ETV Bharat / bharat

"ಸೋಲಿಗೆ ಜಗ್ಗಲಿಲ್ಲ, ಗುರಿ ಕೈ ಬಿಡಲಿಲ್ಲ": 4ನೇ ಯತ್ನದಲ್ಲಿ ಐಎಎಸ್​ ಪಾಸಾದ ಅಶ್ಫಾಕ್ ಛಲದ ಮಾತುಗಳು - Gotlapally Ashfaq - GOTLAPALLY ASHFAQ

ಸಿವಿಲ್ ಸರ್ವೀಸ್​ ಪರೀಕ್ಷೆಯಲ್ಲಿ 770 ನೇ ರ್ಯಾಂಕ್​ ಗಳಿಸಿದ ತೆಲಂಗಾಣದ ಮೊಹಮದ್​ ಅಶ್ಪಾಕ್​ ಮೂರು ಬಾರಿ ಫೇಲಾಗಿದ್ದರು. ನಾಲ್ಕನೇ ಯತ್ನದಲ್ಲಿ ಅವರಿಗೆ ಫಲ ಸಿಕ್ಕಿದೆ.

ಐಎಎಸ್​ ಪಾಸಾದ ಅಶ್ಫಾಕ್ ಛಲದ ಮಾತುಗಳು
ಐಎಎಸ್​ ಪಾಸಾದ ಅಶ್ಫಾಕ್ ಛಲದ ಮಾತುಗಳು
author img

By ETV Bharat Karnataka Team

Published : Apr 18, 2024, 11:50 AM IST

ಹೈದರಾಬಾದ್: ಬಡತನದ ಕುಟುಂಬ, ತಂದೆಯ ಕಷ್ಟಗಳನ್ನು ಕಂಡು ಬೆಳೆದ ಹುಡುಗ ಉನ್ನತ ಗುರಿಗಳನ್ನು ಬೆಳೆಸಿಕೊಂಡಿದ್ದ. ಪ್ರತಿಕೂಲ ಪರಿಸ್ಥಿತಿಗಳು ಎದುರಾದರೂ ಅಧ್ಯಯನ ಮುಂದುವರಿಸಿದ. ಒಂದಲ್ಲ, ಎರಡಲ್ಲ, ಮೂರು ಬಾರಿ ಸಿವಿಲ್​ ಪರೀಕ್ಷೆಯಲ್ಲಿ ಫೇಲ್​. ಛಲ ಬಿಡದೆ ನಾಲ್ಕನೇ ಬಾರಿ ಪರೀಕ್ಷೆ ಎದುರಿಸಿ ಯಶಸ್ಸು ಸಾಧಿಸಿದ. ದೇಶಕ್ಕೆ 770 ರ್‍ಯಾಂಕ್​ ಪಡೆದ.

ಇದು ತೆಲಂಗಾಣದ ಮೊಹಮದ್​ ಅಶ್ಪಾಕ್​ರ ವೀರಗಾಥೆ. ಜಗಿತ್ಯಾಲ್ ಜಿಲ್ಲೆಯ ಪೆದ್ದೆಮುಲ್ ಮಂಡಲದ ಗೊಟ್ಲಪಲ್ಲಿ ಎಂಬ ಸಣ್ಣ ಹಳ್ಳಿಯ ಯುವಕ ಇಂದು ಐಎಎಸ್​ ಅಧಿಕಾರಿಯಾಗುವ ಅವಕಾಶ ಒಲಿಸಿಕೊಂಡಿದ್ದಾರೆ. ತನ್ನೂರಿನಲ್ಲಿ ಈಗ ಆತ ಸ್ಟಾರ್​. ಹಳ್ಳಿ ಯುವಕರ ಪ್ರತಿಭೆಗೆ ಈತ ಕಲಶಪ್ರಾಯದಂತಿದ್ದಾನೆ.

