ETV Bharat / bharat

ಸಂದೇಶ್‌ಖಾಲಿ ಪ್ರಕರಣ: ಹೈಕೋರ್ಟ್ ಅನುಮತಿ ಬಳಿಕ ಸಂತ್ರಸ್ತರನ್ನು ಭೇಟಿಯಾದ ಸುವೇಂದು ಅಧಿಕಾರಿ

author img

By ETV Bharat Karnataka Team

Published : Feb 20, 2024, 1:54 PM IST

Updated : Feb 20, 2024, 2:16 PM IST

ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹಾಗೂ ಇತರ ಪಕ್ಷಗಳ ಮುಖಂಡರನ್ನು ಸಂದೇಶಖಾಲಿ ಪ್ರದೇಶಕ್ಕೆ ಹೋಗದಂತೆ ಪೊಲೀಸರು ತಡೆದಿದ್ದರು. ಆದರೆ ಹೈಕೋರ್ಟ್ ಆದೇಶದ ಬಳಿಕ ಸುವೇಂದು ಅಧಿಕಾರಿ ಸಂದೇಶಖಾಲಿಗೆ ಹೋಗಿ ಸಂತ್ರಸ್ತರನ್ನು ಭೇಟಿ ಮಾಡಿ ಮಾತನಾಡಿದರು.

Suvendu Adhikari  ಸುವೇಂದು ಅಧಿಕಾರಿ  ಕೋಲ್ಕತ್ತಾ ಹೈಕೋರ್ಟ್‌  Calcutta High Court  ಸಂದೇಶಖಾಲಿ ಪ್ರದೇಶ
ಹೈಕೋರ್ಟ್ ಅನುಮತಿ ನಂತರ ಸಂದೇಶಖಾಲಿಗೆ ತಲುಪಿ ಸಂತ್ರಸ್ತರನ್ನು ಭೇಟಿಯಾದ ಸುವೇಂದು ಅಧಿಕಾರಿ

ಸಂದೇಶ್‌ಖಾಲಿ (ಪಶ್ಚಿಮ ಬಂಗಾಳ): ಟಿಎಂಸಿ ನಾಯಕರು ಹಾಗೂ ಅವರ ಬೆಂಬಲಿಗರು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಕಳೆದ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸಂದೇಶಖಾಲಿ ಪ್ರವೇಶಿಸದಂತೆ ನಿರ್ಬಂಧ ವಿಧಿಸಿತ್ತು.

ಈ ಸಂಬಂಧ ಕೋರ್ಟ್​ ಮೊರೆ ಹೋಗಿದ್ದ ಪ್ರತಿಪಕ್ಷಗಳು, ಸಂತ್ರಸ್ತರನ್ನು ಭೇಟಿ ಮಾಡಲು ಕೋರ್ಟ್​ನಿಂದ ಅನುಮತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆದರೆ, ಕೋಲ್ಕತ್ತಾ ಹೈಕೋರ್ಟ್‌ನ ಆದೇಶದ ಹೊರತಾಗಿಯೂ ರಾಜ್ಯದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಗೆ ಹೋಗದಂತೆ ತಮ್ಮನ್ನು ಪೊಲೀಸರು ತಡೆಯಲಾಗಿದೆ ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಂಗಳವಾರ ಆರೋಪಿಸಿದ್ದಾರೆ. ಮತ್ತೊಂದು ಕಡೆ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ವೃಂದಾ ಕಾರಟ್ ಅವರನ್ನು ಸಂದೇಶಖಾಲಿಗೆ ಭೇಟಿ ನೀಡುವುದನ್ನು ಪೊಲೀಸರು ತಡೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, ಪೊಲೀಸರು ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ಸಂದೇಶಖಾಲಿ ಪ್ರದೇಶದಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144 ಅನ್ನು ಅನ್ವಯಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠದ ಮೊರೆ ಹೋಗಿದೆ. ಇಲ್ಲಿ ಪ್ರತಿಭಟನೆ ಮಾಡಿದ ನಂತರ ನ್ಯಾಯಾಲಯದ ಮೊರೆ ಹೋಗುತ್ತೇವೆ'' ಎಂದು ಅವರು ಇದೇ ವೇಳೆ ಹೇಳಿದರು. ಈ ನಡುವೆ ಕೋಲ್ಕತ್ತಾ ದ್ವಿಸದಸ್ಯ ಪೀಠವು ಸಂದೇಶ್​ಖಾಲಿಗೆ ಭೇಟಿ ನೀಡಲು ಅನುಮತಿ ನೀಡಿದೆ.

ಸಂದೇಶಖಾಲಿಗೆ ಭೇಟಿ ನೀಡಲು ಸುವೇಂದುಗೆ ಹೈಕೋರ್ಟ್ ಅನುಮತಿ: ಕೋಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಗೆ ಸಂದೇಶಖಾಲಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠವು ಸುವೇಂದು ಅಧಿಕಾರಿ ಮತ್ತು ಮತ್ತೋರ್ವ ಬಿಜೆಪಿ ಶಾಸಕ ಶಂಕರ್ ಘೋಷ್ ಮಂಗಳವಾರ ಸಂದೇಶಖಾಲಿಗೆ ತೆರಳಲು ಅನುಮತಿ ನೀಡಿದ ಏಕ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.

ನ್ಯಾಯಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಬಿಜೆಪಿ ನಾಯಕನಿಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಬೆಂಬಲಿಗರು ಅಥವಾ ವ್ಯಕ್ತಿಗಳು ಅವರೊಂದಿಗೆ ಬಾರದಂತೆ ನೋಡಿಕೊಳ್ಳಬೇಕು ಎಂದು ವಿಭಾಗೀಯ ಪೀಠ ಸೂಚಿಸಿದೆ.

ಇದನ್ನೂ ಓದಿ: 2018ರ ಮಾನಹಾನಿ ಕೇಸ್​: ರಾಹುಲ್​ ಗಾಂಧಿಗೆ ಜಾಮೀನು ಮಂಜೂರು, ಯಾತ್ರೆ ಮರು ಆರಂಭ

Last Updated : Feb 20, 2024, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.