ETV Bharat / bharat

ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪಾಟ್ನಾ ಏಮ್ಸ್​ನ ನಾಲ್ವರು ವೈದ್ಯ ವಿದ್ಯಾರ್ಥಿಗಳ ಬಂಧನ - NEET UG paper leak - NEET UG PAPER LEAK

ನೀಟ್​ - ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಏಮ್ಸ್​ನ ನಾಲ್ವರು ವೈದ್ಯ ವಿದ್ಯಾರ್ಥಿಗಳನ್ನು ಸಿಬಿಐ ಬಂಧಿಸಿದೆ. ಮಾಸ್ಟರ್​ಮೈಂಡ್​ ಎಂದು ಗುರುತಿಸಿಕೊಂಡಿರುವ ಸಂಜೀವ್ ಮುಖಿಯಾ ಬಲೆಗೆ ಬೀಳಿಸಲು ಜಾಲ ಬೀಸಲಾಗಿದೆ.

ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ
ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ (ETV Bharat)
author img

By ETV Bharat Karnataka Team

Published : Jul 18, 2024, 3:50 PM IST

ಪಾಟ್ನಾ (ಬಿಹಾರ): ದೇಶದಲ್ಲಿ ಭಾರೀ ಸಂಚಲನ ಉಂಟು ಮಾಡಿರುವ ನೀಟ್​ - ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಮಹತ್ತರ ಹೆಜ್ಜೆ ಇಟ್ಟಿದೆ. ಈಚೆಗೆ ಕೇಸ್​ನ ಪ್ರಮುಖ ಆರೋಪಿಯನ್ನು ಬಂಧಿಸಿದ ಬೆನ್ನಲ್ಲೇ, ಪಾಟ್ನಾದ ಏಮ್ಸ್​​ನ ನಾಲ್ವರು ವೈದ್ಯರನ್ನು ಗುರುವಾರ ಬಂಧಿಸಿದೆ.

ಪ್ರಕರಣದ ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾ ಇನ್ನೂ ಸಿಬಿಐ ಬಂಧನಕ್ಕೆ ಒಳಗಾಗಿಲ್ಲ. ಬುಧವಾರವಷ್ಟೇ ಅಧಿಕಾರಿಗಳು ಪ್ರಕರಣದ ಶಂಕಿತ ವೈದ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಬಳಿಕ ಇನ್ನೊಬ್ಬ ವೈದ್ಯರನ್ನು ವಿಚಾರಣೆ ಕರೆದಿತ್ತು. ಇದೀಗ ಮೂವರೂ ಬಂಧನಕ್ಕೆ ಒಳಗಾಗಿದ್ದಾರೆ. ಈ ಪೈಕಿ ಮೂವರು ಆರೋಪಿಗಳು 2021 ಎಂಬಿಬಿಎಸ್ ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದಾರೆ. ಅವರಿಗೆ ಸೇರಿದ ಕೊಠಡಿಗಳಿಗೆ ಸೀಲ್ ಹಾಕಲಾಗಿದೆ.

ಸಿಬಿಐ ತಂಡ ಇದುವರೆಗೆ ಪೇಪರ್ ಕದ್ದವರು, ಸೋರಿಕೆ ಮಾಡಿದವರು ಮತ್ತು ಪೇಪರ್ ಪಡೆದ ವಿದ್ಯಾರ್ಥಿಗಳೆಲ್ಲರನ್ನೂ ಬಂಧಿಸಿದೆ. ಆದರೆ, ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾ ಇನ್ನೂ ಸಿಬಿಐ ಬಂಧನಕ್ಕೆ ಸಿಕ್ಕಿಲ್ಲ. ಈ ಕುರಿತ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಮುಂದಿವೆ.

ಬಂಧಿತ ವೈದ್ಯ ವಿದ್ಯಾರ್ಥಿಗಳಿಂದ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ಜಪ್ತಿ ಮಾಡಲಾಗಿದೆ. ಅವರ ವಿಚಾರಣೆಯ ವೇಳೆ ಟ್ರಕ್‌ನಲ್ಲಿದ್ದ ಪೇಪರ್‌ಗಳನ್ನು ಕದ್ದವರು ಯಾರು ಎಂಬ ನಿಖರ ಮಾಹಿತಿ ಸಿಕ್ಕಿಲ್ಲವಾದರೂ, ಆರೋಪಿ ಪಂಕಜ್ ಎಂದು ಇನ್ನುಳಿದ ಆರೋಪುಗಳು ತಿಳಿಸಿದ್ದಾರೆ. ಎಲ್ಲರ ವಿಚಾರಣೆಯೂ ಮುಂದುವರಿದಿದೆ.

ಏಮ್ಸ್ ನಿರ್ದೇಶಕರು ಹೇಳಿದ್ದೇನು?: ಈ ಕುರಿತು ಪಾಟ್ನಾ ಏಮ್ಸ್​ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋಪಾಲ್ ಕೃಷ್ಣ ಪಾಲ್ ಮಾತನಾಡಿ, ಬಂಧಿತರು 2021ರ ಬ್ಯಾಚ್​ನ ಮೂವರು ವೈದ್ಯ ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕೋರಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸಹಕಾರ ನೀಡುತ್ತಿದ್ದೇವೆ. ನೀಟ್​ ಪೇಪರ್ ಸೋರಿಕೆಯಲ್ಲಿ ಸಿಬಿಐಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತೇವೆ. ವಿದ್ಯಾರ್ಥಿಗಳು ಇದರಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಅವರು ತಪ್ಪಿತಸ್ಥರೇ ಎಂಬ ಬಗ್ಗೆ ತನಿಖೆಯಲ್ಲಿ ತಿಳಿದುಬರಲಿದೆ ಎಂದರು.

ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಸಿಬಿಐ ತಂಡ ಇದುವರೆಗೆ 42 ಆರೋಪಿಗಳನ್ನು ಬಂಧಿಸಿದೆ. ಈ ಹಿಂದೆಯೂ ವೈದ್ಯರು ಸೇರಿದಂತೆ 13 ಮಂದಿಯನ್ನು ಏಕಕಾಲಕ್ಕೆ ಬಂಧಿಸಿತ್ತು. ಅವರು ನೀಡಿದ ಮಾಹಿತಿ ಮೇರೆಗೆ ಉಳಿದವರ ಅರೆಸ್ಟ್​ ಆಗಿತ್ತು. ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾ ಬಂಧಿಸಲು ಸಿಬಿಐ ತಂಡ ಪ್ರಯತ್ನ ನಡೆಸುತ್ತಿದೆ.

ಇದನ್ನೂ ಓದಿ: ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ​: ಪ್ರಮುಖ ಆರೋಪಿ ಬಂಧಿಸಿದ ಸಿಬಿಐ - NEET UG paper leak

ETV Bharat Logo

Copyright © 2025 Ushodaya Enterprises Pvt. Ltd., All Rights Reserved.