ETV Bharat / bharat

ಗಾಳಿಪಟ ಹಿಡಿಯಲು ಹೋಗಿ ರೈಲು​ ಡಿಕ್ಕಿ; ಇಬ್ಬರು ಮಕ್ಕಳು ಸಾವು - Children Died - CHILDREN DIED

ಗಾಳಿಪಟ ಹಿಡಿಯಲು ಮಕ್ಕಳು ರೈಲ್ವೇ ಹಳಿಗಿಳಿದಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ದುರಂತ ಸಂಭವಿಸಿತು.

Etv Bharat
Etv Bharat
author img

By ETV Bharat Karnataka Team

Published : Apr 15, 2024, 2:47 PM IST

ಬರೇಲಿ(ಉತ್ತರ ಪ್ರದೇಶ): ಗಾಳಿಪಟ ಹಿಡಿಯಲು ಹೋಗಿ ರೈಲು ಡಿಕ್ಕಿಯಾಗಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಬರೇಲಿಯ ಸಿಬಿಗಂಜ್​ ಪೊಲೀಸ್​ ಠಾಣೆ ವ್ಯಾಪ್ತಿಯ ಪರ್ಸೋನಾ ಗ್ರಾಮದ ಫೈಜ್ (8) ಮತ್ತು ಮಹೇಶ್‌ಪುರ ಗ್ರಾಮದ ಸಾಜಿದ್ (12) ಮೃತಪಟ್ಟ ಬಾಲಕರು.

ಸಿಬಿಗಂಜ್‌ನ ಮಿಲಾಕ್ ರೋಥಾ ಗ್ರಾಮದಲ್ಲಿ ಭಾನುವಾರ ಸಂಜೆ ಘಟನೆ ನಡೆಯಿತು. ಮಿಲಾಕ್ ರೋಥಾ ಗ್ರಾಮದ ಸಮೀಪದ ರೈಲು ಮಾರ್ಗದ ಸಮೀಪದಲ್ಲಿ ಫೈಜ್​ ಮತ್ತು ಸಾಜಿದ್​ ಆಟವಾಡುತ್ತಿದ್ದರು. ಇವರೊಂದಿಗೆ ಸುತ್ತಮುತ್ತಲಿನ ಇತರ ಮಕ್ಕಳೂ ಕೂಡಾ ಗಾಳಿಪಟ ಹಾರಿಸುತ್ತಿದ್ದರು. ಹಾರಿಬಿಟ್ಟ ಗಾಳಿಪಟಗಳನ್ನು ಮಕ್ಕಳು ಹಿಡಿಯಲು ಓಡಿ ಹೋಗಿದ್ದಾರೆ. ಗಾಳಿಪಟದ ಹಿಂದೆ ಓಡುತ್ತಾ ಫೈಜ್ ಮತ್ತು ಸಾಜಿದ್ ರೈಲು ಮಾರ್ಗ ಪ್ರವೇಶಿಸಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳ ಸಂಪೂರ್ಣ ಗಮನ ಗಾಳಿಪಟದ ಮೇಲಿತ್ತು. ಹಳಿ ರೈಲು ಬರುವುದನ್ನು ಗಮನಿಸಲಿಲ್ಲ. ಪರಿಣಾಮ, ರೈಲು​ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: 'ಪತ್ನಿಗೆ ಇಂಗ್ಲಿಷ್​ ಬರಲ್ಲ, ನನಗೆ ಹಿಂದಿ ಅರ್ಥವಾಗಲ್ಲ': ವಿಚ್ಚೇದನಕ್ಕೆ ವಿಚಿತ್ರ ಕಾರಣ ನೀಡಿದ ಪತಿ! - Language issue case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.