ETV Bharat / bharat

ನಲ್ ಜಲ್ ಮಿಷನ್‌ನ ಕಾಮಗಾರಿ ಕಾರ್ಯದಲ್ಲಿ ತೊಡಗಿದ್ದ ನಾಲ್ವರನ್ನು ಅಪಹರಿಸಿದ ನಕ್ಸಲರು - ನಲ್ ಜಲ್ ಮಿಷನ್‌

ಛತ್ತೀಸ್‌ಗಢದ ಸುಕ್ಮಾದಲ್ಲಿ ನಲ್ ಜಲ್ ಮಿಷನ್‌ನ ಕಾಮಗಾರಿ ಕಾರ್ಯದಲ್ಲಿ ತೊಡಗಿದ್ದ ನಾಲ್ವರನ್ನು ನಕ್ಸಲರು ಅಪಹರಣ ಮಾಡಿದ್ದಾರೆ. ಜೊತೆಗೆ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿದ್ದಾರೆ. ಆದ್ರೆ ಬಸ್ತಾರ್ ಪೊಲೀಸರು ಅಪಹರಣ ಪ್ರಕರಣವನ್ನು ಖಚಿತಪಡಿಸಿಲ್ಲ.

Sukma Naxalites kidnapped  Naxalite violence in Sukma  ನಾಲ್ವರನ್ನು ಅಪಹರಿಸಿದ ನಕ್ಸಲರು  ನಲ್ ಜಲ್ ಮಿಷನ್‌ನ ಕಾಮಗಾರಿ  ಛತ್ತೀಸ್‌ಗಢ
ನಲ್ ಜಲ್ ಮಿಷನ್‌ನ ಕಾಮಗಾರಿ ಕಾರ್ಯದಲ್ಲಿ ತೊಡದ್ದ ನಾಲ್ವರನ್ನು ಅಪಹರಿಸಿದ ನಕ್ಸಲರು
author img

By ETV Bharat Karnataka Team

Published : Feb 12, 2024, 11:34 AM IST

ಸುಕ್ಮಾ (ಛತ್ತೀಸ್‌ಗಢ): ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ಜಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರು, ನಲ್ ಜಲ್ ಮಿಷನ್‌ನ ಕಾಮಗಾರಿ ಕಾರ್ಯದಲ್ಲಿ ತೊಡಗಿದ್ದ ನಾಲ್ವರನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ. ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಜೆಸಿಬಿಯನ್ನೂ ನಕ್ಸಲರು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಅಪಹರಣಕ್ಕೊಳಗಾದವರನ್ನು ಬಿಡುಗಡೆ ಮಾಡುವಂತೆ ಕುಟುಂಬಸ್ಥರು ನಕ್ಸಲ್ ಸಂಘಟನೆಗೆ ಮನವಿ ಮಾಡಿದ್ದಾರೆ. ಆದ್ರೆ, ಬಸ್ತಾರ್ ಪೊಲೀಸರು ಅಪಹರಣವನ್ನು ಖಚಿತಪಡಿಸಿಲ್ಲ.

ನಲ್ ಜಲ್ ಮಿಷನ್‌ನ ಕಾಮಗಾರಿ ಕಾರ್ಯದಲ್ಲಿ ತೊಡಗಿದ್ದ ನಾಲ್ವರ ಕಿಡ್ನಾಪ್: ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಸುಕ್ಮಾ ಜಿಲ್ಲೆಯ ಜಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜಾಪುರ ಮತ್ತು ಸುಕ್ಮಾದ ಗಡಿ ಪ್ರದೇಶದಲ್ಲಿರುವ ಸಿಂಗಾರಂ ಗ್ರಾಮದಲ್ಲಿ ನಲ್ ಜಲ್ ಮಿಷನ್‌ ಯೋಜನೆಯಡಿ ಕಾಮಗಾರಿ ಕೆಲಸ ನಡೆಯುತ್ತಿದೆ. ಭಾನುವಾರ ಸಂಜೆ, ಶಸ್ತ್ರಸಜ್ಜಿತ ನಕ್ಸಲರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತಲುಪಿದ ನಂತರ, ಜೆಸಿಬಿ ಆಪರೇಟರ್, ಗುತ್ತಿಗೆದಾರ ಮತ್ತು ಇಬ್ಬರು ಕಾರ್ಮಿಕರನ್ನು ಅಪಹರಿಸಿದ್ದಾರೆ.

ಜೊತೆಗೆ ಮಾವೋವಾದಿಗಳು ತಮ್ಮೊಂದಿಗೆ ಜೆಸಿಬಿ ಯಂತ್ರವನ್ನೂ ತೆಗೆದುಕೊಂಡು ಹೋಗಿದ್ದಾರೆ. ಘಟನೆಯ ನಂತರ ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅಪಹರಣಕ್ಕೆ ಒಳಗಾದವರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದು, ಅಪಹರಣಕ್ಕೊಳಗಾದವರನ್ನು ಬಿಡುಗಡೆ ಮಾಡುವಂತೆ ನಕ್ಸಲ್ ಸಂಘಟನೆಗೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ನಕ್ಸಲರು- ಸೈನಿಕರ ನಡುವೆ ಗುಂಡಿನ ಚಕಮಕಿ: ಅಪಹರಣ ಘಟನೆ ನಡೆದ ಪ್ರದೇಶವನ್ನು ನಕ್ಸಲರ ಕೋರ್ ಏರಿಯಾ ಎಂದು ಕರೆಯಲಾಗುತ್ತದೆ. ನಕ್ಸಲರು ಜನವರಿ 30 ರಂದು ಟೇಕಲ್‌ಗುಡೆಂ ಗ್ರಾಮದಲ್ಲಿ ನಕ್ಸಲರು ಮತ್ತು ಸೈನಿಕರ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿತ್ತು. ಈ ಘಟನೆಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು. 15 ಯೋಧರು ಗಾಯಗೊಂಡಿದ್ದರು. ಇಬ್ಬರು ನಕ್ಸಲ್​ ನಾಯಕರನ್ನು ಸೈನಿಕರು ಬೇಟೆಯಾಡಿದ್ದರು.

ಇದನ್ನೂ ಓದಿ: ಕತಾರ್‌ನಿಂದ ತಾಯ್ನಾಡಿಗೆ ಮರಳಿದ ನೌಕಾಪಡೆ ಮಾಜಿ ಯೋಧರಿಂದ ಪ್ರಧಾನಿ ಮೋದಿ ಶ್ಲಾಘನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.