ಬಿಜಾಪುರ (ಛತ್ತೀಸ್ಗಢ): ಛತ್ತೀಸ್ಗಢದಲ್ಲಿ ನಕ್ಸಲರ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಬಿಜಾಪುರ ಜಿಲ್ಲೆಯಲ್ಲಿ ಇಂದು ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಒಬ್ಬ ಮಹಿಳೆ ಸೇರಿ ಇಬ್ಬರು ನಕ್ಸಲರ ಹತರಾಗಿದ್ದಾರೆ. ಮತ್ತೊಂದೆಡೆ, ದಾಂತೇವಾಡ ಜಿಲ್ಲೆಯಲ್ಲಿ 10 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.
ಬಿಜಾಪುರ ಜಿಲ್ಲೆಯ ಮದ್ದೇಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಂಜೆಡ್ ಬಂಡೆಪರ ಅರಣ್ಯದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಈ ಗುಂಡಿನ ಚಕಮಕಿ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ ಮಹಿಳಾ ನಕ್ಸಲೈಟ್ ಮನಿಲಾ ಸೇರಿದಂತೆ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಈ ನಕ್ಸಲ್ ನಾಯಕಿಯ ಸೆರೆಗೆ ಈ ಹಿಂದೆ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ದೊಡ್ಡ-ದೊಡ್ಡ ನಕ್ಸಲ್ ನಾಯಕರೊಂದಿಗೆ 15 ರಿಂದ 20 ಶಸ್ತ್ರಸಜ್ಜಿತ ನಕ್ಸಲರು ಸಭೆ ನಡೆಸುತ್ತಿರುವ ಬಗ್ಗೆ ಬಿಜಾಪುರದ ಡಿಆರ್‌ಜಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಅಂತೆಯೇ, ನಂತರ ಭದ್ರತಾ ಪಡೆಗಳು ವಿಶೇಷ ಕಾರ್ಯಾಚರಣೆ ಶುರು ಮಾಡಿದ್ದರು. ಅಂತೆಯೇ, ಕೊರಂಜೆಡ್-ಬಂಡೆಪಾರಾ ಅರಣ್ಯದಲ್ಲಿ ಪೊಲೀಸ್ ಪಡೆಗಳು ಮತ್ತು ನಕ್ಸಲರ ಗುಂಪು ಮುಖಾಮುಖಿಯಾಗಿದೆ. ಈ ವೇಳೆ ಎರಡೂ ಕಡೆಗಳಿಂದ ಗುಂಡಿನ ದಾಳಿ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ ಮಹಿಳಾ ನಕ್ಸಲೈಟ್ ಸೇರಿದಂತೆ ಇಬ್ಬರು ಸಮವಸ್ತ್ರಧಾರಿ ನಕ್ಸಲರು ಸಾವನ್ನಪ್ಪಿದ್ದಾರೆ. ಈ ಘಟನಾ ಸ್ಥಳದಲ್ಲಿ ಹತ ನಕ್ಸಲರಿಗೆ ಸೇರಿ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಐದು ತಿಂಗಳಲ್ಲೇ 118 ನಕ್ಸಲರ ಹತ್ಯೆ: ಛತ್ತೀಸ್ಗಢದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಈ ವರ್ಷ ಪೊಲೀಸರು ನಕ್ಸಲರ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದ್ದಾರೆ. ಇದುವರೆಗೆ ಇಂದಿನ ಗುಂಡಿನ ಚಕಮಕಿ ಸೇರಿ ಹಲವೆಡೆ ಎನ್‌ಕೌಂಟರ್‌ಗಳಲ್ಲಿ 118 ನಕ್ಸಲರು ಹತರಾಗಿದ್ದಾರೆ. ಮೇ 23ರಂದು ನಾರಾಯಣಪುರ - ಬಿಜಾಪುರ ಜಿಲ್ಲೆಗಳ ಗಡಿಯ ಅರಣ್ಯದಲ್ಲಿ ಏಳು ಮಂದಿ ಕೊಲೆಯಾಗಿದ್ದರು.
ಮೇ 10ರಂದು ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಹತ್ಯೆಯಾಗಿದ್ದರು. ಏಪ್ರಿಲ್ 30ರಂದು ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯ ಅರಣ್ಯದಲ್ಲಿ ಮೂವರು ಮಹಿಳೆಯರು ಸೇರಿದಂತೆ ಹತ್ತು ಜನ ನಕ್ಸಲೀಯರನ್ನು ಸದೆ ಬಡಿಯಲಾಗಿತ್ತು. ಇದಕ್ಕೂ ಮೊದಲು, ಏಪ್ರಿಲ್ 16ರಂದು ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 29 ನಕ್ಸಲರನ್ನು ಹೊಡೆದುರುಳಿಸಲಾಗಿತ್ತು.
10 ನಕ್ಸಲರ ಶರಣಾಗತಿ: ಇದೇ ವೇಳೆ, ರಾಜ್ಯದಲ್ಲಿ ನಕ್ಸಲರ ತನ್ನ ದುಷ್ಕೃತ್ಯಗಳನ್ನು ಬಿಟ್ಟು ಸಮಾಜದ ಮುಖ್ಯ ವಾಹಿನಿಗೂ ಬರುತ್ತಿದ್ದಾರೆ. ಸರ್ಕಾರ ಸಹ ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು 'ಮನೆಗೆ ಹಿಂತಿರುಗಿ' ಎಂಬ ಅಭಿಮಾನ ಕೈಗೊಂಡಿದೆ. ಇದರ ಭಾಗವಾಗಿ ಇಂದು ದಾಂತೇವಾಡ ಜಿಲ್ಲೆಯಲ್ಲಿ 10 ಮಂದಿ ನಕ್ಸಲರು ಶರಣಾಗಿದ್ದಾರೆ.
ಈ ಎಲ್ಲ ಮಾವೋವಾದಿಗಳು ನಕ್ಸಲರು ಬಂದ್ ಸಂದರ್ಭಗಳಲ್ಲಿ ಬ್ಯಾನರ್, ಪೋಸ್ಟರ್‌ಗಳ ಅಂಟಿಸುವುದು, ರಸ್ತೆಗಳ ಕಂದಕಗಳ ಅಗೆಯುವುದು, ಮರಗಳ ಕತ್ತರಿಸುವ ಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಶರಣಾದ ನಕ್ಸಲರಿಗೆ ಪುನರ್ವಸತಿ ಯೋಜನೆಯಡಿ ತಲಾ 25,000 ರೂ.ಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ವಿತರಿಸಿದ್ದಾರೆ. ಇದುವರೆಗೆ 180 ಬಹುಮಾನಿತ ಮಾವೋವಾದಿಗಳು ಸೇರಿದಂತೆ ಒಟ್ಟು 815 ನಕ್ಸಲರು ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ.