ETV Bharat / bharat

ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ 50 ಮಂದಿ ತೃತೀಯಲಿಂಗಿಗಳಿಗೆ ಆಹ್ವಾನ - Transgenders attend Modi oath ceremony

ಇಂದು ಸಂಜೆ ನಡೆಯಲಿರುವ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ 50 ಮಂದಿ ತೃತೀಯಲಿಂಗಿ ಸಮುದಾಯದವರನ್ನು ಆಹ್ವಾನಿಸಲಾಗಿದೆ.

ನರೇಂದ್ರ ಮೋದಿ
ನರೇಂದ್ರ ಮೋದಿ (ನರೇಂದ್ರ ಮೋದಿ (IANS Photo))
author img

By PTI

Published : Jun 9, 2024, 5:17 PM IST

ನವದೆಹಲಿ: ಇಂದು ಸಂಜೆ 7:15ಕ್ಕೆ ನಡೆಯಲಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ 50 ಮಂದಿ ತೃತೀಯಲಿಂಗಿ ಸಮುದಾಯದವರನ್ನು ಆಹ್ವಾನಿಸಲಾಗಿದೆ. ಇದಕ್ಕೂ ಮುನ್ನ ಬಿಜೆಪಿ ಸಂಸದ ಹಾಗೂ ಮಾಜಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ತೃತೀಯಲಿಂಗಿ ಸಮುದಾಯದವರನ್ನು ತಮ್ಮ ನಿವಾಸದಲ್ಲಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ವೀರೇಂದ್ರ ಕುಮಾರ್, ಇದು 'ಸಬ್​ ಕಾ ಸಾಥ್ ಸಬ್​ ಕಾ ವಿಶ್ವಾಸ್ ಮತ್ತು ಸಭಾ ಪ್ರಯಾಸ್' ಎಂಬ ಪ್ರಧಾನಿ ಮೋದಿಯವರ ಕರೆಯ ಭಾಗವಾಗಿದೆ. ಸಮಾರಂಭದಲ್ಲಿ ತೃತೀಯ ಲಿಂಗಿಗಳು ಭಾಗವಹಿಸುತ್ತಿರುವುದು ಪ್ರಧಾನಿಯವರ ಎಲ್ಲರೂ ಒಳಗೊಳ್ಳುವಿಕೆಯ ಸಂದೇಶದ ಮಹತ್ವವನ್ನು ಹೆಚ್ಚಿಸುತ್ತದೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇದೇ ಮೊದಲ ಬಾರಿಗೆ ತೃತೀಯಲಿಂಗಿ ಸಮುದಾಯದವರನ್ನು ಔಪಚಾರಿಕವಾಗಿ ಆಹ್ವಾನಿಸಲಾಗಿದೆ. ಸಮಾರಂಭದಲ್ಲಿ ಭಾಗವಹಿಸಲಿರುವವರು ತಮ್ಮ ಸಮುದಾಯದ ಸಬಲೀಕರಣಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಉತ್ತರ ಪ್ರದೇಶ ಬಿಜೆಪಿ ಘಟಕದ ಸೋನಮ್ ಕಿನ್ನರ್ ಮಾತನಾಡಿ, ಹೊಸ ಸರ್ಕಾರಕ್ಕೆ ಆಶೀರ್ವದಿಸಲು ತೃತೀಯಲಿಂಗಿ ಸಮುದಾಯದ 50 ಮಂದಿ ಇಲ್ಲಿಗೆ ಬಂದಿದ್ದಾರೆ. ಜಾತಿ ಆಧಾರಿತ ರಾಜಕೀಯದಿಂದಾಗಿ ಪ್ರಧಾನಿ ಮೋದಿ ಅವರು ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಪಡೆಯಲಿಲ್ಲ ಎಂದು ನಮಗೆ ಬೇಸರವಾಗಿದೆ. ಆದರೆ ನಮ್ಮ ಪ್ರಧಾನಿಯ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಮತ್ತು ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: 3ನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ - Modi Oath Taking Ceremony

ETV Bharat Logo

Copyright © 2024 Ushodaya Enterprises Pvt. Ltd., All Rights Reserved.