ETV Bharat / bharat

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ: ಮಹಿಳಾ ರೋಗಿ ಸೇರಿ ಇಬ್ಬರ ಬಂಧನ

author img

By ETV Bharat Karnataka Team

Published : Mar 5, 2024, 6:26 PM IST

Updated : Mar 5, 2024, 7:02 PM IST

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನು ಬಂಧಿಸಿರುವ ಘಟನೆ ವೆಲ್ಲೂರಿನಲ್ಲಿ ನಡೆದಿದೆ.

Eಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ: ರೋಗಿ ಸೇರಿ ಇಬ್ಬರ ಬಂಧನ
ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ: ರೋಗಿ ಸೇರಿ ಇಬ್ಬರ ಬಂಧನ

ವೆಲ್ಲೂರು (ತಮಿಳುನಾಡು): ವೆಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಹಿಳಾ ರೋಗಿ ಸೇರಿದಂತೆ ಇಬ್ಬರನ್ನು ವೆಲ್ಲೂರು ತಾಲೂಕು ಪೊಲೀಸರು ಬಂಧಿಸಿದ್ದಾರೆ. ಸುಭಾ ಮತ್ತು ಆಕೆಯ ಸ್ನೇಹಿತ ದಿವಾಕರ್​ ಎಂಬುವವರು ಬಂಧಿತರು ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಶಾಲೆಯೊಂದರಲ್ಲಿ ಶಿಕ್ಷಕಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಭಾ ಒಂದು ವಾರದ ಹಿಂದೆ ಮೂತ್ರನಾಳದ ಸೋಂಕಿನ ಚಿಕಿತ್ಸೆಗಾಗಿ ಕಕ್ಕಂಪರೈನಲ್ಲಿನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳಾ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಸಂಜೆ, ಸುಭಾ ಅವರ ಸ್ನೇಹಿತ ದಿವಾಕರ್ ಆಕೆಯನ್ನು ನೋಡಲೆಂದು ವಾರ್ಡ್‌ಗೆ ಭೇಟಿ ನೀಡಿದ್ದಾನೆ.

ಇದೇ ವೇಳೆ, ಸ್ನಾತಕೋತ್ತರ ದ್ವಿತೀಯ ವರ್ಷ ವೈದ್ಯಕೀಯ ವಿದ್ಯಾರ್ಥಿ ಎಸ್.ವಿಶಾಲ್ ರೌಂಡ್ಸ್‌ನಲ್ಲಿದ್ದಾಗ ವಾರ್ಡ್​ಗೆ ಭೇಟಿ ನೀಡಿದ್ದಾರೆ. ಈ ವೇಳೆ ರೋಗಿ ಸುಭಾಗೆ ಮೀಸಲಿರಿಸಿದ್ದ ಹಾಸಿಗೆ ಮೇಲೆ ದಿವಾಕರ್ ಕುಳಿತಿರುವುದನ್ನು ಕಂಡ ವಿಶಾಲ್​ ಮಹಿಳಾ ವಾರ್ಡ್​ನಲ್ಲಿ ಪುರುಷರಿಗೆ ಪ್ರವೇಶವಿಲ್ಲ ಕೂಡಲೇ ವಾರ್ಡ್​ ​ನಿಂದ ಹೊರ ಹೋಗುವಂತೆ ತಿಳಿಸಿದ್ದಾರೆ.

ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಇದನ್ನು ಕಂಡ ಸುಭಾ ಇಬ್ಬರನ್ನು ತಡೆಯಲು ಮುಂದಾದಾಗ ವಿಶಾಲ್​, ಸುಭಾಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ತಾನು ಧರಿಸಿದ್ದ ಸ್ಲೀಪರ್ ನಿಂದ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾಳೆ. ಘಟನೆ ಬಳಿಕ ವಾರ್ಡ್​ನಲ್ಲಿ ಕೆಲ ಕಾಲ ಆತಂಕದ ವಾತಾವರ್ಣ ಸೃಷ್ಟಿಯಾಗಿದೆ.

ಬಳಿಕ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ವೈದ್ಯಕೀಯ ವಿದ್ಯಾರ್ಥಿ ವಿಶಾಲ್ ನೀಡಿದ ದೂರಿನ ಆಧಾರದ ಮೇಲೆ ಸುಭಾ ಮತ್ತು ಆಕೆಯ ಸ್ನೇಹಿತ ದಿವಾಕರ್ ಇಬ್ಬರ ವಿರುದ್ಧವೂ ವೈದ್ಯರ ಮೇಲೆ ಹಲ್ಲೆ, ಕೆಲಸಕ್ಕೆ ಅಡ್ಡಿ ಸೇರಿದಂತೆ 5 ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಬಳಿಕ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಆಸ್ತಿಗಾಗಿ ಪತ್ನಿಯನ್ನೇ ಜೀವಂತವಾಗಿ ಸುಟ್ಟುಹಾಕಿದ ಪತಿ: ಪುತ್ರಿಯ ಹೇಳಿಕೆಯಿಂದ ಪ್ರಕರಣ ಬೆಳಕಿಗೆ

Last Updated : Mar 5, 2024, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.