ETV Bharat / bharat

ಎಂಥಾ ಐಡಿಯಾ ಇದು ಗುರು!; ಅಡುಗೆ ಮನೆಯ ಗೋಡೆಗಳ ಮೇಲೆ ಹಠಮಾರಿ ಎಣ್ಣೆ ಕಲೆಗಳಿವೆಯೇ?: ಈ ಟಿಪ್ಸ್​ ಪಾಲಿಸಿ ಸಾಕು ಕಲೆಗಳು ಮಾಯ! - Tips to Remove Oil Stains on Walls - TIPS TO REMOVE OIL STAINS ON WALLS

ಅಡುಗೆ ಮಾಡುವುದಕ್ಕಿಂತ ಅಡುಗೆಮನೆಯ ಗೋಡೆಗಳನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಕಾರಣ ಜಿಡ್ಡು ಗಟ್ಟಿರುವ ಕಲೆಗಳು. ಮತ್ಯಾಕೆ ತಡ ಈ ಸಲಹೆಗಳನ್ನು ಪಾಲಿಸಿ, ಹಠಮಾರಿ ಎಣ್ಣೆ ಕಲೆಗಳನ್ನು ತೊಲಗಿಸಿ.

ಅಡುಗೆಮನೆಯ ಗೋಡೆಗಳ ಮೇಲೆ ಹಠಮಾರಿ ಎಣ್ಣೆ ಕಲೆಗಳಿವೆಯೇ
OIL STAINS REMOVING TIPS (ETV Bharat)
author img

By ETV Bharat Karnataka Team

Published : Jul 9, 2024, 10:58 PM IST

Updated : Jul 10, 2024, 6:04 PM IST

Tips to Remove Oil Stains: ಅಡುಗೆ ಮಾಡುವಾಗ ಗೋಡೆಗಳ ಮೇಲೆ ಕಲೆಗಳಾಗುವುದು ಸಹಜ. ಅದರಲ್ಲೂ ಏನಾದರೂ ಹುರಿಯುವಾಗ. ಹಪ್ಪಳ, ಬೋಂಡಾ ಅಥವಾ ಇನ್ನಿತರ ಪದಾರ್ಥಗಳನ್ನು ಎಣ್ಣೆಯಲ್ಲಿ ಕರಿಯುವಾಗ ಮತ್ತು ಒಗ್ಗರಣೆ ಹಾಕುವಾಗ ಗೋಡೆಗಳ ಮೇಲೆ ಎಣ್ಣೆ ಸಿಡಿಯುತ್ತಿರುತ್ತದೆ. ಈ ಕಲೆಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಕಲೆಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಇಂತಹ ಸಮಸ್ಯೆಯನ್ನು ನೀವು ಎದುರಿಸಿದ್ದಾರಾ?. ಹಾಗಾದರೆ ಈ ಸಲಹೆಗಳನ್ನು ಪಾಲಿಸಿ.

ಬೇಕಿಂಗ್ ಸೋಡಾ: ಗೋಡೆಯ ಮೇಲಿನ ಎಣ್ಣೆ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಅಡಿಗೆ ಸೋಡಾ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಒಂದು ಚಮಚ ಅಡಿಗೆ ಸೋಡಾ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್ ತಯಾರಿಸಿ ನಂತರ ಕಲೆಗಳ ಮೇಲೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಸ್ವಚ್ಛವಾದ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಬಳಿಕ ಕಲೆಗಳನ್ನು ಒರೆಸಿ. ಒಣಗಿದ ನಂತರ, ಎಣ್ಣೆ ಕಲೆಗಳ ಕುರುಹು ಇರುವುದಿಲ್ಲ.

2020 ರಲ್ಲಿ ಜರ್ನಲ್ ಆಫ್ ಕ್ಲೀನಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗೋಡೆಗಳಿಗೆ ಹಾನಿಯಾಗದಂತೆ ಗೋಡೆಗಳ ಮೇಲಿನ ವಿವಿಧ ರೀತಿಯ ಎಣ್ಣೆ ಕಲೆಗಳನ್ನು ತೆಗೆದುಹಾಕುವಲ್ಲಿ ಅಡಿಗೆ ಸೋಡಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದೆ. ವಿಶೇಷವಾಗಿ ಈ ಸಂಶೋಧನೆಯಲ್ಲಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ. ಅಮೃತ ಮಿಶ್ರಾ ಭಾಗವಹಿಸಿದ್ದರು.

