ETV Bharat / bharat

ತಮಿಳುನಾಡು ಕಳ್ಳಭಟ್ಟಿ ದುರಂತ: ಇದುವರೆಗೆ 50 ಸಾವು, ಫೋಟೋ ಹಿಡಿದು ಪೋಷಕರಿಗಾಗಿ ಪುತ್ರಿಯ ಹುಡುಕಾಟ! - Tamil Nadu Hooch Tragedy - TAMIL NADU HOOCH TRAGEDY

ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಕಳ್ಳಭಟ್ಟಿ ದುರಂತದಲ್ಲಿ ಸಾವಿನ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜೀನಾಮೆಗೆ ಪ್ರತಿಪಕ್ಷ ಎಐಎಡಿಎಂಕೆ ಆಗ್ರಹಿಸಿದೆ.

Kallakurichi Hooch Tragedy
ತಮಿಳುನಾಡು ಕಳ್ಳಭಟ್ಟಿ ದುರಂತ (ETV Bharat)
author img

By ETV Bharat Karnataka Team

Published : Jun 21, 2024, 5:06 PM IST

ಚೆನ್ನೈ(ತಮಿಳುನಾಡು): ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಕಳ್ಳಭಟ್ಟಿ ದುರಂತದಿಂದ ಮೃತರ ಸಂಖ್ಯೆ 50ಕ್ಕೇರಿದೆ. ಕನಿಷ್ಠ 100 ಜನರು ಅನಾರೋಗ್ಯದಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಪೈಕಿ ಹೆಚ್ಚಿನವರ ಪರಿಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬಸ್ಥರನ್ನು ಕಳೆದುಕೊಂಡ ಮನೆಯ ಸದಸ್ಯರಲ್ಲಿ ದುಃಖ ಮಡುಗಟ್ಟಿದೆ.

ಕಳೆದ ಮೂರು ದಿನಗಳ ಹಿಂದೆ ಕಲ್ಲಕುರಿಚಿ ಜಿಲ್ಲೆಯಲ್ಲಿ ಅನೇಕರು ನಕಲಿ ಮದ್ಯ ಸೇವಿಸಿದ್ದರು. ನಂತರ ನಿರಂತರವಾಗಿ ಸಾವಿನ ಕುರಿತು ವರದಿಗಳಾಗುತ್ತಿದೆ. ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇಂದು ಮತ್ತೆ ಎಂಟು ಜನರು ಮೃತಪಟ್ಟಿದ್ದಾರೆ.

ಕಳೆದ ವರ್ಷ ಸಹ ವಿಲ್ಲುಪುರಂ ಜಿಲ್ಲೆಯಲ್ಲಿ ಎರಡು ಕಳ್ಳಭಟ್ಟಿ ದುರಂತಗಳು ಸಂಭವಿಸಿದ್ದವು. ಇದರಿಂದ ಒಟ್ಟಾರೆ 22 ಜನರು ಪ್ರಾಣ ಕಳೆದುಕೊಂಡಿದ್ದರು. ಈಗ ಕೇವಲ ಒಂದು ವರ್ಷದೊಳಗೆ ಮತ್ತೊಂದು ದುರಂತ ಘಟಿಸಿದೆ. ಜಿಲ್ಲಾ ಕೇಂದ್ರಗಳಲ್ಲಿಯೂ ಅಕ್ರಮ ಮದ್ಯದ ತಯಾರಿಕೆ ಮತ್ತು ಮಾರಾಟ ತಡೆಯಲು ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.

ಕುಟುಂಬಸ್ಥರಲ್ಲಿ ಮಡುಗಟ್ಟಿದ ದುಃಖ: ಕಳ್ಳಭಟ್ಟಿ ದುರಂತದಿಂದಾಗಿ ಕಲ್ಲಕುರಿಚಿ ಟೌನ್ ಬಸ್ ನಿಲ್ದಾಣದಿಂದ ಕೇವಲ ಕೂಗಳತೆಯ ದೂರದಲ್ಲಿರುವ ಕರುಣಾಪುರದಲ್ಲಿ ಸೂತಕದ ಛಾಯೆ ಆವರಿಸಿದೆ. ಈ ಪ್ರದೇಶದ ಬೀದಿಗಳಲ್ಲಿ ಹಾದುಹೋದರೆ ಸಂತ್ರಸ್ತರ ಕುಟುಂಬ ಸದಸ್ಯರ ರೋದನೆ ಮತ್ತು ಅಳಲು ಮಾತ್ರ ಕೇಳುತ್ತಿದೆ. ಮೃತರಲ್ಲಿ ಬಹತೇಕರು ಬಡವರು, ಕಾರ್ಮಿಕರೇ ಆಗಿದ್ದು, ಇದರಲ್ಲಿ ಅವಿವಾಹಿತರು ಸಹ ಸೇರಿದ್ದಾರೆ.

37 ವರ್ಷದ ಮೃತ ಪರಮಶಿವನ್ ಎಂಬಾತನ ಸಹೋದರ ಉದಯ ಕುಮಾರ್ 'ಈಟಿವಿ ಭಾರತ್' ಜೊತೆ ಮಾತನಾಡಿ, ''ನಮ್ಮ ಸಹೋದರನಿಗೆ ಇನ್ನೂ ಮದುವೆ ಆಗಿರಲಿಲ್ಲ. ಅವನು ಕೂಲಿ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿ ಪ್ರತಿದಿನ ಮದ್ಯ ಸೇವಿಸುತ್ತಿದ್ದ. ಹೊಟ್ಟೆ ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ವೇಳೆ ಪರಮಶಿವನ್ ಮೃತಪಟ್ಟಿದ್ದಾನೆ'' ಎಂದು ತಿಳಿಸಿದರು.

