ರುದ್ರಪ್ರಯಾಗ (ಉತ್ತರಾಖಂಡ): ಜಿಲ್ಲೆಯಲ್ಲಿ ಮುಂದುವರೆದಿರುವ ಮಳೆ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಮಂದಾಕಿನಿ ನದಿಯ ಉಗ್ರ ಸ್ವರೂಪದಿಂದ ಹರಿಯುತ್ತಿರುವ ಪರಿಣಾಮ ಸೋನಪ್ರಯಾಗದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಬದರಿನಾಥ ಹೆದ್ದಾರಿಯ ಕಾಮೇದ ಗೌಚಾರ್ ಬಳಿ ಬೆಟ್ಟದಿಂದ ಬಂಡೆಯೊಂದು ಬಿದ್ದ ಪರಿಣಾಮ ವಾಹನವೊಂದು ಜಖಂಗೊಂಡಿದೆ. ಈ ವೇಳೆ, ಹೇಗೋ ವಾಹನದಲ್ಲಿದ್ದವರು ಪ್ರಾಣ ಉಳಿಸಿಕೊಂಡಿದ್ದಾರೆ.
ಕೇದಾರನಾಥದಲ್ಲಿ ಭಾರಿ ಮಳೆಯಿಂದ ಹಲವೆಡೆ ವಾಕಿಂಗ್ ಪಾತ್ ಧ್ವಂಸವಾಗಿದ್ದು, ಮಂದಾಕಿನಿ ನದಿ ತನ್ನ ಆರ್ಭಟ ಮುಂದುವರೆಸಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮಂದಾಕಿನಿ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಸೋನಪ್ರಯಾಗದ ಮಂದಾಕಿನಿ ನದಿಗೆ ಸೇನೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಇದರಿಂದಾಗಿ ಸೈನಿಕರ ಶ್ರಮ ವ್ಯರ್ಥವಾಗಿದೆ.
ಈ ಭಾಗದಲ್ಲಿ ಸೇನೆಯು ಎರಡು ಸೇತುವೆಗಳನ್ನು ನಿರ್ಮಿಸಿತ್ತು. ಅದರಲ್ಲಿ ನದಿ ದಾಟಿದ ನಂತರ ಸೋನ್‌ಪ್ರಯಾಗದ ಕಡೆಗೆ ಸಂಗಮದ ಬಳಿ ಸೇತುವೆಯನ್ನು ಸಹ ನಿರ್ಮಿಸಲಾಗಿತ್ತು. ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಬದರಿನಾಥ್ ಹೆದ್ದಾರಿಯ ಗೌಚಾರ್-ಕಾಮೆಡಾ ಬಳಿಯೂ ದೊಡ್ಡ ಅಪಘಾತ ಸಂಭವಿಸಿದೆ. ಇಲ್ಲಿ ಬೆಟ್ಟದಿಂದ ಬಿದ್ದ ಬಂಡೆಯೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ವಾಹನದಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ.
ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಗಹರ್ವಾರ್ ಮಾತನಾಡಿ, ''ಕಣಿವೆ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದ ಪ್ರಯಾಣಿಸಲು ವಿನಂತಿಸಲಾಗಿದೆ. ಕೇದಾರನಾಥ ಯಾತ್ರೆ ಸಾಗುವ ಮಾರ್ಗದಲ್ಲಿ ಅನೇಕ ಪ್ರಯಾಣಿಕರು ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಹೊರತರಲಾಗಿದೆ. ಯಾತ್ರೆಯ ಮಾರ್ಗದ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಎರಡು ಮನೆ ಕುಸಿದು ಒಬ್ಬ ಸಾವು, 5 ಮಂದಿಯ ರಕ್ಷಣೆ - 2 Houses Collapse Near Kashi Temple