ETV Bharat / bharat

ಕೇರಳದಲ್ಲಿ ಮಧ್ಯಪ್ರದೇಶದ ಸಹೋದರಿಯರ ಕನ್ನಡಾಭಿಮಾನ; ಎ+ನಲ್ಲಿ SSLC ಪರೀಕ್ಷೆ ಪಾಸ್​​ - SSLC Exam three sisters Achievement

ಕೇರಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ದಂಪತಿಯ ಮೂವರು ಪುತ್ರಿಯರು ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಂಡು ಎ+ ಅಂಕ ಪಡೆದು ಉತ್ತೀರ್ಣರಾಗುವ ಮೂಲಕ ಕನ್ನಡದ ಮೇಲೆ ಅಭಿಮಾನ ಮೆರೆದಿದ್ದಾರೆ.

Etv Bharat
Etv Bharat (Etv Bharat)
author img

By ETV Bharat Karnataka Team

Published : May 10, 2024, 3:25 PM IST

Updated : May 10, 2024, 4:22 PM IST

ಮಧ್ಯಪ್ರದೇಶದ ಸಹೋದರಿಯರ ಕನ್ನಡಾಭಿಮಾನ (ETV Bharat)

ಕಾಸರಗೋಡು (ಕೇರಳ): ಕೇರಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ದಂಪತಿಯ ಮೂವರು ಪುತ್ರಿಯರು ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡು ಎ+ ಅಂಕ ಗಳಿಸಿ ಪಾಸಾಗುವ ಮೂಲಕ ಕನ್ನಡದ ಮೇಲೆ ಅಭಿಮಾನ ತೋರ್ಪಡಿಸಿದ್ದಾರೆ.

ಕೇರಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಸರಗೋಡು ಬೇಕಲದಲ್ಲಿ ವಾಸವಾಗಿರುವ ಮಧ್ಯಪ್ರದೇಶದ ದಂಪತಿಯ ಮೂವರು ಪುತ್ರಿಯರು ಎ+ ಅಂಕ ಗಳಿಸಿದ್ದಾರೆ. ಕಾಸರಗೋಡಿನ ಕಳನಾಡಿನ ಎಡವುಂಕಲ್‌ನಲ್ಲಿ ವಾಸವಾಗಿರುವ ಮಾರ್ಬಲ್ ಕೆಲಸಗಾರ ಜಿತೇಂದರ್ ಮತ್ತು ಗೃಹಿಣಿ ಸುರಕ್ಷಾ ಅವರ ಐದು ಮಕ್ಕಳಲ್ಲಿ ಮೂವರು 10ನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.

ಕಾಜಲ್, ಪೂಜಾ ಮತ್ತು ನಿಶಾ ಅವರು ವಯಸ್ಸಿನಲ್ಲಿ ವ್ಯತ್ಯಾಸವಿದ್ದರೂ ಒಂದೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಈ ಮೂವರು ಸರ್ಕಾರಿ ಬೇಕಲ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿದ್ದಾರೆ.

15 ವರ್ಷಗಳ ಹಿಂದೆ, ಜಿತೇಂದರ್ ಮಧ್ಯಪ್ರದೇಶದ ಕೈಲಾಸ್‌ನಿಂದ ಕೆಲಸ ಹುಡುಕಿಕೊಂಡು ಕಾಸರಗೋಡಿಗೆ ಬಂದಿದ್ದರು. ದಿನಗೂಲಿ ಕೆಲಸಗಾರನಾಗಿದ್ದ ಅವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಯಾವುದೇ ಹಿಂದೇಟು ಹಾಕಲಿಲ್ಲ. ಅವರ ಅಧ್ಯಯನಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಒದಗಿಸಿದರು.

