ಚೆನ್ನೈ (ತಮಿಳುನಾಡು): 5 ವರ್ಷದ ಬಾಲಕಿ ಮೇಲೆ ಎರಡು ರಾಟ್ ವೀಲರ್ ನಾಯಿಗಳು ದಾಳಿ ನಡೆಸಿ ತೀವ್ರವಾಗಿ ಕಚ್ಚಿ ಗಾಯಗೊಳಿಸಿರುವ ಘಟನೆ ಚೆನ್ನೈ ಕಾರ್ಪೋರೇಷನ್ ಪಾರ್ಕ್‌ನಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ : ಶ್ರೀ ರಘು ಅವರು ಚೆನ್ನೈನ ಮಾಡೆಲ್ ಸ್ಕೂಲ್ ರಸ್ತೆಯ ಥೌಸಂಡ್ ಲೈಟ್ ಏರಿಯಾದಲ್ಲಿರುವ ಚೆನ್ನೈ ಕಾರ್ಪೋರೇಷನ್ ಪಾರ್ಕ್‌ನಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿ ಸೋನಿಯಾ ಮತ್ತು 5 ವರ್ಷದ ಮಗಳು ಸುಧಾಕ್ ಶಾ ಅವರೊಂದಿಗೆ ಉದ್ಯಾನದ ಸಣ್ಣ ಕೋಣೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಿನ್ನೆ ಸಂಬಂಧಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ರಘು ವಿಲ್ಲುಪುರಂಗೆ ತೆರಳಿದ್ದರು. ಉದ್ಯಾನದಲ್ಲಿ ತಾಯಿ ಮತ್ತು ಮಗಳು ಮಾತ್ರ ಇದ್ದರು.
ನಿನ್ನೆ ಸಂಜೆ ಪಾರ್ಕ್ ಬಳಿ ವಾಸವಾಗಿರುವ ಪುಗಝೆಂಡಿ ಎಂಬ ವ್ಯಕ್ತಿ ತಾನು ಸಾಕುತ್ತಿರುವ ಎರಡು ರಾಟ್ ವೀಲರ್ ನಾಯಿಗಳೊಂದಿಗೆ ಪಾರ್ಕ್ಗೆ ತೆರಳಿದ್ದಾರೆ. ಈ ವೇಳೆ, ಉದ್ಯಾನದೊಳಗೆ ಆಟವಾಡುತ್ತಿದ್ದ ಕಾವಲುಗಾರನ ಮಗಳು ಸುದಾಕ್ ಶಾಗೆ ಎರಡು ನಾಯಿಗಳು ತೀವ್ರವಾಗಿ ಕಚ್ಚಿವೆ. ಇದನ್ನು ನೋಡಿದ ನಾಯಿಯ ಮಾಲೀಕ ಏನೂ ಮಾಡದೇ ಮೋಜು ಮಾಡುತ್ತಿದ್ದ ಎಂದು ಅಲ್ಲಿ ನೆರೆದಿದ್ದವರು ಹೇಳಿದ್ದಾರೆ. ಮಗುವಿನ ಅಳು ಕೇಳಿ ಓಡಿ ಬಂದ ತಾಯಿ ಎರಡು ನಾಯಿಗಳಿಂದ ಮಗುವನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.
ಆಗ ಅವರ ತಾಯಿ ಸೋನಿಯಾ ಅವರಿಗೂ ಎರಡು ನಾಯಿಗಳು ಕಚ್ಚಿವೆ. ಇದನ್ನು ನೋಡಿದ ನಾಯಿಯ ಮಾಲೀಕ ಏನೂ ಮಾಡದೇ ನಾಯಿಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ವೇಳೆ ನಾಯಿಯ ದಾಳಿಯಿಂದ ಮಗುವಿನ ತಲೆಯ ಭಾಗ ಕೆಳಗೆ ನೇತಾಡಿದೆ. ಕಾಡುಪ್ರಾಣಿಗಳಂತೆ ಬೇಟೆಯಾಡಿದ ನಾಯಿಗಳನ್ನು ಅಕ್ಕಪಕ್ಕದ ಮನೆಯವರು ಹರಸಾಹಸ ಮಾಡಿ ಓಡಿಸಿ ಮಗು ಹಾಗೂ ತಾಯಿಯನ್ನು ರಕ್ಷಿಸಿ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಥೌಸಂಡ್ ಲೈಟ್ ಪೊಲೀಸರು ಸ್ಥಳಕ್ಕೆ ಆಗಮಿಸಿ ನಾಯಿಯ ಮಾಲೀಕ ಪುಗಝೆಂಡಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಬಳಿಕ ನಾಯಿಯ ಮಾಲೀಕರು ಸ್ವಂತ ಖರ್ಚಿನಲ್ಲಿ ಮಗುವನ್ನು ನೋಡಿಕೊಳ್ಳುವುದಾಗಿ ಹೇಳಿ ಮಗುವನ್ನು ಸಮಾಧಾನ ಪಡಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ತಕ್ಷಣ ಮಗುವನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಿಂದ ಥೌಸಂಡ್ ಲೈಟ್ ಏರಿಯಾ ಅಪೋಲೋ ಮಕ್ಕಳ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಸ್ತುತ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದಿಷ್ಟು: ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾತನಾಡಿದ್ದು, "ನಿನ್ನೆ ಸಂಜೆ ನಾಯಿಗಳನ್ನು ಉದ್ಯಾನಕ್ಕೆ ತಂದಾಗ ಅವುಗಳಿಗೆ ಸರಪಳಿ ಹಾಕಿರಲಿಲ್ಲ. ಅಲ್ಲದೇ ನಾಯಿಯ ಬಾಯಿಗೆ ಯಾವುದೇ ರಕ್ಷಣಾತ್ಮಕ ಕವಚವನ್ನು ಹಾಕಿರಲಿಲ್ಲ. ಉದ್ಯಾನಕ್ಕೆ ಪ್ರವೇಶಿಸಿದಾಗ, ಆಟವಾಡುತ್ತಿದ್ದ ಮಗುವನ್ನು ಎರಡು ನಾಯಿಗಳು ಕಚ್ಚಿದವು. ಮತ್ತೊಂದು ನಾಯಿ ಮಗುವಿನ ಕೈ ಕಚ್ಚಿದೆ. ಆಗಲೂ ನಾಯಿಯ ಮಾಲೀಕರು ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ.
