ETV Bharat / bharat

ಸನಾತನ ಮಂಡಳಿ ಸ್ಥಾಪಿಸುವಂತೆ ಆಧ್ಯಾತ್ಮಿಕ ಗುರು ದೇವಕಿನಂದನ್ ಠಾಕೂರ್ ಒತ್ತಾಯ

ಭಾರತದಲ್ಲಿ ಸನಾತನ ಬೋರ್ಡ್​ ಸ್ಥಾಪಿಸಬೇಕು ಎಂದು ದೇವಕಿನಂದನ್ ಠಾಕೂರ್ ಆಗ್ರಹಿಸಿದ್ದಾರೆ.

ಆಧ್ಯಾತ್ಮಿಕ ಗುರು ದೇವಕಿನಂದನ್ ಠಾಕೂರ್
ಆಧ್ಯಾತ್ಮಿಕ ಗುರು ದೇವಕಿನಂದನ್ ಠಾಕೂರ್ (IANS)
author img

By IANS

Published : Nov 11, 2024, 5:33 PM IST

ನವದೆಹಲಿ: ಭಾರತದಲ್ಲಿ 'ಸನಾತನ ಮಂಡಳಿ' ಸ್ಥಾಪಿಸಬೇಕು ಎಂದು ಖ್ಯಾತ ಆಧ್ಯಾತ್ಮಿಕ ಗುರು ದೇವಕಿನಂದನ್ ಠಾಕೂರ್ ಸೋಮವಾರ ಆಗ್ರಹಿಸಿದ್ದಾರೆ. ಇಸ್ಲಾಮಿಕ್ ಧರ್ಮಗುರು ತೌಕೀರ್ ರಝಾ ಅವರು ಪ್ರಚೋದನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ದೇವಕಿನಂದನ್ ಠಾಕೂರ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಸ್ಲಿಂ ಯುವಕರು ಒಗ್ಗೂಡಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುವಂತೆ ರಝಾ ಭಾನುವಾರ ಕರೆ ನೀಡಿದ್ದಾರೆ. ಜೈಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಝಾ, "ಕಿಸಿ ಕೆ ಬಾಪ್ ಕಿ ಔಕಾತ್ ನಹೀಂ ಕಿ ವೋ ಹಮಾರಿ ಸಂಪತಿ ಜಬ್ತ್ ಕರ್ ಸಕೆ (ನಮ್ಮ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಯಾರಿಗೂ ಧೈರ್ಯವಿಲ್ಲ)" ಎಂದು ವಕ್ಫ್ ಆಸ್ತಿಗಳ ವಿಷಯವನ್ನು ಉಲ್ಲೇಖಿಸಿ ಅವರು ಹೇಳಿದರು.

"ನಾವು ಬೀದಿಗಿಳಿದ ದಿನ, ನಿಮ್ಮ ಆತ್ಮ ನಡುಗುತ್ತದೆ. ನಮ್ಮ ಯುವಕರು ಹೇಡಿಗಳಲ್ಲ. ನಾವು ನಮ್ಮ ಯುವಕರನ್ನು ನಾವು ನಿಯಂತ್ರಣದಲ್ಲಿರಿಸಿದ್ದೇವೆ. ಆದರೆ ಅವರು ನಿಯಂತ್ರಣ ಮೀರಿದ ದಿನ, ನೀವು ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ" ಎಂದು ರಝಾ ಸಭೆಯಲ್ಲಿ ಹೇಳಿದ್ದು ದೊಡ್ಡ ವಿವಾದ ಸೃಷ್ಟಿಸಿದೆ.

ಇದುವೇ ನಮ್ಮ ಮೊದಲ ಬೇಡಿಕೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವಕಿನಂದನ್ ಠಾಕೂರ್, "ನಾವು ಸನಾತನ ಧರ್ಮ ಸಂಸದ್ ಪರವಾಗಿ ಮೂರು ಬೇಡಿಕೆಗಳನ್ನು ಮುಂದಿಡುತ್ತಿದ್ದೇವೆ. ನಮ್ಮ ಮೊದಲ ಬೇಡಿಕೆ 'ಸನಾತನ ಮಂಡಳಿ' ಸ್ಥಾಪಿಸುವುದು, ನಮ್ಮ ಎರಡನೇ ಬೇಡಿಕೆ 'ಕೃಷ್ಣ ಭೂಮಿ ಮಂದಿರ' ನಿರ್ಮಿಸುವುದು ಮತ್ತು ತಿರುಪತಿ ಬಾಲಾಜಿ ದೇವಾಲಯದ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದು ನಮ್ಮ ಮೂರನೇ ಬೇಡಿಕೆಯಾಗಿದೆ ಎಂದರು. ಅಸಂವಿಧಾನಿಕ ಪದ ಬಳಸಿದ ರಝಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

"ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಮತ್ತು ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಸರ್ಕಾರವನ್ನು ವಿನಂತಿಸುತ್ತಿದ್ದೇನೆ. ರಝಾ 100 ಕೋಟಿ ಹಿಂದೂಗಳನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಕೆಲವು ಜನರು ಬಾಂಗ್ಲಾದೇಶದಂತಹ ಪರಿಸ್ಥಿತಿಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಏತನ್ಮಧ್ಯೆ, ಜೈಪುರದ ಮುಸ್ಲಿಂ ವಿದ್ವಾಂಸರು ಮುಂಬರುವ ಸಂಸತ್ ಅಧಿವೇಶನಕ್ಕೆ ಸ್ವಲ್ಪ ಮುಂಚಿತವಾಗಿ ನವೆಂಬರ್ 24 ರಂದು ದೆಹಲಿಗೆ ಬೃಹತ್ ಜಾಥಾ ನಡೆಸುವ ಯೋಜನೆ ಘೋಷಿಸಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ಪ್ರತಿಭಟನೆಯಾಗಿ ಈ ಮೆರವಣಿಗೆಯನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ : ಕಾಶ್ಮೀರದಲ್ಲಿ 370ನೇ ವಿಧಿ ಮರು ಜಾರಿಯಾಗುವುದಿಲ್ಲ: ಜಗದ್ಗುರು ರಾಮಭದ್ರಾಚಾರ್ಯ ಮಹಾರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.