ಸಿವಿಲ್​ ಸರ್ವೀಸ್​ ಪರೀಕ್ಷೆಯಲ್ಲಿ ದೇಶಕ್ಕೆ 770ನೇ ಶ್ರೇಯಾಂಕ ಪಡೆದಿರುವ ಮೊಹಮದ್​ ಅಶ್ಫಾಕ್​ ಬಡತನದಲ್ಲಿ ಬೆಳೆದು ಬಂದ ಪ್ರತಿಭೆ. ಪೋಷಕರಾದ ಜಾಫರ್ ಮತ್ತು ರಿಜ್ವಾನಾ ಬೇಗಂ ಅವರದು ಚಿಕ್ಕ ಕುಟುಂಬ. ಹುಟ್ಟೂರಾದ ಗೊಟ್ಲಪಲ್ಲಿಯಲ್ಲಿ ಪುಟ್ಟ ಮನೆ ಇದೆ. 1.15 ಎಕರೆ ಕೃಷಿ ಭೂಮಿ ಇದೆ. ಅಶ್ಪಾಕ್ ಅವರ ತಂದೆ 10ನೇ ತರಗತಿಯ ನಂತರ ಜೀವನೋಪಾಯಕ್ಕಾಗಿ ಹೈದರಾಬಾದ್‌ಗೆ ವಲಸೆ ಬಂದಿದ್ದರು. ಅಲ್ಲಿ ಐಟಿಐ ಓದಿ ರಿಜ್ವಾನಾರನ್ನು ಮದುವೆಯಾಗಿದ್ದರು. ಮಗಳು ಉಜ್ಮಾ ಸುಲ್ತಾನಾ ಮತ್ತು ಮಗ ಅಶ್ಫಾಕ್​ಗಾಗಿ ಹಗಲಿರುಳು ಕಷ್ಟಪಟ್ಟು ದುಡಿದರು.

ಅವರ ಶ್ರಮಕ್ಕೆ ಪ್ರತಿಫಲ ಎಂಬಂತೆ ಪುತ್ರ ಅಶ್ಪಾಕ್​ ಐಎಎಸ್​ ಪರೀಕ್ಷೆಯಲ್ಲಿ ಪಾಸ್​. ಪುತ್ರಿ ಉಜ್ಮಾ ದಂತ ವೈದ್ಯೆಯಾಗಿದ್ದಾರೆ. ಮಕ್ಕಳ ಅಭ್ಯುದಯ ಕಂಡಿದ್ದ ಪಾಲಕರ ಕನಸನ್ನು ಮಕ್ಕಳಿಬ್ಬರು ನನಸು ಮಾಡಿದ್ದಾರೆ. ಇದೀಗ ಸ್ವಂತ ಮನೆ, ಅಂಗಡಿಯೊಂದನ್ನು ನಡೆಸಿಕೊಂಡು ಸುಖೀ ಸಂಸಾರ ನಡೆಸುತ್ತಿದ್ದಾರೆ.

ಅಧ್ಯಯನದಲ್ಲಿ ಶ್ರದ್ಧೆ: ಅಶ್ಫಾಕ್ ಬಾಲ್ಯದಿಂದಲೂ ಅಧ್ಯಯನದಲ್ಲಿ ಜಾಣನಾಗಿದ್ದ. ಖಾಸಗಿ ಶಾಲೆಯಲ್ಲಿ 12 ನೇ ತರಗತಿವರೆಗೂ ಓದಿದ್ದಾರೆ. ಬಳಿಕ ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಮುಗಿಸಿದರು. ಎಂಎ ಮುಗಿಸಿದ ಐಎಎಸ್​ಗೆ ತಯಾರಿ ನಡೆಸಿದ್ದರು. ಮೂರು ಬಾರಿ ವಿಫಲರಾದರೂ, ನಾಲ್ಕನೇ ಬಾರಿ ಪಾಸ್ ಮಾಡಿ ಅಧಿಕಾರಿಯಾಗಲು ಹೊರಟಿದ್ದಾರೆ.

"ಪರೀಕ್ಷೆಯಲ್ಲಿ ಈಗ ಬಂದಿರುವ ರ್‍ಯಾಂಕ್‌ ಬಗ್ಗೆ ತೃಪ್ತಿ ಇದೆ. ನಾನು ಐಎಎಸ್‌ ಪಡೆದು ಜನಸೇವೆ ಮಾಡಬೇಕು ಎಂಬ ಕನಸು ಇಟ್ಟುಕೊಂಡಿದ್ದೇನೆ. ಅದಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಎದುರಿಸುವೆ. ಮೂರು ಬಾರಿ ಫೇಲಾಗಿದ್ದರೂ, ನಾನು ಹಿಂಜರಿಯಲಿಲ್ಲ. ನಾಲ್ಕನೇ ಪ್ರಯತ್ನದಲ್ಲಿ ಯಶ ಸಾಧಿಸಿದ್ದೇನೆ" ಎನ್ನುತ್ತಾರೆ ಮೊಹಮದ್​ ಅಶ್ಪಾಕ್​.

ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ ಸಿಇಟಿ: 737 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 3.49 ಲಕ್ಷ ವಿದ್ಯಾರ್ಥಿಗಳು - CET EXAM 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.