ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೇನಾಪಡೆಗಳು ಮತ್ತು ಉಗ್ರರ ನಡುವೆ ಕಳೆದ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರನನ್ನು ಸದೆಬಡಿಯಲಾಗಿದೆ. ಇದೇ ವೇಳೆ, ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
ಮಂಗಳವಾರ ಉಗ್ರರ ಚಲನವಲನ ಪತ್ತೆಯಾಗಿತ್ತು. ಬಳಿಕ ತೀವ್ರ ಶೋಧ ಕೈಗೊಂಡ ಸೇನೆ, ಭಯೋತ್ಪಾದಕನನ್ನು ಹತ್ಯೆಗೈದಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ಜಮ್ಮುವಿನ ದಟ್ಟ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಹೊಂಚು ಹಾಕಿ ದಾಳಿ ನಡೆಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಹೀಗಾಗಿ ಸೇನಾಪಡೆಗಳು ಕೂಡಾ ಆಕ್ರಮಣಕಾರಿ ಕಾರ್ಯಾಚರಣೆಗಿಳಿದಿವೆ.
ಪೂಂಚ್, ರಜೌರಿ, ರಿಯಾಸಿ, ದೋಡಾ ಮತ್ತು ಕಥುವಾ ಜಿಲ್ಲೆಗಳಲ್ಲಿ ಉಗ್ರರನ್ನು ಮಟ್ಟಹಾಕಲು ಕಮಾಂಡೋ ಪಡೆಗಳು ಮತ್ತು ತರಬೇತಿ ಪಡೆದ 4,000ಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಉಗ್ರರೊಂದಿಗೆ ಗುಂಡಿನ ಕಾಳಗ - ಅಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