ಡೋರ್ನಾಕಲ್( ತೆಲಂಗಾಣ): ಸಾಮಾನ್ಯವಾಗಿ ಆಲ್ಕೋಹಾಲ್ ಸೇವಿಸಿ ಗಾಡಿ ಚಾಲನೆ ಮಾಡುವುದರಿಂದ ಆಗುವ ಅಪಾಯವನ್ನು ತಡೆಯುವ ಉದ್ದೇಶದಿಂದ ಸಂಚಾರಿ ಪೊಲೀಸರು ಡ್ರಂಕನ್ ಅಂಡ್ ಡ್ರೈವ್ ಪರೀಕ್ಷೆ ನಡೆಸುತ್ತಾರೆ. ಇದರ ಮೂಲ ಉದ್ದೇಶ ಕುಡಿದ ನಶೆಯಲ್ಲಿ ಉಂಟಾಗುವ ಅಪಘಾತಗಳನ್ನು ತಪ್ಪಿಸುವುದಾಗಿದೆ. ಇದೇ ರೀತಿಯಲ್ಲಿ ಇದೀಗ ತೆಲಂಗಾಣ ರಾಜ್ಯ ಪೊಲೀಸರು ಮಾದಕ ವ್ಯಸನಿಗಳ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಡ್ರಗ್ ಅಂಡ್ ಡ್ರೈವ್ ಪರೀಕ್ಷೆಗೆ ಚಾಲನೆ ನೀಡಿದ್ದಾರೆ.
ಹೇಗೆ ನಡೆಯಲಿದೆ ಪರೀಕ್ಷೆ: ನಗರದಲ್ಲಿ ಡ್ರಗ್ ವ್ಯಸನಿಗಳ ಪತ್ತೆಗೆ ಮುಂದಾಗಿರುವ ಪೊಲೀಸರು ಈ ಕ್ರಮಕ್ಕೆ ಜಾರಿಗೆ ತಂದಿದ್ದು, ಈ ಮೂಲಕ ಇದಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದ್ದಾರೆ. ಇದಕ್ಕಾಗಿ ಪೊಲೀಸ್ ಇಲಾಖೆ 'ಇಬೊನ್ ಯುನಿನ್ ಕಪ್' ಮಷಿನ್ ಮೂಲಕ ಮಾದಕ ವ್ಯಸನಿಗಳ ಪತ್ತೆ ಮಾಡಿದ್ದಾರೆ. ವಿಶೇಷವಾಗಿ ಗಾಂಜಾ ಸೇವನೆ ಪ್ರಕರಣ ಪತ್ತೆ ಇದರ ಹಿಂದಿನ ಉದ್ದೇಶವವಾಗಿದೆ. ಇದಕ್ಕಾಗಿ ತೆಲಂಗಾಣ ರಾಜ್ಯ ಆಂಟಿ ನಾರ್ಕೊಟಿಕ್ಸ್ ಬ್ಯೂರೊ (ಟಿಎಸ್ಎನ್ಎಬಿ) ಪರೀಕ್ಷಾ ಕಿಟ್ನೊಂದಿಗೆ ಸಿದ್ಧವಾಗಿದೆ. ಈ ಕಿಟ್ ಅನ್ನು ಎಲ್ಲಾ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಈ ಸಾಧನ ಬಳಕೆ ಮಾಡುವ ಮೂಲಕ ಮಾದಕ ವ್ಯಸನಿಗಳನ್ನು ಪತ್ತೆ ಮಾಡುವ ಕುರಿತು ತರಬೇತಿ ನೀಡಲಾಗಿದೆ. ಕೆಲವು ಪೊಲೀಸ್ ಠಾಣೆಗಳ ಲಿಮಿಟ್ಸ್ನಲ್ಲಿ ಈ ಸಂಬಂಧ ಪರಿಶೀಲನೆಯನ್ನು ಈಗಾಗಲೇ ಆರಂಭಿಸಲಾಗಿದೆ.
ಡೋರ್ನಾಕಲ್ ಸಿಐ ಉಪೇಂದ್ರ ರಾವ್ ಮತ್ತು ಎಸ್ಐ ಸಂತೋಷ್ ರಾವ್ ಸೋಮವಾರ ಇಲ್ಲಿ ಕೆಲವು ಡ್ರಗ್ ಅಂಡ್ ಡ್ರೈವ್ ಪರೀಕ್ಷೆ ನಡೆಸಿದ್ದಾರೆ. ರೈಲ್ವೆ ನಿಲ್ದಾಣ ಮತ್ತು ಬಸ್ಸ್ಟಾಂಡ್ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕೆಲವು ಯುವಕರಿಗೆ ಗರ್ಲಾ ಎಸ್ ಐ ಜೀನತ್ ಕುಮಾರ್ ಪರೀಕ್ಷೆ ನಡೆಸಿದ್ದಾರೆ.
ಪತ್ತೆ ಹೇಗೆ? ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುವನ್ನು ಸೇವಿಸುವ ಅನುಮಾನ ಬಂದರೆ, ನಾವು ಈ ಕಿಟ್ ಮೂಲಕ ಯೂರಿನ್ ಪರೀಕ್ಷೆ ನಡೆಸುತ್ತೇವೆ. ಕಿಟ್ನ ಸಾಧನದಲ್ಲಿ ಕೆಂಪು ಎರಡು ಲೈನ್ ಕಂಡರೆ, ಅದು ನೆಗೆಟಿವ್ ಎಂದು ಮತ್ತು ಒಂದು ಕೆಂಪು ಲೈನ್ ಕಂಡರೆ ಅದನ್ನು ಪಾಸಿಟಿವ್ ಎಂದು ಪರಿಗಣಿಸಲಾಗುವುದು. ಇದು ಒಂದು ವೇಳೆ ಪಾಸಿಟಿವ್ ಬಂದರೆ, ಆ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗುವುದು. ಅಗತ್ಯಬಿದ್ದರೆ, ಮತ್ತಷ್ಟು ಪರೀಕ್ಷೆ ನಡೆಸಲಾಗುವುದು ಎಂದು ಡೋರ್ನಾಕಲ್ ಸಿಐ ಉಪೇಂದ್ರ ರಾವ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಳಿಪಟ ಹಿಡಿಯಲು ಹೋಗಿ ರೈಲು ಡಿಕ್ಕಿ; ಇಬ್ಬರು ಮಕ್ಕಳು ಸಾವು