ಈ ಪ್ರದೇಶದಲ್ಲಿ ರಕ್ತನಿಧಿ ಕೇಂದ್ರ ನಡೆಸುತ್ತಿದ್ದಾರೆ. ಅವರು ಎರಡು ರಾಟ್ವೀಲರ್ ನಾಯಿಗಳನ್ನು ಸಾಕುತ್ತಾರೆ ಮತ್ತು ಅವುಗಳ ನಾಯಿ ಮರಿಗಳನ್ನು ಮಾರಾಟ ಮಾಡುತ್ತಾರೆ. ಎರಡೂ ನಾಯಿಗಳು ಈಗಾಗಲೇ ಎರಡು ಬಾರಿ ಆ ಪ್ರದೇಶದಲ್ಲಿ ಜನರನ್ನು ಕಚ್ಚಿವೆ. ಆದರೆ, ಅವರು ನಾಯಿಗಳ ಬಾಯಿಗೆ ಯಾವುದೇ ಕವಚ ಹಾಕುವ ಕೆಲಸವನ್ನು ಮಾಡುತ್ತಿಲ್ಲ. 2021ರಲ್ಲಿ ಅದೇ ನಾಯಿಗಳು ರಸ್ತೆಯಲ್ಲಿ ಹೋಗುತ್ತಿದ್ದ ದಾರಿಹೋಕರನ್ನು ಹಿಂಬಾಲಿಸಿ ಬೆದರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾವು ಮಗುವನ್ನು ಆಸ್ಪತ್ರೆಗೆ ಕಳುಹಿಸಿದ ನಂತರ, ಅವನ ಬಳಿಗೆ ಹೋಗಿ ಈ ನಾಯಿಗಳನ್ನು ಇನ್ನು ಮುಂದೆ ಇಲ್ಲಿ ಸಾಕಬಾರದು ಎಂದು ತಿಳಿಸಿದ್ದೇವೆ'' ಎಂದಿದ್ದಾರೆ.
ಪೊಲೀಸರಿಂದ ರಾಟ್ ವೀಲರ್ ನಾಯಿಗಳ ಮಾಲೀಕನ ವಿಚಾರಣೆ: ನಾಯಿಯ ಮಾಲೀಕರನ್ನು ಪೊಲೀಸರು ಇನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ನಾಯಿಯ ಮಾಲೀಕರನ್ನು ರಕ್ಷಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ. ಈ ಬಗ್ಗೆ ಚೆನ್ನೈ ಕಾರ್ಪೊರೇಷನ್ ಕಮಿಷನರ್ ರಾಧಾಕೃಷ್ಣನ್ ಮಾತನಾಡಿ, ''ಕಾರ್ಪೊರೇಷನ್ ಪಾರ್ಕ್‌ನಲ್ಲಿ ನಾಯಿ 5 ವರ್ಷದ ಮಗುವಿಗೆ ಕಚ್ಚಿರುವುದು ಅನಿರೀಕ್ಷಿತ ಘಟನೆ. ಅವರು ಸಾಕುಪ್ರಾಣಿಗಳನ್ನು ಸಾಕಲು ಪರವಾನಗಿ ಪಡೆದಿಲ್ಲ. ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ. ಪಶುಸಂಗೋಪನೆ ಇಲಾಖೆ ಸಹಯೋಗದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ'' ಎಂದಿದ್ದಾರೆ.
''ಜಾನುವಾರುಗಳಿಗೆ ಮತ್ತು ಸಾಕುಪ್ರಾಣಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಪಾಲಿಕೆ ವತಿಯಿಂದ ಯಾವುದೇ ಸಾಕುಪ್ರಾಣಿಗಳಿಗೆ ಪರವಾನಗಿ ನೀಡಬೇಕು ಎಂಬ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮಗುವನ್ನು ಕಚ್ಚಿದ ನಾಯಿಯ ಮಾಲೀಕರಿಗೆ ನೋಟಿಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಣಿ ಕಲ್ಯಾಣ ನಿಯಮಗಳು ತುಂಬಾ ಸವಾಲಿನಿಂದ ಕೂಡಿದ್ದವಾಗಿವೆ . ಪ್ರಾಣಿ ಪ್ರಿಯರನ್ನು ಒಟ್ಟುಗೂಡಿಸಿ ಸಂತ್ರಸ್ತರ ಬಗ್ಗೆ ಮಾತನಾಡಲಾಗುವುದು’’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : 'ಅಪಾಯಕಾರಿ'ಯಾದ ಪಿಟ್ಬುಲ್, ಅಮೆರಿಕನ್ ಬುಲ್ಡಾಗ್ ಸಾಕುವುದಕ್ಕೆ ನಿಷೇಧ