ಮಧುಬನಿ(ಬಿಹಾರ): ಶಾಲೆಯಲ್ಲಿ ಕೊಠಡಿಗಳಿಲ್ಲ. ಊಟ ಮಾಡಲೂ ಸ್ಥಳವಿಲ್ಲ. ಹೀಗಾಗಿ, ಮಕ್ಕಳು ಮಕ್ಕಳು ಸ್ಮಶಾನದಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಸಮಾಧಿಗಳ ಪಕ್ಕದಲ್ಲಿ ಅಥವಾ ಮಸೀದಿಯ ಗೇಟ್ ಸಮೀಪ ಕುಳಿತು ಊಟ ಮಾಡುತ್ತಿದ್ದಾರೆ. ಇದು ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಕಂಡುಬಂದ ದಯನೀಯ ಸ್ಥಿತಿ.
ಮಧುಬನಿಯ ಅಂಧರತಧಿ ಬ್ಲಾಕ್ನ ಹರ್ನಾ ಪಂಚಾಯತ್ನ ಉರ್ದು ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಸ್ಮಶಾನವೇ ಶಾಲೆ. ತರಗತಿ ಕೊಠಡಿಗಳ ಅಭಾವದಿಂದಾಗಿ ಸ್ಮಶಾನದಲ್ಲಿ ಪಾಠ ಕೇಳುವಂತಾಗಿದೆ. ಈ ಪರಿಸ್ಥಿತಿ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂಬ ಬಿಹಾರ ಸರ್ಕಾರದ ಹೇಳಿಕೆಯನ್ನು ಅಣಕಿಸುತ್ತಿದೆ.
'ಈಟಿವಿ ಭಾರತ್' ರಿಯಾಲಿಟಿ ಚೆಕ್: ಶಾಲೆಯ ದುಸ್ಥಿತಿಯನ್ನು ಅರಿಯಲು 'ಈಟಿವಿ ಭಾರತ್' ತಂಡ ಭೇಟಿ ನೀಡಿದಾಗ, ತರಗತಿ ಕೊರತೆಯಿಂದಾಗಿ ಮಕ್ಕಳು ಸಮೀಪದ ಸ್ಮಶಾನದ ಗೋರಿಗಳ ಬಳಿಕ ಕುಳಿತು ಕಲಿಯುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಅವರು ಅಲ್ಲಿಯೇ ಕುಳಿತು ಊಟವನ್ನೂ ಮಾಡುತ್ತಿದ್ದರು. ಕೆಲವು ಮಕ್ಕಳು ಸಮೀಪದ ಸ್ಥಳೀಯ ಈದ್ಗಾ ಮತ್ತು ಮಸೀದಿಯ ಗೇಟ್ ಬಳಿ ಕುಳಿತು ಊಟ ಸೇವಿಸುತ್ತಿದ್ದ ದೃಶ್ಯ ಕಂಡುಬಂತು.
ಮಧುಬನಿ ಶಾಲೆಯನ್ನು 2006ರಲ್ಲಿ ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ಶಾಲೆಗೆ ಮೇಲ್ದರ್ಜೆಗೇರಿಸಲಾಗಿದೆ. ಆದರೂ, ಶಾಲೆಯ ಮೂಲ ಸೌಕರ್ಯದ ಕೊರತೆ ಸಮಸ್ಯೆ ನೀಗಿಲ್ಲ. ಶಾಲೆಯನ್ನು ಉನ್ನತೀಕರಿಸಿದ ಬಳಿಕವೂ ಕಳೆದೆರಡು ವರ್ಷದಿಂದ ಇಲ್ಲಿರುವುದು ಕೇವಲ ಎರಡೇ ಎರಡು ತರಗತಿ.
2014-15ರ ಆರ್ಥಿಕ ವರ್ಷದಲ್ಲಿ ಶಾಲಾ ಕಟ್ಟಡಕ್ಕೆ 7 ಲಕ್ಷ ರೂಪಾಯಿ ಲಭಿಸಿತ್ತು. ಆದರೆ, ಭೂಮಿ ಕೊರತೆಯಿಂದಾಗಿ ಕಟ್ಟಡ ನಿರ್ಮಾಣವಾಗಿಲ್ಲ.
ಮುಖ್ಯೋಪಾಧ್ಯಯರ ಪ್ರತಿಕ್ರಿಯೆ: ಈ ಕುರಿತು ಮಾತನಾಡಿರುವ ಶಾಲೆಯ ಮುಖ್ಯೋಪಾಧ್ಯಯ ಜಗನ್ನಾಥ್ ಪಾಸ್ವಾನ್, "ಶಾಲೆಯಲ್ಲಿ ಎರಡು ತರಗತಿಗಳಿವೆ. ಒಂದನ್ನು ಅಡುಗೆ ಮತ್ತು ಧಾನ್ಯಗಳ ಸಂಗ್ರಹಣ ಕೋಣೆಯಾಗಿ ಮಾಡಲಾಗಿದೆ. ಉಳಿದ ಒಂದು ಕೊಠಡಿಯನ್ನು ತರಗತಿಗಾಗಿ ಮತ್ತು ಸಿಬ್ಬಂದಿ ಬಳಸುತ್ತಿದ್ದಾರೆ. ಆರಂಭದಲ್ಲಿ ಶಾಲೆಗೆ 400 ಮಕ್ಕಳು ನೋಂದಣಿಯಾಗಿದ್ದರು. ಆದರೆ, ತರಗತಿ ಕೊರತೆಯಿಂದಾಗಿ ಈ ಸಂಖ್ಯೆ ಕುಸಿಯಿತು. ಇದೀಗ 295 ಮಕ್ಕಳಿದ್ದು, ಅವರಿಗೆ 9 ಮಂದಿ ಶಿಕ್ಷಕರಿದ್ದಾರೆ. ಆದರೆ, ಮೂಲ ಸೌಕರ್ಯ ಕೊರತೆಯಿಂದ ಮಕ್ಕಳು ತರಗತಿಗೆ ಬದಲಾಗಿ ರಸ್ತೆ, ಸ್ಮಶಾನ, ಬೇವಿನ ಮರದ ಕೆಳಗೆ ಕುಳಿತು ಪಾಠ ಕೇಳುತ್ತಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಕಾಡು ಮಧ್ಯೆ ಮಳೆಯಲ್ಲೇ ಟರ್ಪಲ್ ಆಸರೆಯಲ್ಲಿ ತಂದೆಯ ಅಂತ್ಯಕ್ರಿಯೆ ನೆರವೇರಿಸಿದ 5 ವರ್ಷದ ಮಗಳು