ETV Bharat / bharat

ಗೋಡೆ ಕುಸಿದು ಮೂವರು ಸಾವು, ಮೂವರಿಗೆ ಗಂಭೀರ ಗಾಯ - workers Died - WORKERS DIED

ಪುದುಚೇರಿಯಲ್ಲಿ ಸಂಭವಿಸಿದ ಗೋಡೆ ಕುಸಿತದಲ್ಲಿ ಮೂವರು ಕಾರ್ಮಿಕರು ಸಾವಿಗೀಡಾದ ಘಟನೆ ನಡೆದಿದೆ.

ಪುದುಚೇರಿಯಲ್ಲಿ ಗೋಡೆ ಕುಸಿದು ಮೂವರು ಸಾವು
ಪುದುಚೇರಿಯಲ್ಲಿ ಗೋಡೆ ಕುಸಿದು ಮೂವರು ಸಾವು
author img

By ETV Bharat Karnataka Team

Published : Mar 31, 2024, 5:40 PM IST

ಚೆನ್ನೈ/ಪುದುಚೇರಿ: ಒಳಚರಂಡಿ ಕಾಮಗಾರಿಯ ವೇಳೆ ಕಟ್ಟಡದ ಗೋಡೆ ಕುಸಿದು ಮೂವರು ಕಾರ್ಮಿಕರು ಸಾವಿಗೀಡಾಗಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಭಾನುವಾರ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುದುಚೇರಿಯ ಮರಪಾಲಂ, ವಸಂತನಗರ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಇಂದು (ಭಾನುವಾರ) ಬೆಳಗ್ಗೆ 16 ಮಂದಿ ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿದ್ದರು. ಚರಂಡಿಯ ಮಣ್ಣು ತೆಗೆದು ಗೋಡೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಪುದುಚೇರಿ ವಿದ್ಯುತ್ ಇಲಾಖೆಗೆ ಸೇರಿದ 33 ವರ್ಷಗಳಷ್ಟು ಹಳೆಯದಾದ ಗೋಡೆಯು ಹಠಾತ್ತನೆ ಕುಸಿದಿದೆ. ಗೋಡೆಯ ಅವಶೇಷಗಳು ಕಾರ್ಮಿಕರ ಮೇಲೆ ಬಿದ್ದಿದ್ದು, ಅದರಡಿ ಅವರು ಸಿಲುಕಿದ್ದರು.

ವಿಷಯ ತಿಳಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ತಕ್ಷಣವೇ ಧಾವಿಸಿ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅವಶೇಷಗಳಡಿ ಸಿಲುಕಿದ ಮೂವರನ್ನು ರಕ್ಷಿಸಲಾಗಿದೆ. ಅವರು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಆಂಬ್ಯುಲೆನ್ಸ್ ಸಕಾಲಕ್ಕೆ ಬಾರದ ಕಾರಣ ಗಾಯಾಳು ಕಾರ್ಮಿಕರನ್ನು ಮಿನಿ ಟ್ರಕ್‌ನಲ್ಲಿ ಸಾಗಿಸಲಾಯಿತು.

ಮೃತ ಕಾರ್ಮಿಕರು ತಮಿಳುನಾಡಿನವರು: ಗೋಡೆ ಕುಸಿತದಲ್ಲಿ ಮೃತಪಟ್ಟ ಕಾರ್ಮಿಕರು ತಮಿಳುನಾಡಿನವರು ಎಂದು ತಿಳಿದುಬಂದಿದೆ. ಕೆಲಸ ಅರಸಿ ಬಂದ ಕಾರ್ಮಿಕರು ಗೋಡೆ ಕುಸಿತದಲ್ಲಿ ಸಿಲುಕಿ ಸಾವಿಗೀಡಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಪಘಾತದಲ್ಲಿ ಮೃತಪಟ್ಟವರು ಅರಿಯಲೂರು ಜಿಲ್ಲೆಯ ನೆಟ್ಟಲಕುರಿಚಿ ಮೂಲದ ಭಾಗ್ಯರಾಜ್, ಬಾಲಮುರುಗನ್ ಮತ್ತು ಆರೋಗ್ಯ ರಾಜ್ ಎಂದು ತಿಳಿದುಬಂದಿದೆ. ಅದೃಷ್ಟವಶಾತ್​ ಸ್ಥಳದಲ್ಲಿದ್ದ ಇನ್ನುಳಿದ 10 ಜನರಿಗೆ ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ.

ದುರಂತ ನಡೆದ ಸ್ಥಳಕ್ಕೆ ತಮಿಳುನಾಡು ಶಾಸಕ ಎಂಸಿ ಸಂಪತ್ ಮತ್ತು ಪುದುಚೇರಿ ಮಾಜಿ ಶಾಸಕ ಭಾಸ್ಕರನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಹಾಡಹಗಲೇ ಒಬ್ಬ ಯುವಕ, ಇಬ್ಬರು ಯುವತಿಯರ ಕಿಡ್ನಾಪ್: ನಾಳೆ ಲಂಡನ್​ಗೆ ಹೋಗಬೇಕಿದ್ದ ಯುವಕ - Kidnap Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.