ಆಸ್ಪತ್ರೆಯಲ್ಲೂ ಕರುಣಾಜನಕ ದೃಶ್ಯಗಳು: ಸಂತ್ರಸ್ತರ ಮನೆಗಳು ಮಾತ್ರವಲ್ಲದೇ, ಅವರು ದಾಖಲಾದ ಆಸ್ಪತ್ರೆಗಳಲ್ಲೂ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿವೆ. ಸಂತ್ರಸ್ತ ಕರುಣಾಪುರದ ರಾಮಕೃಷ್ಣನ್ ಎಂಬವರ ಪತ್ನಿ ಆಸ್ಪತ್ರೆಗೆ ಮಧ್ಯರಾತ್ರಿ ಕಿರುಚಾಡುತ್ತಾ ಆಗಮಿಸಿ, ''ನಮ್ಮದು ಬಡ ಕುಟುಂಬ. ದಿನವೂ ದುಡಿದರೆ ಮಾತ್ರ ಬದುಕಲು ಸಾಧ್ಯ, ನಾನು ಶಾಲಾ ಕೆಲಸಕ್ಕೆ ಹೋಗಿದ್ದೆ. ನಾನು ಹಿಂದಿರುಗುವ ವೇಳೆಗೆ ಮದ್ಯ ಕುಡಿದು ಪತಿ ಅನಾರೋಗ್ಯಕ್ಕೆ ತುತ್ತಾಗಿದ್ದರು'' ಎಂದು ಕಣ್ಣೀರು ಸುರಿಸಿದರು.

ಫೋಟೋ ಹಿಡಿದು ತಂದೆ-ತಾಯಿಯ ಹುಡುಕಿದ ಮಗಳು!: ಆಸ್ಪತ್ರೆ ಆವರಣದಲ್ಲಿ ಲಕ್ಷ್ಮಿ ಎಂಬವರು ಕೂಡ ಇದೇ ರೀತಿ ಕಣ್ಣೀರು ಹಾಕುತ್ತಿದ್ದರು. ಲಕ್ಷ್ಮಿಯ ತಾಯಿ ಕಲಾ ಹಾಗೂ ತಂದೆ ರವಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಡೀ ಆಸ್ಪತ್ರೆಯಲ್ಲಿ ಹುಡುಕಾಡಿದರೂ ಪೋಷಕರು ಪತ್ತೆಯಾಗಿರಲಿಲ್ಲ. ಲಕ್ಷ್ಮಿ ತಮ್ಮ ಪೋಷಕರ ಛಾಯಾಚಿತ್ರಗಳನ್ನು ತೋರಿಸಿದಾಗ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು. ಮೃತರೆಲ್ಲರನ್ನೂ ಗೋಮುಕಿ ನದಿಯ ದಡದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಆಸ್ಪತ್ರೆಗಳಲ್ಲಿ 100 ಜನರಿಗೆ ಚಿಕಿತ್ಸೆ: ಕಳ್ಳಭಟ್ಟಿ ಸೇವಿಸಿ ಅನಾರೋಗ್ಯಕ್ಕೀಡಾದ ಇನ್ನೂ ಸುಮಾರು 100 ಮಂದಿಯನ್ನು ವಿವಿಧ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳಲ್ಲಿ ದಾಖಲಿಸಲಾಗಿದೆ. ಅವರಲ್ಲಿ ಹೆಚ್ಚಿನವರ ಪರಿಸ್ಥಿತಿ ಗಂಭೀರಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಮತ್ತೆ ಹತ್ತು ಜನರು ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದೇ ವೇಳೆ, ಅಕ್ರಮ ಮದ್ಯ ಮಾರಾಟದ ಆರೋಪದ ಮೇಲೆ ದಂಪತಿ ಸೇರಿ ಮೂವರನ್ನು ಬಂಧಿಸಲಾಗಿದೆ. ಸುಮಾರು 200 ಲೀಟರ್ ಮದ್ಯ ಪತ್ತೆ ಹಚ್ಚಿಸಲಾಗಿದೆ.

ಸಿಎಂ ರಾಜೀನಾಮೆಗೆ ಪ್ರತಿಪಕ್ಷಗಳ ಒತ್ತಾಯ: ಮತ್ತೊಂದೆಡೆ, ಕಳ್ಳಭಟ್ಟಿ ದುರಂತವು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಇಂದು ವಿಧಾನಸಭೆಗೆ ವಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದಲ್ಲಿ ಎಐಎಡಿಎಂಕೆ ಶಾಸಕರು ಕಪ್ಪು ಅಂಗಿಗಳನ್ನು ಧರಿಸಿ ಬಂದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜೀನಾಮೆ ನೀಡುವಂತೆ ಭಿತ್ತಿಪತ್ರಗಳನ್ನು ಹಿಡಿದುಕೊಂಡು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೇ, ಈ ದುರಂತದ ಬಗ್ಗೆ ತಕ್ಷಣವೇ ಚರ್ಚಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ, ಎಐಎಡಿಎಂಕೆ ಶಾಸಕರ ಉಚ್ಚಾಟನೆಗೆ ಸದನ ಸಾಕ್ಷಿಯಾಯಿತು.

ಇದನ್ನೂ ಓದಿ: ರಣಬಿಸಿಲಿಗೆ ಉತ್ತರ ತತ್ತರ: ಬಿಸಿಗಾಳಿ​ಗೆ 4 ತಿಂಗಳಲ್ಲಿ 114 ಸಾವು, 41,000 ಹೀಟ್​ಸ್ಟ್ರೋಕ್​ ಶಂಕಿತ ಪ್ರಕರಣ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.