ETV Bharat / bharat

ಪ್ರೀತಿಯ ವಾರದಲ್ಲಿಂದು ಟೆಡ್ಡಿ ದಿನ; ಈ ಟೆಡ್ಡಿ ಬೇರ್​ ಹುಟ್ಟಿದ ಕಥೆ ಗೊತ್ತಾ? - ಟೆಡ್ಡಿ ದಿನ

Teddy Day 2024: ವ್ಯಾಲಂಟೈನ್​ ವಾರದ ನಾಲ್ಕನೇ ದಿನ ಟೆಡ್ಡಿ ದಿನವಾಗಿದೆ. ಪ್ರೀತಿಯ ಬೆಚ್ಚುಗೆಯ ಭಾವ ಮತ್ತು ಕಾಳಜಿ ಕುರಿತು ಈ ದಿನ ತಿಳಿಸುತ್ತದೆ

teddy-day-2024-valentines-week-day-4
teddy-day-2024-valentines-week-day-4
author img

By ETV Bharat Karnataka Team

Published : Feb 10, 2024, 12:51 PM IST

ಹೈದರಾಬಾದ್​: ಪ್ರೀತಿಪಾತ್ರರ ಕುರಿತು ಪ್ರೀತಿ, ಕಾಳಜಿ ಮತ್ತು ಸುರಕ್ಷತೆಯನ್ನು ಟೆಡ್ಡಿಯಂತಹ ಉಡುಗೊರೆ ನೀಡಿ ಹೇಳುವುದಕ್ಕಿಂತ ಉತ್ತಮ ಮಾರ್ಗ ಇಲ್ಲ. ಇದೇ ಕಾರಣಕ್ಕೆ ವ್ಯಾಲಂಟೈನ್​ ವಾರದ ನಾಲ್ಕನೇ ದಿನವನ್ನು ಟೆಡ್ಡಿ ದಿನವಾಗಿ ಆಚರಿಸಲಾಗುತ್ತದೆ.

ಪ್ರತಿ ವರ್ಷ ಫೆಬ್ರವರಿ 10ರಂದು ಟೆಡ್ಡಿ ದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು ಪ್ರೀತಿ ಪಾತ್ರರನ್ನು ಎಷ್ಟು ಕಾಳಜಿ ಮಾಡುತ್ತೀರಾ ಎಂಬುದನ್ನು ತಿಳಿಸಲು ಸಿಗುವ ಅವಕಾಶದ ದಿನವಾಗಿದೆ. ಅದರಲ್ಲೂ ಟೆಡ್ಡಿಯಂತಹ ಉಡುಗೊರೆ ನೀಡುವ ಮೂಲಕ ನಿಮ್ಮ ಪ್ರೀತಿಪಾತ್ರರ ಕುರಿತು ಭಾವನೆ ವ್ಯಕ್ತಪಡಿಸಬಹುದು.

ಟೆಡ್ಡಿ ಹುಟ್ಟಿದ ಕಥೆ: ನವೆಂಬರ್ 14, 1902ರಲ್ಲಿ ಅಧ್ಯಕ್ಷ ರೂಸ್​ವೆಲ್ಟ್ ಅವರನ್ನು ಮಿಸ್ಸಿಸ್ಸಿಪ್ಪಿಯ ಗವರ್ನರ್ ಆಂಡ್ರ್ಯೂ ಹೆಚ್ ಲಾಂಗಿನೊ ಅವರು ಬೇಟೆಗೆ ಆಹ್ವಾನಿಸಿದ್ದರು. ಇದಕ್ಕೆ ವಿರುದ್ಧವಾಗಿ ಮತ್ತೊಬ್ಬ ಬೇಟೆಗಾರ ಆತನ ಪಕ್ಷದಲ್ಲಿದ್ದ. ರೂಸ್​ವೆಲ್ಟ್​​​ ಈ ಬೇಟೆಯಲ್ಲಿ ಯಾವುದೇ ಕರಡಿಯನ್ನು ಕಾಣಲಿಲ್ಲ. ಆದರೆ ಆತನ ಸಹಾಯಕ ಹೋಲ್ಟ್ ಕೊಲಿಯರ್ ಕಪ್ಪು ಕರಡಿಯೊಂದನ್ನು ಮರಕ್ಕೆ ಕಟ್ಟಿಹಾಕಿದ್ದನು.

ಕೊಲಿಯರ್​ ರೊಸ್ವೆಲ್ಟ್​ ಕರೆದು ಕಪ್ಪು ಕರಡಿಯನ್ನು ಶೂಟ್​ ಮಾಡುವಂತೆ ತಿಳಿಸಿದ. ಆದರೆ, ಇದಕ್ಕೆ ರೂಸ್​ವೆಲ್ಟ್​​​ ನಿರಾಕರಿಸಿದ. ಈ ಘಟನೆ ಮರುದಿನ ದೇಶದೆಲ್ಲೆಡೆ ಪತ್ರಿಕೆಯಲ್ಲಿ ಭಾರೀ ಸುದ್ದಿಯಾಯಿತು. ರೂಸ್​ವೆಲ್ಟ್​ ಕಪ್ಪು ಕರಡಿಯನ್ನು ಶೂಟ್​ ಮಾಡಲು ನಿರಾಕರಿಸಿದ ಎಂಬ ಸುದ್ದಿ ಎಲ್ಲೆಡೆ ಹರಡಿತು.

