ETV Bharat / bharat

"ಬೆರಳಿನ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ": ಕೇರಳದ ವೈದ್ಯಕೀಯ ಕಾಲೇಜಿನಲ್ಲಿ ಮತ್ತೊಂದು ಮಹಾಪ್ರಮಾದ - Surgery Gone Wrong

ಕೇರಳದ ಕ್ಯಾಲಿಕಟ್​ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು 4 ವರ್ಷದ ಬಾಲಕಿಯ ಕೈ ಬೆರಳು ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ನಡೆಸಿದ ಮಹಾಪ್ರಮಾದ ನಡೆದಿದೆ.

ಕೇರಳದ ವೈದ್ಯಕೀಯ ಕಾಲೇಜಿನಲ್ಲಿ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು
ಕೇರಳದ ವೈದ್ಯಕೀಯ ಕಾಲೇಜಿನಲ್ಲಿ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು (File Photo ETV Bharat)
author img

By ETV Bharat Karnataka Team

Published : May 16, 2024, 4:06 PM IST

ಕ್ಯಾಲಿಕಟ್ (ಕೇರಳ): ಕೇರಳದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಮಾದಗಳ ಸರಣಿಯೇ ಸಂಭವಿಸುತ್ತಿವೆ. ಕೋಯಿಕ್ಕೋಡ್​ ವೈದ್ಯಕೀಯ ಕಾಲೇಜಿನಲ್ಲಿ ಗರ್ಭಿಣಿಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ, ಕ್ಯಾಲಿಕಟ್​ನ ವೈದ್ಯಕೀಯ ಕಾಲೇಜಿನಲ್ಲಿ 4 ವರ್ಷದ ಬಾಲಕಿಯ ಕೈ ಬೆರಳಿನ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ ಮಹಾ ಎಡವಟ್ಟು ಸಂಭವಿಸಿದೆ.

ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಪ್ರಕರಣ ಇಂದು (ಮೇ 16) ನಡೆದಿದೆ. ಈ ಬಗ್ಗೆ ವೈದ್ಯಕೀಯ ಕಾಲೇಜಿನ ಅಧೀಕ್ಷಕರು ತಕ್ಷಣವೇ ತನಿಖೆಗೆ ಸೂಚಿಸಿದ್ದಾರೆ. ಬಾಲಕಿಯ ಪೋಷಕರಿಗೆ ಕ್ಷಮೆ ಕೋರಲಾಗಿದೆ.

ಪ್ರಕರಣದ ವಿವರ: ಕೋಯಿಕ್ಕೋಡ್‌ನ ಚೆರುವನ್ನೂರಿನವರಾದ 4 ವರ್ಷದ ಬಾಲಕಿಯ ಕೈಯಲ್ಲಿ ಆರನೇ ಬೆರಳು ಹೆಚ್ಚುವರಿಯಾಗಿ ಬೆಳೆದಿತ್ತು. ಅದನ್ನು ತೆಗೆಯಲು ಕ್ಯಾಲಿಕಟ್​ ವೈದ್ಯಕೀಯ ಆಸ್ಪತ್ರೆಗೆ ಬಾಲಕಿಯನ್ನು ಕರೆತರಲಾಗಿತ್ತು. ಇಂದು ಬೆಳಗ್ಗೆ 9 ಗಂಟೆಗೆ ಆಕೆಯನ್ನು ಆಪರೇಷನ್​ ಥಿಯೇಟರ್​ಗೆ ಕರೆದೊಯ್ಯಲಾಗಿದೆ.

ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಆಕೆಯನ್ನು ಕೋಣೆಯೊಂದರಲ್ಲಿ ಕರೆತಂದಾಗ, ಬಾಯಿಯಲ್ಲಿ ಹತ್ತಿ ತುರುಕಿದ್ದನ್ನು ಬಾಲಕಿಯ ಪೋಷಕರು ಪ್ರಶ್ನಿಸಿದ್ದಾರೆ. ಆಗ ವೈದ್ಯರು, ನಾಲಿಗೆಯಲ್ಲಿ ರಂಧ್ರವಿದ್ದ ಕಾರಣ ಆಪರೇಷನ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಅವಕ್ಕಾದ ಪೋಷಕರು ತನ್ನ ಮಗಳಿಗೆ ನಾಲಿಗೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಆರನೇ ಬೆರಳು ತೆಗೆಯುವ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು ಎಂದಿದ್ದಾರೆ.

ಆಗ ವೈದ್ಯರಿಗೆ ತಮ್ಮ ತಪ್ಪಿನ ಅರಿವಾಗಿದೆ. ತಕ್ಷಣವೇ ವೈದ್ಯರು ತಮ್ಮ ತಪ್ಪಿಗೆ ಬಾಲಕಿಯ ಹೆತ್ತವರ ಬಳಿ ಕ್ಷಮೆಯಾಚಿಸಿದರು. ಕೈ ಬೆರಳ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿ ಭಾರೀ ಪ್ರಮಾದಕ್ಕೆ ಕಾರಣವಾದ ವೈದ್ಯರ ವಿರುದ್ಧ ವೈದ್ಯಕೀಯ ಕಾಲೇಜಿನ ಅಧೀಕ್ಷಕರು ತನಿಖೆಗೆ ಸೂಚಿಸಿದ್ದಾರೆ.

ಕೋಯಿಕ್ಕೋಡ್​ನ ಪ್ರಕರಣ: ಇದಕ್ಕೂ ಮೊದಲು ಕೋಯಿಕ್ಕೋಡ್​ನ ಮೆಡಿಕಲ್​ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಗರ್ಭಿಣಿಯ ಹೊಟ್ಟೆಯಲ್ಲಿ ಕತ್ತರಿ ಬಿಡಲಾಗಿತ್ತು. ಆಕೆ ತಿಂಗಳುಗಳ ಕಾಲ ನೋವಿನಿಂದ ಒದ್ದಾಡಿದ್ದಳು. ಮತ್ತೆ ತಪಾಸಣೆಗೆ ಒಳಗಾದಾಗ, ಆಕೆಯ ಹೊಟ್ಟೆಯಲ್ಲಿ ಕತ್ತರಿ ಇರುವುದು ಗೊತ್ತಾಗಿತ್ತು. ಮಹಿಳೆ ಹರ್ಷಿನಾ ಅವರು ನ್ಯಾಯಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಪ್ರಮಾದದ ನಡುವೆಯೇ ಇನ್ನೊಂದು ವೈದ್ಯಕೀಯ ಕಾಲೇಜಿನಿಂದ ಗಂಭೀರ ಪ್ರಮಾದ ನಡೆದಿದೆ.

ಇದನ್ನೂ ಓದಿ: ಮಹಿಳೆಯ ಹೊಟ್ಟೆಯಲ್ಲಿ ಜೋಡಿ ಫೋರ್ಸ್ಪ್ಸ್: ಪೊಲೀಸರ ತನಿಖಾ ವರದಿಯಿಂದ ದೃಢ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.