ETV Bharat / bharat

ಮತಗಳಿಗಾಗಿ ಮೋದಿಯಿಂದ ರಾಜ್ಯಗಳ ನಡುವೆ ದ್ವೇಷದ ಭಾವನೆ ಸೃಷ್ಟಿ: ಪುರಿ ಜಗನ್ನಾಥನ ಖಜಾನೆಯ ಕೀಗಳ ಕುರಿತ ಹೇಳಿಕೆಗೆ ಸ್ಟಾಲಿನ್​ ವಾಗ್ದಾಳಿ - CM Stalin Slams PM Modi - CM STALIN SLAMS PM MODI

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯದ ರತ್ನ ಭಂಡಾರದ ಕೀಗಳು ತಮಿಳುನಾಡಿಗೆ ಹೋಗಿವೆ ಎಂಬ ಪ್ರಧಾನಿ ಮೋದಿ ಹೇಳಿಕೆಯು ಮತಗಳಿಗಾಗಿ ತಮಿಳರನ್ನು ದೂಷಿಸುವ ಪ್ರಯತ್ನವಾಗಿದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಕಿಡಿಕಾರಿದ್ದಾರೆ.

Narendra Modi, MK Stalin
ನರೇಂದ್ರ ಮೋದಿ, ಎಂ.ಕೆ.ಸ್ಟಾಲಿನ್ (IANS)
author img

By PTI

Published : May 21, 2024, 7:40 PM IST

ಚೆನ್ನೈ (ತಮಿಳುನಾಡು): ಒಡಿಶಾದಲ್ಲಿರುವ ಜಗನ್ನಾಥ ದೇವಾಲಯದ ಖಜಾನೆಯ ನಾಪತ್ತೆಯಾಗಿರುವ ಕೀಗಳು ತಮಿಳುನಾಡಿಗೆ ಹೋಗಿವೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತಗಳಿಗಾಗಿ ತಮಿಳರನ್ನು ದೂಷಿಸುವ ಪ್ರಯತ್ನ ಮತ್ತು ರಾಜ್ಯಗಳ ನಡುವೆ ಕ್ರೋಧದ ಭಾವನೆಯನ್ನು ಹುಟ್ಟಿಸುತ್ತಿದ್ದಾರೆ ಎಂದು ಮೋದಿ ವಿರುದ್ಧ ಸ್ಟಾಲಿನ್​ ವಾಗ್ದಾಳಿ ನೀಡಿದ್ದಾರೆ.

ಒಡಿಶಾದಲ್ಲಿ ಸೋಮವಾರ ಚುನಾವಣಾ ಭಾಷಣ ಮಾಡುತ್ತಾ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಮೋದಿ, ಪುರಿಯಲ್ಲಿರುವ ಜಗನ್ನಾಥ ದೇವಾಲಯವೂ ಈ ಸರ್ಕಾರದ ಕೈಯಲ್ಲಿ ಸುರಕ್ಷಿತವಾಗಿಲ್ಲ. ರತ್ನಭಂಡಾರದ ಕೀಗಳ ಮೇಲಿನ ನ್ಯಾಯಾಂಗ ಆಯೋಗದ ವರದಿಯನ್ನು ಬಿಜೆಡಿ ಏಕೆ ಮುಚ್ಚಿಡಲಾಗುತ್ತಿದೆ ಎಂಬುದನ್ನು ಒಡಿಶಾ ಜನತೆ ತಿಳಿಯಲು ಬಯಸುತ್ತದೆ ಎಂದಿದ್ದರು. ಈ ಮೂಲಕ ಕಳೆದ ಆರು ವರ್ಷಗಳಿಂದ ದೇವಸ್ಥಾನದ ರತ್ನ ಭಂಡಾರದ (ಖಜಾನೆ) ಕೀಗಳು ಕಾಣೆಯಾಗಿರುವ ಬಗ್ಗೆ ಪ್ರಶ್ನೆ ಎತ್ತಿದ್ದರು.