ಈ ಲೇಖನ ಓದಿದ ಬಳಿಕ ರಾಜಕೀಯ ಕಾರ್ಟೂನಿಸ್ಟ್​ ಕ್ಲಿಫರ್ಡ್ ಬೆರ್ರಿಮನ್, ಅಧ್ಯಕ್ಷ ಕಪ್ಪು ಕರಡಿಯನ್ನು ಶೂಟ್​ ಮಾಡಲು ನಿರಾಕರಿಸಿದ ಅಂಶದ ಕುರಿತು ವ್ಯಂಗ್ಯಚಿತ್ರ ಬರೆದ. ಈ ವ್ಯಂಗ ಚಿತ್ರ ನವೆಂಬರ್​ 16, 1902ರಂದು ವಾಷಿಂಗ್ಟನ್​ ಪೋಸ್ಟ್​​ನಲ್ಲಿ ಪ್ರಕಟವಾಯಿತು. ಇದನ್ನು ಕಂಡ ಬಳಿಕ ನ್ಯೂಯಾರ್ಕ್​ ಕ್ಯಾಂಡಿ ಅಂಗಡಿ ಮಾಲೀಕ ಮೊರ್ರಿಸ್​ ಮಿಕ್ಟೋಮ್​​ ಮತ್ತು ಆತನ ಪತ್ನಿ ರೋಸ್​ ಸ್ಟಫ್ಡ್​​ ಪ್ರಾಣಿಗಳ ಆಟಿಕೆ ಮಾಡಿದರು.

ಈ ವೇಳೆ ಅವರು ಕರಡಿ ಆಟಿಕೆಯನ್ನು ಅಧ್ಯಕ್ಷರಿಗೆ ಸಮರ್ಪಣೆ ಮಾಡಿದರು. ಇದಕ್ಕೆ ಟೆಡ್ಡಿ ಬೇರ್​ ಎಂದು ಹೆಸರಿಸಿದರು. ರೂಸ್​ವೆಲ್ಟ್ ಹೆಸರಿಗೆ ಅನುಮತಿ ಪಡೆದ ಬಳಿಕ ಈ ಆಟಿಕೆ ಕರಡಿಯ ವ್ಯಾಪಾಕ ಉತ್ಪಾದನೆ ಶುರುವಾಯಿತು. ಈ ಆಟಿಕೆ ಕರಡಿಗಳು ತುಂಬಾ ಜನಪ್ರಿಯವಾಯಿತು. ಮೊರ್ರಿಸ್​ ಮಿಕ್ಟೋಮ್ ಶೀಘ್ರದಲ್ಲೇ ತನ್ನದೇ ಆದ ಆಟಿಕೆ ಕಂಪನಿ ಐಡಿಯಲ್ ಟಾಯ್ ಕಂಪನಿಯನ್ನು ಪ್ರಾರಂಭಿಸಿದ. ಇದನ್ನೂ ಇಂದಿಗೂ ಕಾಣಬಹುದಾಗಿದೆ.

ಇಂತಹ ಟೆಡ್ಡಿಬೇರ್​ ಇದೀಗ ಪ್ರೀತಿಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ಇದೇ ಕಾರಣಕ್ಕೆ ಈ ಟೆಡ್ಡಿ ಬೇರ್​​ ನೀಡುವಾಗ ಎಚ್ಚರಿಕೆವಹಿಸುವುದು ಅವಶ್ಯ. ಸಾಂಪ್ರದಾಯಕ ಟೆಡ್ಡಿಗಳು ಪ್ರೀತಿಯ ಸಂಕೇತವಾಗಿ ಇಂದಿಗೂ ಅನೇಕರ ಹೃದಯಲ್ಲಿ ಸ್ಥಾನ ಪಡೆದಿದೆ. ನಿಮ್ಮ ಪ್ರೀತಿಪಾತ್ರರಿಗೆ ಪ್ರೀತಿ ಜೊತಗೆ ಕಾಳಜಿಗೆ ನೀಡುವ ಮೂಲಕ ನಿಮ್ಮ ಭಾವನೆಗಳನ್ನು ತಿಳಿಸಲು ಇದಕ್ಕಿಂತ ಉತ್ತಮ ಉಡುಗೊರೆ ಕೂಡ ಇಲ್ಲ.

ಇದನ್ನೂ ಓದಿ: ಚಾಕೋಲೆಟ್​ನೊಂದಿಗೆ ಪ್ರೀತಿಯ ಬಂಧದ ಸಿಹಿ ಮತ್ತಷ್ಟು ಹೆಚ್ಚಿಸಿಕೊಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.