ಮೂವರು ಒಂದೇ ತರಗತಿಯಲ್ಲಿದ್ದರಿಂದ ಅಧ್ಯಯನಕ್ಕೆ ಅನುಕೂಲ: ವಿದ್ಯಾರ್ಥಿಗಳು ಎದುರಿಸಿದ ಒಂದು ಸಮಸ್ಯೆ ಎಂದರೆ ಅವರಿಗೆ ಹಿಂದಿ ಮಾತ್ರ ತಿಳಿದಿತ್ತು. ಮೂವರು ಒಟ್ಟಿಗೆ ಒಂದೇ ತರಗತಿಯಲ್ಲಿ ಓದುತ್ತಿದ್ದರಿಂದ ಅಧ್ಯಯನ ಸಮಯದಲ್ಲಿ ಉದ್ಭವಿಸುವ ಅನುಮಾನಗಳನ್ನು ಅವರವರೇ ಪರಿಹರಿಸಿಕೊಳ್ಳುತ್ತಿದ್ದರು. SSLC ಪರೀಕ್ಷೆಯು ಸಮೀಪಿಸುತ್ತಿರುವಾಗ, ಅವರು ಮುಂಜಾನೆ ಏಳುವುದು ಸೇರಿದಂತೆ ವ್ಯವಸ್ಥಿತ ಅಧ್ಯಯನಕ್ಕಾಗಿ ವೇಳಾಪಟ್ಟಿಯನ್ನು ಅನುಸರಿಸಿದ್ದರು. ಶಿಕ್ಷಕರು ನೀಡುತ್ತಿದ್ದ ಸಹಕಾರದಿಂದ ಉತ್ತಮ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು ಎಂದು ವಿದ್ಯಾರ್ಥಿನಿಯರು ತಿಳಿಸಿದರು.

ಕಾಜಲ್ ಡಾಕ್ಟರ್ ಆಗುವ ಗುರಿಯನ್ನು ಹೊಂದಿದ್ದಾಳೆ. ಪೂಜಾ ಶಿಕ್ಷಕಿಯಾಗುವ ಕನಸು ಕಂಡಿದ್ದಾರೆ. ಮತ್ತು ನಿಶಾ ಪೊಲೀಸ್ ಅಧಿಕಾರಿಯಾಗಲು ಬಯಸಿದ್ದಾರೆ. ಅವರು ತಮ್ಮ ಅಧ್ಯಯನದಲ್ಲಿ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದಾರೆ.

ಬೇರೆ ರಾಜ್ಯದವರು ಎಂಬುದಕ್ಕೆ ಶಾಲೆಯಲ್ಲಿ ಅಥವಾ ಬೇರೆಡೆ ಯಾವುದೇ ತಾರತಮ್ಯವಿಲ್ಲ. ಶಿಕ್ಷಕರು ಮತ್ತು ಸಹಪಾಠಿಗಳು ತಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ವಿದ್ಯಾರ್ಥಿನಿಯರು ಹೇಳಿದರು.

ವಿದ್ಯಾರ್ಥಿನಿಯರಾದ ಕಾಜಲ್ ಮತ್ತು ಪೂಜಾ ಈಗ ಮಧ್ಯಪ್ರದೇಶದಲ್ಲಿದ್ದಾರೆ. ಮುಂದಿನ ವಾರ ಕೇರಳಕ್ಕೆ ಆಗಮಿಸಲಿದ್ದಾರೆ. ಅವರು ತಮ್ಮ ಪ್ಲಸ್ ಟು (ಪಿಯುಸಿ) ವ್ಯಾಸಂಗವನ್ನು ಮುಗಿಸಿದ ನಂತರ ಮಧ್ಯಪ್ರದೇಶಕ್ಕೆ ಹಿಂತಿರುಗುತ್ತಾರೆ ಎಂದು ಹೇಳುತ್ತಾರೆ ಕುಟುಂಬದವರು.

ಇದನ್ನೂ ಓದಿ: ಅಮ್ಮ- ಮಗ ಇಬ್ಬರೂ ಒಟ್ಟಿಗೆ ಎಸ್​ಎಸ್​ಎಲ್​ಸಿ ಪಾಸ್: ಹಾಸನದಲ್ಲಿ ಅಪರೂಪದ ಸಾಧನೆ - mother and son passed SSLC

Last Updated : May 10, 2024, 4:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.