ಮುಂದುವರೆದು, ಈ ವಿಷಯದಲ್ಲಿ ಬಿಜೆಡಿಯ ಪಾತ್ರ ಅನುಮಾನಕ್ಕೆ ಕಾರಣವಾಗಿದೆ. ರತ್ನ ಭಂಡಾರದ ಕೀ ತಮಿಳುನಾಡಿಗೆ ಹೋಗಿದೆ ಎಂದು ಹೇಳಲಾಗಿದೆ. ಬಿಜೆಪಿ ಸರ್ಕಾರ ಜೂನ್ 10ರಂದು ಅಧಿಕಾರಕ್ಕೆ ಬಂದ ನಂತರ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತದೆ ಎಂದು ಮೋದಿ ಹೇಳಿದ್ದರು. ಖಜಾನೆಯ ಕೀಗಳು ತಮಿಳುನಾಡಿಗೆ ಹೋಗಿವೆ ಎಂಬ ಮೋದಿ ಹೇಳಿಕೆ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ತಮ್ಮ ದ್ವೇಷದ ಭಾಷಣಗಳಿಂದ ಜನರ ನಡುವೆ ದ್ವೇಷ ಮತ್ತು ರಾಜ್ಯಗಳ ನಡುವೆ ಕ್ರೋಧದ ಭಾವನೆಯನ್ನು ಸೃಷ್ಟಿಸುತ್ತಿದ್ದಾರೆ. ಮೋದಿ ಭಾಷಣವು ಒಡಿಶಾ ರಾಜ್ಯದೊಂದಿಗೆ ಉತ್ತಮ ಸಂಬಂಧ ಮತ್ತು ಸ್ನೇಹವನ್ನು ಹೊಂದಿರುವ ತಮಿಳುನಾಡು ಜನರನ್ನು ಅವಮಾನಿಸುವ ಮತ್ತು ನೋಯಿಸುವುದರ ಜೊತೆಗೆ ಕೋಟ್ಯಂತರ ಜನರು ಪೂಜಿಸುವ ಭಗವಾನ್ ಜಗನ್ನಾಥನಿಗೂ ಅವಮಾನಿಸುವುದಕ್ಕೆ ಸಮಾನವಾಗಿದೆ ಎಂದು ಸ್ಟಾಲಿನ್ ಟೀಕಿಸಿದ್ದಾರೆ.

ಮುಂದುವರೆದು, ಪ್ರಧಾನಿ ಮೋದಿ ತಮಿಳುನಾಡಿನ ಜನರನ್ನು ಕಳ್ಳರು ದೇವಸ್ಥಾನದ ಸಂಪತ್ತನ್ನು ಕದಿಯುತ್ತಾರೆ ಎಂದು ಹೀಗಳೆಯಬಹುದೇ?. ಇದು ತಮಿಳುನಾಡಿಗೆ ಅವಮಾನ ಮಾಡಿದಂತಲ್ಲವೇ?, ತಮಿಳರ ಬಗ್ಗೆ ಇಷ್ಟೊಂದು ದ್ವೇಷ ಏಕೆ ಎಂದು ಸಿಎಂ ಪ್ರಶ್ನಿಸಿದ್ದಾರೆ. ಅಲ್ಲದೇ, ತಮಿಳುನಾಡಿನಲ್ಲಿ ತಮಿಳು ಭಾಷೆ ಮತ್ತು ಜನರನ್ನು ಹೊಗಳುವ ಮೋದಿಯವರು, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ಮತಕ್ಕಾಗಿ ಈ ಹೇಳಿಕೆ ನೀಡುತ್ತಿದ್ದಾರೆ. ಮೋದಿಯವರ ದ್ವಂದ್ವ ನೀತಿಯನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ. ಮತದಾನಕ್ಕಾಗಿ ತಮಿಳುನಾಡು ಮತ್ತು ತಮಿಳರನ್ನು ನಿಂದಿಸುವುದನ್ನು ಪ್ರಧಾನಿ ನಿಲ್ಲಿಸಬೇಕು ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಪಶ್ಚಿಮ ಬಂಗಾಳ ಬಿಜೆಪಿ ಅಭ್ಯರ್ಥಿ, ಮಾಜಿ ಜಡ್ಜ್​​ಗೆ 24 ಗಂಟೆ ಪ್ರಚಾರ ನಡೆಸದಂತೆ ನಿರ್ಬಂಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.