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಈ ಹಿಂದೆ ನಡೆದ ಘಟನೆ ಮತ್ತು ಇಂದಿನ ಶೂಟೌಟ್​ ಘಟನೆಗಳು ಸ್ಪಷ್ಟವಾಗಿದೆ ಎಂದು ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ : ಪೊಲೀಸ್​ ಠಾಣೆಯೊಳಗೆ ಗುಂಡು ಹಾರಿಸಿದ ಬಿಜೆಪಿ ಶಾಸಕ: ಶಿಂಧೆ ಶಿವಸೇನಾ ನಾಯಕನಿಗೆ ಗಾಯ

Last Updated : Feb 9, 2024, 10:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.