ನವದೆಹಲಿ: ಸುಪ್ರೀಂ ಕೋರ್ಟ್ನ ಯೂಟ್ಯೂಬ್ ಚಾನಲ್ ಅನ್ನು ಶುಕ್ರವಾರ ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದು, ಅದರಲ್ಲಿ ಅಮೆರಿಕ ಮೂಲದ ಕಂಪನಿ ರಿಪ್ಪೆಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಕ್ರಿಪ್ಟೊಕರೆನ್ಸಿ ಕುರಿತು ಪ್ರಚಾರ ಮಾಡಲಾಗಿದೆ.
ಯೂಟ್ಯೂಬ್ ಚಾನಲ್ ಹ್ಯಾಕ್ ಆಗಿದ್ದು, ಖಾಲಿ ವಿಡಿಯೋದಲ್ಲಿ 'ಬ್ರಾಡ್ ಗಾರ್ಲಿಂಗ್ಹೌಸ್: ರಿಪ್ಪೆಲ್ ರೆಸ್ಪಾಂಡ್ಸ್ ಟು ದಿ ಎಸ್ಇಸಿಯ 2 ಬಿಲಿಯನ್ ಡಾಲರ್ ದಂಡ! ಎಕ್ಸ್ಆರ್ಪಿ ಪ್ರೈಸ್ ಪ್ರೆಡಿಕ್ಷನ್' ("Brad Garlinghouse: Ripple Responds To The SEC's $2 Billion Fine! XRP PRICE PREDICTION") ಎಂಬ ಶೀರ್ಷಿಕೆ ಕಂಡುಬರುತ್ತಿದೆ.
ಸರ್ವೋಚ್ಛ ನ್ಯಾಯಾಲಯದ ಯೂಟ್ಯೂಬ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಮತ್ತು ಸಾಂವಿಧಾನಿಕ ಪೀಠದ ಮುಂದಿರುವ ಪ್ರಕರಣಗಳ ವಿಚಾರಣೆಯ ನೇರಪ್ರಸಾರ ಮಾಡಲಾಗುತ್ತದೆ. 2018ರಲ್ಲಿ ಸಿಜೆಐ ಯು.ಯು.ಲಲಿತ್ ನೇತೃತ್ವದಲ್ಲಿ ನಡೆದ ನ್ಯಾಯಾಲಯದ ಸಭೆಯಲ್ಲಿ ಸಾಂವಿಧಾನಿಕ ಪೀಠದ ವಿಚಾರಣೆಗಳನ್ನು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡಲು ಕೋರ್ಟ್ ನಿರ್ಧರಿಸಿತ್ತು.
ಇದನ್ನೂ ಓದಿ: ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಟ್ವಿಟರ್ ಹ್ಯಾಕ್: ಅನಗತ್ಯ ಟ್ವೀಟ್ಸ್ ನಿರ್ಲಕ್ಷಿಸುವಂತೆ ನಟಿಯ ಮನವಿ