ETV Bharat / bharat

ತ್ರಿಪುರಾ: ತ್ರಿಪಕ್ಷೀಯ ಒಪ್ಪಂದದ ನಂತರ ಪ್ರತಿಭಟನೆ ಕೈಬಿಟ್ಟ ತಿಪ್ರಾ ಮೋತಾ ಪಕ್ಷ

ಕೇಂದ್ರ ಮತ್ತು ತ್ರಿಪುರಾ ಸರ್ಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ನಂತರ ತಿಪ್ರಾ ಮೋತಾ ಪಕ್ಷ ತನ್ನ ಪ್ರತಿಭಟನೆಯನ್ನು ಕೈಬಿಟ್ಟಿದೆ.

After tripartite accord, TMP ends 5-day-long sit-in in Tripura

author img

By ETV Bharat Karnataka Team

Published : Mar 3, 2024, 7:57 PM IST

ಅಗರ್ತಲಾ: ಕೇಂದ್ರ ಮತ್ತು ತ್ರಿಪುರಾ ಸರ್ಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ಒಂದು ದಿನದ ನಂತರ, ತಿಪ್ರಾ ಮೋತಾ ಪಕ್ಷ (ಟಿಎಂಪಿ) ಭಾನುವಾರ ತನ್ನ 5 ದಿನಗಳ ಪ್ರತಿಭಟನೆಯನ್ನು ಕೊನೆಗೊಳಿಸಿದೆ. ರಾಜ್ಯದ ಜೀವನಾಡಿಯಾದ ರಾಷ್ಟ್ರೀಯ ಹೆದ್ದಾರಿ -8 ರ ಹಥೈ ಕೊಟೋರ್​ನಲ್ಲಿ ತಿಪ್ರಾ ಮೋತಾ ಪಕ್ಷ ಪ್ರತಿಭಟನೆ ನಡೆಸಿತ್ತು.

ಮಾಜಿ ರಾಜವಂಶಸ್ಥ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮನ್ ನೇತೃತ್ವದ ಟಿಎಂಪಿ ಕಳೆದ ಕೆಲವು ವರ್ಷಗಳಿಂದ ಬುಡಕಟ್ಟು ಜನರ ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಸಾಂವಿಧಾನಿಕ ಪರಿಹಾರಗಳಿಗಾಗಿ ಆಂದೋಲನ ನಡೆಸುತ್ತಿದೆ. ಶನಿವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಮತ್ತು ಇತರರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಟಿಎಂಪಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.

ಹಥೈ ಕೊಟ್ಟೋರ್ (ಬಾರಾಮುರಾ ಬೆಟ್ಟ) ನಲ್ಲಿ ಬುಡಕಟ್ಟು ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ದೇಬ್ ಬರ್ಮನ್, ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ನಾವು ನಮ್ಮ ಶೇಕಡಾ 60 ರಷ್ಟು ಬೇಡಿಕೆ ಈಡೇರಿಸಿಕೊಂಡಿದ್ದೇವೆ ಮತ್ತು ನಮ್ಮ ಕಠಿಣ ಪರಿಶ್ರಮದಿಂದ ಉಳಿದ ಶೇಕಡಾ 40ರಷ್ಟು ಬೇಡಿಕೆಗಳನ್ನು ಈಡೇರಿಸಿಕೊಳ್ಳಲಿದ್ದೇವೆ" ಎಂದು ಹೇಳಿದರು.

"ಸ್ಥಳೀಯ ಜನರ ಭೂಮಿ ಮತ್ತು ರಾಜಕೀಯ ಹಕ್ಕುಗಳು, ಆರ್ಥಿಕ ಅಭಿವೃದ್ಧಿ, ಅಸ್ಮಿತೆ, ಸಂಸ್ಕೃತಿ, ಭಾಷೆ ಇತ್ಯಾದಿಗಳನ್ನು ರಕ್ಷಿಸುವುದು ಮತ್ತು ಭವಿಷ್ಯದ ಪೀಳಿಗೆಯ ಉತ್ತಮ ಜೀವನಕ್ಕಾಗಿ ನಮ್ಮ ಹೋರಾಟ ನಡೆಯುತ್ತಿದೆ. ನಾವು ಆದಿವಾಸಿಗಳಲ್ಲದವರು ಅಥವಾ ಇತರ ಯಾವುದೇ ಸಮುದಾಯದ ವಿರೋಧಿಗಳಲ್ಲ. ನಾವು ಇತರರನ್ನು ಸೌಲಭ್ಯ ವಂಚಿತರನ್ನಾಗಿ ಮಾಡುವುದಿಲ್ಲ. ನಾವು ಬುಡಕಟ್ಟು ಜನರನ್ನು ಮೇಲೆತ್ತಲು ಮಾತ್ರ ಹೋರಾಡುತ್ತಿದ್ದೇವೆ" ಎಂದು ಟಿಎಂಪಿಯ ಬೇಡಿಕೆಗಳಿಗೆ ಒತ್ತಾಯಿಸಿ ಫೆಬ್ರವರಿ 28 ರಂದು ಪ್ರಾರಂಭವಾಗಿದ್ದ ಪ್ರತಿಭಟನೆಯ ಅಂತ್ಯದ ಮೊದಲು ಅವರು ಹೇಳಿದರು.

ತ್ರಿಪುರಾದ ನಾಲ್ಕು ಮಿಲಿಯನ್ ಜನಸಂಖ್ಯೆಯಲ್ಲಿ ಬುಡಕಟ್ಟು ಜನಾಂಗದವರು ಮೂರನೇ ಒಂದು ಭಾಗದಷ್ಟಿದ್ದಾರೆ. ತ್ರಿಪಕ್ಷೀಯ ಒಪ್ಪಂದದ ಪ್ರಕಾರ, ಗೌರವಾನ್ವಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಪರಸ್ಪರ ಒಪ್ಪಿದ ಅಂಶಗಳನ್ನು ಕಾಲಮಿತಿಯೊಳಗೆ ಕಾರ್ಯಗತಗೊಳಿಸಲು ಜಂಟಿ ಕಾರ್ಯ ಗುಂಪು ಅಥವಾ ಸಮಿತಿಯನ್ನು ರಚಿಸಲಾಗುವುದು.

ಏಪ್ರಿಲ್ 2021 ರಲ್ಲಿ ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿಯಲ್ಲಿ (ಟಿಟಿಎಎಡಿಸಿ) ಟಿಎಂಪಿ ಅಧಿಕಾರವನ್ನು ಪಡೆದುಕೊಂಡಾಗಿನಿಂದ ಅದು ಸಂವಿಧಾನದ 2 ಮತ್ತು 3 ನೇ ವಿಧಿಗಳ ಅಡಿಯಲ್ಲಿ 'ಗ್ರೇಟರ್ ತಿಪ್ರಲ್ಯಾಂಡ್' ಅಥವಾ ಬುಡಕಟ್ಟು ಜನಾಂಗಕ್ಕೆ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸುತ್ತಿದೆ. ಆದರೆ, ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಎಡರಂಗ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಈ ಬೇಡಿಕೆಯನ್ನು ಬಲವಾಗಿ ವಿರೋಧಿಸಿದ್ದವು.

ಇದನ್ನೂ ಓದಿ : ರಾಜೀನಾಮೆ ನಿರ್ಧಾರ ಪ್ರಕಟಿಸಿದ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಗಂಗೋಪಾಧ್ಯಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.