ಲಿಕ್ವಿಡ್ ಡಿಶ್ ವಾಶರ್: ಗೋಡೆಗಳ ಮೇಲಿನಿಂದ ಹಠಮಾರಿ ಎಣ್ಣೆ ಕಲೆಗಳನ್ನು ತೆಗೆದುಹಾಕಲು ಲಿಕ್ವಿಡ್ ಡಿಶ್ ವಾಷರ್ ಸೂಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಲಿಕ್ವಿಡ್ ಡಿಶ್ ವಾಶರ್ ಅನ್ನು ಗೋಡೆಗಳ ಮೇಲೆ ಸಿಂಪಡಿಸಿ ಒಂದು ಗಂಟೆ ಕಾಲ ಬಿಡಬೇಕು. ನಂತರ ಬಿಸಿ ನೀರಿನಿಂದ ತೊಳೆದು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿದರೆ ಗೋಡೆಗಳ ಮೇಲೆ ಯಾವುದೇ ಕಲೆಗಳು ಇರುವುದಿಲ್ಲ.

ವಿನೆಗರ್: ಅಡುಗೆಯಲ್ಲಿ ಬಳಸುವ ವಿನೆಗರ್ ಗೋಡೆಗಳ ಮೇಲಿನ ಎಣ್ಣೆಯ ಕಲೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತದೆ. ಇದು ಕೆಟ್ಟ ವಾಸನೆ, ಗ್ರೀಸ್ ನಂತಹ ಹಠಮಾರಿ ಕಲೆಗಳನ್ನು ಕೇವಲ ನಿಮಿಷಗಳಲ್ಲಿ ತೊಲಗಿಸುತ್ತದೆ. ಅದಕ್ಕಾಗಿ ನೀವು ವಿನೆಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಬೇಕು. ಅದರಲ್ಲಿ ಸ್ಪಾಂಜ್/ಬಟ್ಟೆಯನ್ನು ಅದ್ದಿ ಕಲೆಯ ಮೇಲೆ ಹಚ್ಚಿ. 10 ರಿಂದ 15 ನಿಮಿಷಗಳ ಕಾಲ ಒಣಗಲು ಬಿಡಿ. ಅದರ ನಂತರ ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಒರೆಸಿ.

ಹೇರ್ ಡ್ರೈಯರ್: ಎಣ್ಣೆ ಕಲೆಗಳು ಹೆಚ್ಚಿದ್ದರೆ ಈ ಸಲಹೆ ತುಂಬಾ ಉಪಯುಕ್ತವಾಗಿದೆ. ಅದೇನೆಂದರೆ ಕಲೆಗಳಿರುವ ಗೋಡೆಯ ಮೇಲೆ ಪೇಪರ್ ಹಾಕಿ ಅದರ ಮೇಲೆ ಐರನ್ ಬಾಕ್ಸ್(ಇಸ್ತ್ರಿ ಪೆಟ್ಟಿಗೆ) ಅಥವಾ ಹೇರ್ ಡ್ರೈಯರ್ ನಿಂದ ಬಿಸಿ ಮಾಡಿ. ಹೀಗೆ ಮಾಡುವುದರಿಂದ, ಗೋಡೆ ಮೇಲೆ ಎಣ್ಣೆಯಲ್ಲ ಹೊರಬರುತ್ತದೆ. ನಂತರ ಸುಲಭವಾಗಿ ಸ್ವಚ್ಛಗೊಳಿಸಬಹುದು ಎಂದು ತಜ್ಲರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮೆತ್ತಗಿನ, ಸುಡು ಸುಡು ಜೋಳದ ರೊಟ್ಟಿ ಮಾಡಬೇಕಾ?: ಹಾಗಾದರೆ ಈ ಸಲಹೆ ಅನುಸರಿಸಿದರೆ ರೆಡಿ ಮಾಡೋದು ಬಲು ಸುಲಭ! - How to Make Soft Jowar Roti

Last Updated : Jul 10, 2024, 6:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.